ನಿಶ್ಚಿತ್‌ ಕೊರೋಡಿ ಮತ್ತು ದೀಪಿಕಾ ಆರಾಧ್ಯ ನಟನೆಯ ‘Supplier ಶಂಕರ’ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ರಂಜಿತ್ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿರುವ ಚಿತ್ರವನ್ನು ರಂಜಿತ್‌ ಸಿಂಗ್‌ ರಜಪೂತ್‌ ನಿರ್ದೇಶಿಸಿದ್ದಾರೆ.

ರಂಜಿತ್‌ ಸಿಂಗ್‌ ರಜಪೂತ್‌ ನಿರ್ದೇಶನದ ‘Supplier ಶಂಕರ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಪೊಲೀಸ್ ಸ್ಟೇಷನ್‌ ದೃಶ್ಯದ ಮೂಲಕ ತೆರೆದುಕೊಳ್ಳುವ ಮೋಷನ್ ಪೋಸ್ಟರ್ ಕುತೂಹಲ ಹುಟ್ಟುಹಾಕಿದೆ. ಮೈಗೆ ರಕ್ತ ಮೆತ್ತಿಸಿಕೊಂಡ ನಾಯಕ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಗಂಟುಮೂಟೆ’, ‘ಟಾಮ್ ಅಂಡ್ ಜೆರ್ರಿ’ ಸಿನಿಮಾಗಳ ಮೂಲಕ ಜನರಿಗೆ ಪರಿಚಯವಾಗಿರುವ ನಿಶ್ಚಿತ್ ಕೊರೋಡಿ ಈ ಚಿತ್ರದ ನಾಯಕ. ‘ಲಗೋರಿ’ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ ಹಿರೋಯಿನ್‌. ತ್ರಿನೇತ್ರ ಫಿಲ್ಮಂಸ್ ಸಂಸ್ಥೆ ಬ್ಯಾನರ್‌ನಡಿ ಎಂ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ನಿರ್ಮಿಸಿರುವ ಚಿತ್ರವನ್ನು ರಂಜಿತ್‌ ಸಿಂಗ್‌ ರಜಪೂತ್‌ ನಿರ್ದೇಶಿಸಿದ್ದಾರೆ.

ಬೆಂಗಳೂರು ಸುತ್ತಮುತ್ತ ಸಿನಿಮಾದ ಚಿತ್ರೀಕರಣ ನಡೆಸಲಾಗಿದ್ದು, ಟೈಟಲ್ ಹೇಳುವಂತೆ ಒಬ್ಬ ಬಾರ್ Supplier ಸುತ್ತಾ ಇಡೀ ಸಿನಿಮಾ ಸಾಗುತ್ತದೆ. ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ, ನವೀನ್ ಡಿ ಪಡೀಲ್ ಸೇರಿದಂತೆ ಒಂದಷ್ಟು ಹೊಸಬರು ಚಿತ್ರದಲ್ಲಿದ್ದಾರೆ. ರಂಜಿತ್ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಗೀತಸಾಹಿತ್ಯದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ವಿಜಯ್ ಪ್ರಕಾಶ್, ‘ಅಮ್ಮ ನನ್ನೀ ಈ ಜನುಮ’ ಖ್ಯಾತಿಯ ಸುನಿಲ್ ಕಶ್ಯಪ್, ಮೋಹನ್ ಬಿನ್ನಿಪೇಟೆ, ಸಂತೋಷ್ ವೆಂಕಿ, ನಕುಲ್ ಅಭಯಂಕರ್‌, ಐಶ್ವರ್ಯ ರಂಗರಾಜನ್ ಹಾಡುಗಳಿಗೆ ದನಿಯಾಗಿದ್ದು, ಆರ್ ಬಿ ಭರತ್ ಸಂಗೀತ ನೀಡಿದ್ದಾರೆ. ಸತೀಶ್ ಚಂದ್ರಯ್ಯ ಸಂಕಲನ, ಸತೀಶ್ ಕುಮಾರ್ ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here