ನಾನಿ ನಟನೆಯ ‘ದಸರಾ’ ಪ್ಯಾನ್‌ ಇಂಡಿಯಾ ಸಿನಿಮಾದ ಫಸ್ಟ್‌ ಲುಕ್‌ ಮತ್ತು ‘Spark of #Dasara’ ವೀಡಿಯೋ ಬಿಡುಗಡೆಯಾಗಿದೆ. ಶ್ರೀಕಾಂತ್‌ ಒಡೆಲಾ ನಿರ್ದೇಶನದ ಚಿತ್ರದ ನಾಯಕಿಯಾಗಿ ಕೀರ್ತಿ ಸುರೇಶ್‌ ನಟಿಸುತ್ತಿದ್ದಾರೆ.

‘ಶ್ಯಾಮ್‌ ಸಿಂಗಾ ರಾಯ್‌’ ಚಿತ್ರದ ಯಶಸ್ಸು ನಟ ನಾನಿ ಅವರನ್ನು ಭಾರತದ ಇತರೆ ಭಾಷೆಗಳ ಸಿನಿಪ್ರೇಕ್ಷಕರಿಗೂ ಪರಿಚಯಿಸಿತು. ನಾನಿ ಈಗ ಮಾಸ್‌ ಚಿತ್ರವೊಂದರ ಮೂಲಕ ಪ್ಯಾನ್‌ ಇಂಡಿಯಾ ಪ್ರೇಕ್ಷಕರನ್ನು ತಲುಪುವ ಹಾದಿಯಲ್ಲಿದ್ದಾರೆ. ಅವರ ‘ದಸರಾ’ ಸಿನಿಮಾ ಸೆಟ್ಟೇರಿದೆ. ಚಿತ್ರದ ಫಸ್ಟ್ ಲುಕ್ ಹಾಗೂ ವಿಡಿಯೋವೊಂದು ಬಿಡುಗಡೆಯಾಗಿದೆ. ವಿಭಿನ್ನ ಬಗೆಯ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿರುವ ನಾನಿಗೆ ಇದು ಮತ್ತೊಂದು ಪ್ರಯೋಗ. ಶ್ರೀಕಾಂತ್ ಒಡೆಲಾ ನಿರ್ದೇಶನದ ಈ ಮಾಸ್ – ಎಂಟರ್‌ಟೇನರ್‌ ತೆಲುಗು ಜೊತೆಗೆ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಕಾಣಲಿದೆ.

ಸುಧಾಕರ್ ಚೆರುಕುರಿ ‘ದಸರಾ’ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಹಾಗೂ ಗ್ಲಿಂಪ್ಸ್‌ನಲ್ಲಿ ನಾನಿ ಖಡಕ್ ಲುಕ್‌ನಲ್ಲಿ ಮಿಂಚಿದ್ದಾರೆ. ಲುಂಗಿ ತೊಟ್ಟು, ಕೈಯಲ್ಲಿ ಸಿಗರೇಟು ಹಿಡಿದು ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಗೋದಾವರಿ ಖನಿಯಲ್ಲಿರುವ ಸಿಂಗರೇಣಿ ಕಲ್ಲಿದ್ದಲು ಗಣಿಯಲ್ಲಿರುವ ಹಳ್ಳಿಯೊಂದರಲ್ಲಿ ನಡೆಯುವ ಪಕ್ಕಾ ಮಾಸ್ ಆಕ್ಷನ್ ಸಿನಿಮಾವಾದ ಇತರೆ ಪ್ರಮುಖ ಪಾತ್ರಗಳಲ್ಲಿ ಸಮುದ್ರಕನಿ, ಸಾಯಿ ಕುಮಾರ್, ಜರೀನಾ ವಹಾಬ್ ನಟಿಸಲಿದ್ದಾರೆ. ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ, ನವೀನ್ ನೂಲಿ ಸಂಕಲನ, ಅವಿನಾಶ್ ಕೊಲ್ಲ ನಿರ್ಮಾಣ ವಿನ್ಯಾಸ ದಸರಾ ಸಿನಿಮಾಗಿದೆ.

Previous article‘KGF2’ ಲಿರಿಕಲ್‌ ಸಾಂಗ್‌ | ಗಮನ ಸೆಳೆಯುವ ಯಶ್‌ ‘ತೂಫಾನ್‌’
Next articleRGV ಶಿಷ್ಯ ಕಿಶೋರ್‌ ಭಾರ್ಗವ್‌ ಸಿನಿಮಾ ‘ಸ್ಟಾಕರ್’ ಮಾರ್ಚ್‌ 31ಕ್ಕೆ

LEAVE A REPLY

Connect with

Please enter your comment!
Please enter your name here