ಲಿಖಿತ್‌ ಸೂರ್ಯ ನಟನೆ, ನಿರ್ಮಾಣದ ‘ರೂಮ್‌ ಬಾಯ್‌’ ಟೀಸರ್‌ ಅನ್ನು ಇಂದು ಧನಂಜಯ್‌ ಬಿಡುಗಡೆ ಮಾಡಿದ್ದಾರೆ. ರವಿ ನಾಗಡದಿನ್ನಿ ನಿರ್ದೇಶನದ ಸೈಕಾಲಾಜಿಕಲ್‌ ಸಸ್ಪೆನ್ಸ್‌ ಚಿತ್ರವಿದು.

ಯುವ ಪ್ರತಿಭಾವಂತರ ತಂಡದಿಂದ ತಯಾರಾಗಿರುವ ‘ರೂಮ್‌ ಬಾಯ್‌’ ಟೀಸರ್‌ ಇಂದು ಬಿಡುಗಡೆಯಾಗಿದೆ. ನಟ ಡಾಲಿ ಧನಂಜಯ್‌ ಸಿನಿಮಾದ ಟೀಸರ್ ರಿಲೀಸ್ ಮಾಡಿದರು. ಸಂಭಾಷಣೆಕಾರನಾಗಿ, ಸಹಾಯಕ ನಿರ್ದೇಶಕನಾಗಿ 10ಕ್ಕೂ ಹೆಚ್ಚು ವರ್ಷಗಳ ಅನುಭವವಿರುವ ರವಿ ನಾಗಡದಿನ್ನಿ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಈ ಹಿಂದೆ ಅಪರೇಷನ್ ನಕ್ಷತ್ರ, ಲೈಫ್ ಸೂಪರ್, ಗ್ರಾಮ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಲಿಖಿಲ್ ಸೂರ್ಯ ಚಿತ್ರದ ಹೀರೋ ಆಗಿ ನಟಿಸಿದ್ದಾರೆ. ಚಿತ್ರದ ನಿರ್ಮಾಣದ ಹೊಣೆಯೂ ಅವರದೆ. ರಕ್ಷಾ ಚಿತ್ರದ ನಾಯಕಿ. ಉಳಿದಂತೆ ಅಶ್ವಿನ್ ಹಾಸನ್, ಚೇತನ್ ದುರ್ಗಾ, ವರ್ಧನ್ ತೀರ್ಥಹಳ್ಳಿ, ಯಶ್ ಶೆಟ್ಟಿ, ರಘು ಶಿವಮೊಗ್ಗ, ವಜರಂಗ ಶೆಟ್ಟಿ, ಪದ್ಮಿನಿ, ರಾಹುಲ್,ರೋಷನ್, ರಜನಿ ಇತರರು ಅಭಿನಯಿಸಿದ್ದಾರೆ. ಧನಪಾಲ್ ನಾಯಕ್ ಛಾಯಾಗ್ರಹಣ, ರೋಣದ ಬಕ್ಕೇಶ್ ಸಂಗೀತ ಸಂಯೋಜನೆ ಇರುವ ಚಿತ್ರಕ್ಕೆ ಹಿರಿಯ ಸಿನಿಮಾ ಪತ್ರಕರ್ತ ವಿಜಯ್ ಭರಮಸಾಗರ ಕ್ರಿಯೇಟಿವ್‌ ಹೆಡ್‌ ಆಗಿ ಕೆಲಸ ಮಾಡಿದ್ದಾರೆ. ಐ ಕ್ಯಾನ್‌ ಪ್ರೊಡಕ್ಷನ್ಸ್‌ನಡಿ ಲಿಖಿತ್ ಸೂರ್ಯ ಸಿನಿಮಾ ನಿರ್ಮಿಸಿರುವ ಸಿನಿಮಾ ಏಪ್ರಿಲ್‌ ಇಲ್ಲವೇ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here