ಐಶ್ವರ್ಯಾ ರಜನೀಕಾಂತ್‌ ನಿರ್ದೇಶನದ ‘ಲಾಲ್‌ ಸಲಾಮ್‌’ ತಮಿಳು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಇದೊಂದು ಕ್ರೀಡಾ ಸಿನಿಮಾವಾಗಿದ್ದು, ಧಾರ್ಮಿಕ ಸಾಮರಸ್ಯ, ಕೋಮುಗಲಬೆಯಂತಹ ವಿಷಯಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ರಜನೀಕಾಂತ್‌ ವಿಶೇಷ ಪಾತ್ರದಲ್ಲಿ ನಟಿಸಿರುವ ಸಿನಿಮಾ ನಾಡಿದ್ದು ಫೆ. 9ರಂದು ತೆರೆಕಾಣುತ್ತಿದೆ.

ರಜನೀಕಾಂತ್ ಅಭಿನಯದ ‘ಲಾಲ್‌ ಸಲಾಮ್‌’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರವನ್ನು ರಜಿನೀಕಾಂತ್ ಪುತ್ರಿ ಐಶ್ವರ್ಯಾ ರಜನೀಕಾಂತ್ ನಿರ್ದೇಶಿಸಿದ್ದು, ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಟ್ರೇಲರ್‌ನಲ್ಲಿ ವಿವಿಧ ಸಮುದಾಯಗಳ ನಡುವೆ ಶಾಂತಿ ಕಾಪಾಡುವಂತಹ ಮೊಯಿದ್ದೀನ್‌ ಭಾಯಿ ಪಾತ್ರದಲ್ಲಿ ರಜನೀಕಾಂತ್‌ ಕಾಣಿಸುತ್ತಾರೆ. ಇದೊಂದು ಕ್ರೀಡಾ ಸಿನಿಮಾವಾಗಿದ್ದು, ಧಾರ್ಮಿಕ ಸಾಮರಸ್ಯ, ಕೋಮುಗಲಬೆಯಂತಹ ವಿಷಯಗಳನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಚಿತ್ರದಲ್ಲಿ ಕಪಿಲ್‌ ದೇವ್‌ ಕ್ರಿಕೆಟ್‌ ಕೋಚ್‌ ಆಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೈದಾನದಲ್ಲಿ ಕಪಿಲ್‌ ಮತ್ತು ರಜನಿ ಒಟ್ಟಿಗೆ ಕುಳಿತು ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸುತ್ತಿರುವುದನ್ನು ಟ್ರೇಲರ್‌ನಲ್ಲಿ ಕಾಣಬಹುದು.

ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಿರುವ ಈ ಚಲನಚಿತ್ರದಲ್ಲಿ ಸೆಂಥಿಲ್, ಜೀವಿತಾ, ತಂಬಿ ರಾಮಯ್ಯ, ಅನಂತಿಕಾ ಸನಿಲ್‌ಕುಮಾರ್, ವಿವೇಕ್ ಪ್ರಸನ್ನ, ತಂಗದುರೈ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು Lyca Productions ಬ್ಯಾನರ್‌ ಅಡಿಯಲ್ಲಿ ಸುಭಾಸ್ಕರನ್‌ ನಿರ್ಮಿಸಿದ್ದಾರೆ. ವಿಷ್ಣು ರಂಗಸಾಮಿ ಛಾಯಾಗ್ರಹಣ, ಪ್ರವೀಣ್‌ ಭಾಸ್ಕರ್ ಸಂಕಲನ ಚಿತ್ರಕ್ಕಿದೆ. ನಾಡಿದ್ದು ಫೆಬ್ರವರಿ 9ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here