ಸುದೀಪ್ತೋ ಸೇನ್‌ ನಿರ್ದೇಶನದ ‘ಬಸ್ತರ್‌’ ಹಿಂದಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ನಟಿ ಅದಾ ಶರ್ಮಾ ಅವರು IPS ನೀರಜಾ ಮಾಧವನ್‌ ಪಾತ್ರ ನಿರ್ವಹಿಸಿದ್ದಾರೆ. ಯಶಸ್ವೀ ‘ದಿ ಕೇರಳ ಸ್ಟೋರಿ’ ಹಿಂದಿ ಸಿನಿಮಾ ಮಾಡಿದ್ದ ತಂಡವೇ ಈ ಚಿತ್ರಕ್ಕೆ ಕೆಲಸ ಮಾಡಿದೆ.

ಅದಾ ಶರ್ಮಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಬಸ್ತಾರ್‌ – ದಿ ನಕ್ಸಲ್‌ ಸ್ಟೋರಿ’ ಹಿಂದಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ‘ದಿ ಕೇರಳ ಸ್ಟೋರಿ’ ಚಿತ್ರತಂಡ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಮರಳಿದೆ. ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದು, ವಿಪುಲ್‌ ಅಮೃತ್‌ ಲಾಲ್‌ ಶಾ ನಿರ್ಮಿಸಿದ್ದಾರೆ. ಅದಾ ಶರ್ಮಾ ಚಿತ್ರದಲ್ಲಿ ಐಪಿಎಸ್ ನೀರಜಾ ಮಾಧವನ್ ಪಾತ್ರ ನಿರ್ವಹಿಸಿದ್ದಾರೆ. ‘ಪಾಕಿಸ್ತಾನದೊಂದಿಗಿನ ಸಂಘರ್ಷಕ್ಕಿಂತ ಹೆಚ್ಚು ಭಾರತೀಯ ಸೈನಿಕರು ಬಂಡಾಯದಿಂದ ಸಾವನ್ನಪ್ಪಿದ್ದಾರೆ. ಮೋಸದ ಬುದ್ಧಿಜೀವಿಗಳನ್ನು ಹೊಡೆದುರುಳಿಸಲು ಹಾಗೂ ಗಲ್ಲಿಗೇರಿಸಲು ನಾನು ಸಿದ್ಧಳಿದ್ದೇನೆ’ ಎನ್ನುವ ನೀರಜಾ ನಿರೂಪಣೆಯನ್ನು ಟ್ರೇಲರ್‌ನಲ್ಲಿ ಕಾಣಬಹುದು.

A Vipul Amrutlal Shah Production ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು Sunshine Pictures Pvt. Ltd ಪ್ರಸ್ತುತ ಪಡಿಸಿದೆ. ಸುದೀಪ್ತೋ ಸೇನ್, ಅಮರನಾಥ್ ಝಾ ಕಥೆ ರಚಿಸಿದ್ದು, ಅಮರನಾಥ್ ಝಾ, ಸುದೀಪ್ತೋ ಸೇನ್ ಮತ್ತು ವಿಪುಲ್ ಅಮೃತಲಾಲ್ ಶಾ ಚಿತ್ರಕಥೆ ರಚಿಸಿದ್ದಾರೆ. ಚಲನಚಿತ್ರ ಮಾರ್ಚ್‌ 15ರಂದು ತೆರೆಕಾಣಲಿದೆ. ಸಿನಿಮಾದಲ್ಲಿ ಇಂದಿರಾ ತಿವಾರಿ, ವಿಜಯ್ ಕೃಷ್ಣ, ಯಶಪಾಲ್ ಶರ್ಮಾ, ರೈಮಾ ಸೇನ್ ಮತ್ತು ಶಿಲ್ಪಾ ಶುಕ್ಲಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಘುಲ್ ಹೆರಿಯನ್ ಧರುಮನ್ ಛಾಯಾಗ್ರಹಣ, ದೇವ್ ರಾವ್ ಜಾಧವ್ ಸಂಕಲನ, ಬಿಶಾಖ್ ಜ್ಯೋತಿ ಮಜುಂದಾರ್ ಹಿನ್ನೆಲೆ ಸಂಗೀತ, ಅಮರನಾಥ್ ಝಾ ಮತ್ತು ಅನಂತ್ ಸಾಹಿತ್ಯ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here