ಐಶ್ವರ್ಯಾ ರಜನೀಕಾಂತ್‌ ನಿರ್ದೇಶನದ ‘ಲಾಲ್‌ ಸಲಾಮ್‌’ ತಮಿಳು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಮೊಯಿದ್ದೀನ್‌ ಭಾಯ್‌ ಪಾತ್ರದಲ್ಲಿ ರಜನೀಕಾಂತ್‌ ನಟಿಸಿದ್ದಾರೆ. ಟೀಸರ್‌, ಕೋಮು ಸೌಹಾರ್ಧತೆ ಸಾರುವ ಕತೆಯ ಸುಳಿವು ನೀಡುತ್ತದೆ. 2024ರ ಸಕ್ರಾಂತಿಗೆ ಸಿನಿಮಾ ತೆರೆಕಾಣಲಿದೆ.

ರಜನೀಕಾಂತ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಲಾಲ್‌ ಸಲಾಮ್‌’ ತಮಿಳು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನೀಕಾಂತ್ ನಿರ್ದೇಶನದ ಈ ಚಿತ್ರದಲ್ಲಿ, ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಹಳ್ಳಿಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಗಳ ದೃಶ್ಯದೊಂದಿಗೆ ಟೀಸರ್‌ ಆರಂಭವಾಗುತ್ತದೆ. ಇದರ ಮಧ್ಯೆ ಕೋಮು ಘರ್ಷಣೆಗಳು ನಡೆಯುತ್ತವೆ. ತಕ್ಷಣ ಆ ಹಳ್ಳಿಯಲ್ಲಿ ಸಾಮಾನ್ಯ ವಿಷಯಗಳು ಬದಲಾಗಿ ಗಲಭೆಯಂತಹ ದೃಶ್ಯಗಳು ಆರಂಭವಾಗುತ್ತವೆ. ರಜನೀಕಾಂತ್‌ ಮೊಯಿದ್ದೀನ್‌ ಭಾಯ್ ಆಗಿ ಮಧ್ಯಪ್ರವೇಶಿಸಿ ಗೂಂಡಾಗಳೊಂದಿಗೆ ಹೋರಾಡಿದ್ದಾರೆ. ‘ನೀವು ಕ್ರೀಡೆಯೊಂದಿಗೆ ಧರ್ಮವನ್ನು ಬೆರೆಸಿ, ಮಕ್ಕಳ ಮನಸ್ಸನ್ನು ವಿಷಪೂರಿತಗೊಳಿಸಿದ್ದೀರಿ’ ಎಂದು ರಜಿನಿಕಾಂತ್‌ ಟೀಸರ್‌ ಕೊನೆಯಲ್ಲಿ ಹೇಳುತ್ತಾರೆ. ‌

ಸಿನಿಮಾದ ಟೀಸರ್‌ ಅನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ಐಶ್ವರ್ಯಾ, ‘ನಿಮ್ಮೊಂದಿಗೆ ಚಿತ್ರ ರಚಿಸಿರುವುದು ಒಂದು ಜಾದೂವಿನಂತೆ ಭಾಸವಾಗುತ್ತಿದೆ ಅಪ್ಪಾ’ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಎ ಆರ್ ರಹಮಾನ್ ಸಂಗೀತ ಸಂಯೋಜಿಸಿರುವ ಈ ಚಿತ್ರದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್, ಸೆಂಥಿಲ್, ಜೀವಿತಾ, ತಂಬಿ ರಾಮಯ್ಯ, ಅನಂತಿಕಾ ಸನಿಲ್‌ಕುಮಾರ್, ವಿವೇಕ್ ಪ್ರಸನ್ನ, ತಂಗದುರೈ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು Lyca Productions ಬ್ಯಾನರ್‌ ಅಡಿಯಲ್ಲಿ ಸುಭಾಸ್ಕರನ್‌ ಅವರು ನಿರ್ಮಿಸಿದ್ದಾರೆ. ವಿಷ್ಣು ರಂಗಸಾಮಿ ಛಾಯಾಗ್ರಹಣ, ಪ್ರವೀಣ್‌ ಭಾಸ್ಕರ್ ಸಂಕಲನ ಚಿತ್ರಕ್ಕಿದೆ. ಮುಂದಿನ ವರ್ಷ ಸಂಕ್ರಾಂತಿಗೆ ಸಿನಿಮಾ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here