ಲೋಕೇಶ್‌ ಕನಗರಾಜ್‌ ನಿರ್ದೇಶನದ ‘ಲಿಯೋ’ ಸಿನಿಮಾದ ಮೂರನೇ ಸಾಂಗ್‌ ಬಿಡುಗಡೆಯಾಗಿದೆ. ಅನಿರುದ್ಧ ರವಿಚಂದ್ರನ್‌ ಸಂಗೀತ ಸಂಯೋಜನೆಯ ಈ ಗೀತೆಗೆ ಜೆ ವಿ ಸುಧಾನ್ಶು ಮತ್ತು ಪ್ರಿಯಾ ಮಾಲಿ ದನಿಯಾಗಿದ್ದಾರೆ. ವಿಜಯ್‌ ಮತ್ತು ತ್ರಿಷಾ ಅವರ ಮೇಲೆ ಹಾಡು ಪಿಕ್ಚರೈಸ್‌ ಆಗಿದೆ.

ವಿಜಯ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಲಿಯೋ’ ಚಿತ್ರದ ಮೂರನೇ ಗೀತೆ ‘ಪ್ರೀತಿಯ ಆಯುಧ’ ಬಿಡುಗಡೆಯಾಗಿದೆ. ಕಾಶ್ಮೀರದ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿರುವ ಈ ಹಾಡಿನಲ್ಲಿ ವಿಜಯ್‍, ತ್ರಿಷಾ ಮುಂತಾದವರು ಕಾಣಿಸಿಕೊಂಡಿದ್ದು, ಜೆ ವಿ ಸುಧಾನ್ಶು ಮತ್ತು ಪ್ರಿಯಾ ಮಾಲಿ ಈ ಹಾಡನ್ನು ಹಾಡಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವರದರಾಜ್‍ ಚಿಕ್ಕಬಳ್ಳಾಪುರ ಸಾಹಿತ್ಯ ರಚಿಸಿದ್ದಾರೆ. ಸಿನಿಮಾವನ್ನು ಲೋಕೇಶ್‍ ಕನಗರಾಜ್‍ ಕತೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ‘ಮಾಸ್ಟರ್’ ಸಿನಿಮಾದ ನಂತರ ಲೋಕೇಶ್‍ ಕನಗರಾಜ್‍ ಮತ್ತು ವಿಜಯ್‍ ಜೊತೆಯಾಗಿ ಕೆಲಸ ಮಾಡಿರುವ ಎರಡನೇ ಚಿತ್ರವಿದು. ಸಂಜಯ್ ದತ್, ಅರ್ಜುನ್‌ ಸರ್ಜಾ, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಮ್ಯಾಥ್ಯೂ ಥಾಮಸ್, ಪ್ರಿಯಾ ಆನಂದ್, ಸ್ಯಾಂಡಿ, ಜನನಿ, ಗೌತಮ್ ಮೆನನ್, ಮಿಸ್ಕಿನ್ ಅಭಿರಾಮಿ ವೆಂಕಟಾಚಲಂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ PAN ಇಂಡಿಯಾ ಚಲನಚಿತ್ರವನ್ನು 7 Screen Studio ಮತ್ತು The Route ಬ್ಯಾನರ್‌ ಅಡಿ ಲಲಿತ್ ಕುಮಾರ್ ನಿರ್ಮಿಸಿದ್ದಾರೆ. ಅಕ್ಟೋಬರ್ 19ರಂದು ಮೂಲ ತಮಿಳು ಸೇರಿದಂತೆ ಹಿಂದಿ, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here