‘ಲೊಲ್ಲಾಪಲೂಜಾ’ ಸಂಗೀತೋತ್ಸವ ಮುಂದಿನ ವರ್ಷ ಜನವರಿ 27, 28ರಂದು ಮುಂಬೈನ ಮಹಾಲಕ್ಷ್ಮೀ ರೇಸ್‌ಕೋರ್ಸ್‌ನಲ್ಲಿ ನಡೆಯಲಿದೆ. ಈ ಬಹುಪ್ರಕಾರದ ಸಂಗೀತ ಉತ್ಸವದಲ್ಲಿ ಜಗತ್ತಿನ ಖ್ಯಾತನಾಮ ಸಂಗೀತಗಾರರು 20 ಗಂಟೆಗಳ ಲೈವ್‌ ಸಂಗೀತ ಪ್ರಸ್ತುತಪಡಿಸಲಿದ್ದಾರೆ.

ವಿಶ್ವದ ಅತಿದೊಡ್ಡ ಸಂಗೀತ ಉತ್ಸವಗಳಲ್ಲಿ ಒಂದಾದ ‘ಲೊಲ್ಲಾಪಲೂಜಾ’ (Lollapalooza) ಈ ಭಾರಿ ಭಾರತದಲ್ಲಿ ಜರುಗಲಿದೆ. 2024, ಜನವರಿ 27 ಮತ್ತು 28ರಂದು ಮುಂಬೈನ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಬಹುಪ್ರಕಾರದ ಸಂಗೀತ ಉತ್ಸವವಿದು. ಭಾರತದಲ್ಲಿ ತನ್ನ ಎರಡನೇ ಆವೃತ್ತಿಯನ್ನು ಜಾಗತಿಕವಾಗಿ ಮತ್ತು ಸ್ಥಳೀಯವಾಗಿ 20 ಗಂಟೆಗಳ ಲೈವ್ ಸಂಗೀತದೊಂದಿಗೆ ಪ್ರಸ್ತುತಪಡಿಸಲು ಸಜ್ಜಾಗಿದೆ. ಟಿಕೇಟಿಂಗ್ ಪ್ಲಾಟ್‌ಫಾರ್ಮ್ Book My Showನ ಲೈವ್ ಈವೆಂಟ್‌ಗಳು ಇದರ ವಿಭಾಗವಾಗಿದ್ದು, ಜಾಗತಿಕ ನಿರ್ಮಾಪಕರೊಟ್ಟಿಗೆ ಭಾರತೀಯ ಆವೃತ್ತಿಯ ಪ್ರವರ್ತಕ ಮತ್ತು ಸಹ-ನಿರ್ಮಾಪಕರಾಗಿ ಅಮೇರಿಕಾದ ಗಾಯಕ ಪೆರ್ರಿ ಫಾರೆಲ್ ಮತ್ತು C3 ಪ್ರೆಸೆಂಟ್ಸ್‌ಗಳು ಈ ಉತ್ಸವದ ಭಾಗವಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಳೆದ ಬಾರಿ ‘Lollapalooza India’ ಎರಡು ದಿನಗಳ ಸಂಗೀತ ಉತ್ಸವವು ಮುಂಬೈನಲ್ಲಿ 2023ರ ಜನವರಿ 28 – 29ರಂದು ಜರುಗಿತ್ತು. ಜಾಗತಿಕ ಮತ್ತು ಭಾರತೀಯ ಸಂಗೀತ ಕಲಾವಿದರ ಅತ್ಯಾಕರ್ಷಕ ತಂಡವು ಉತ್ಸವದಲ್ಲಿ ಪ್ರದರ್ಶನ ನೀಡಿತ್ತು. ಭಾರತವು 2023ರಲ್ಲಿ ‘Lollapalooza’ವನ್ನು ಆಯೋಜಿಸಿದ ಏಷ್ಯಾದ ಮೊದಲ ದೇಶವಾಗಿದೆ. 1991ರಲ್ಲಿ ಚಿಕಾಗೋದಲ್ಲಿ ಹುಟ್ಟಿಕೊಂಡ ‘Lollapalooza’ ವಿಶ್ವದ ಅತಿದೊಡ್ಡ ಸಂಗೀತ ಉತ್ಸವಗಳಲ್ಲಿ ಒಂದಾಗಿದೆ. ಇದು ‘ರಾಕ್’, ‘ಹೆವಿ ಮೆಟಲ್’, ‘ಪಂಕ್ ರಾಕ್’, ‘ಹಿಪ್ ಹಾಪ್’ ಮತ್ತು ‘ಎಲೆಕ್ಟ್ರಾನಿಕ್ ನೃತ್ಯ’ ಪ್ರಕಾರದ ಸಂಗೀತವನ್ನು ಒಳಗೊಂಡಿವೆ ಇವುಗಳ ಜೊತೆಗೆ ದೃಶ್ಯ ಕಲೆಗಳನ್ನು ಸಹ ಈ ಕಾರ್ಯಕ್ರಮವು ಒಳಗೊಂಡಿದೆ. ವ್ಯವಹಾರಕ್ಕಷ್ಟೇ ಸೀಮಿತವಾಗದ, ಸಾಮಾಜಿಕ ಉದ್ದೇಶಗಳಿಗೆ ಮೀಸಲಾದ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ. ಚಿಕಾಗೋದ ಗ್ರಾಂಟ್ ಪಾರ್ಕ್‌ನಲ್ಲಿ ಪ್ರತಿ ವರ್ಷ ನಡೆಯುವ ಈ ಉತ್ಸವದಲ್ಲಿ 4 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಳ್ಳುತ್ತಿದ್ದಾರೆ. ಈ ಉತ್ಸವ ಅಮೇರಿಕ ದೇಶವನ್ನು ಹೊರತುಪಡಿಸಿ ಚಿಲಿ, ಬ್ರೆಜಿಲ್, ಫ್ರಾನ್ಸ್, ಜರ್ಮನಿ ಮತ್ತು ಇತರೆ ರಾಷ್ಟ್ರಗಳಲ್ಲಿಯೂ ಆಯೋಜನೆಗೊಂಡಿದೆ.

LEAVE A REPLY

Connect with

Please enter your comment!
Please enter your name here