ಚೇತನ್‌ ಕೇಶವ್‌ ನಿರ್ದೇಶನದಲ್ಲಿ ವಸಿಷ್ಠ ಸಿಂಹ ಅಭಿನಯಿಸುತ್ತಿರುವ ‘Love…ಲಿ’ ಸಿನಿಮಾದ ‘ಬಯಸಿ ಬಯಸಿ’ ಸಾಂಗ್‌ ರಿಲೀಸ್‌ ಆಗಿದೆ. ನಿರ್ದೇಶಕ ಚೇತನ್‌ ಕೇಶವ್‌ ಮತ್ತು ಪ್ರಜ್ವಲ್‌ ಕೆ ಪಿ ರಚನೆಯ ಈ ಹಾಡಿಗೆ ಅನೂಪ್‌ ಸಿಳೀನ್‌ ಸಂಗೀತ ಸಂಯೋಜಿಸಿದ್ದಾರೆ. ಉತ್ತಮ ಗಾಯಕರೂ ಆದ ಈ ಸಿನಿಮಾದ ಹೀರೋ ವಸಿಷ್ಠ ಸಿಂಹ ‘ಬಯಸಿ ಬಯಸಿ’ ಹಾಡಿಗೆ ದನಿಯಾಗಿದ್ದಾರೆ.

ವಸಿಷ್ಠ ಸಿಂಹ ಅಭಿನಯದ ಬಹುನಿರೀಕ್ಷಿತ ‘Love…ಲಿ’ ಸಿನಿಮಾದ ‘ಬಯಸಿ ಬಯಸಿ’ ಸಾಂಗ್‌ ಬಿಡುಗಡೆಯಾಗಿದೆ. ನಾಯಕಿಯೆಡೆಗಿನ ಕಥಾನಾಯಕನ ಭಾವನೆಗಳನ್ನು ಹಿಡಿದಿಟ್ಟಿರುವ ಹಾಡಿದು. ಚೇತನ್‌ ಕೇಶವ್‌ ಮತ್ತು ಪ್ರಜ್ವಲ್‌ ಕೆ ಪಿ ರಚನೆಯ ಈ ಹಾಡಿಗೆ ಅನೂಪ್‌ ಸಿಳೀನ್‌ ಸಂಗೀತ ಸಂಯೋಜಿಸಿದ್ದಾರೆ. ಉತ್ತಮ ಗಾಯಕರೂ ಆದ ಈ ಸಿನಿಮಾದ ಹೀರೋ ವಸಿಷ್ಠ ಸಿಂಹ ‘ಬಯಸಿ ಬಯಸಿ’ ಹಾಡಿಗೆ ದನಿಯಾಗಿದ್ದಾರೆ. ಸಮುದ್ರ ತೀರದಲ್ಲಿ ವಸಿಷ್ಠ ಸಿಂಹ ಮತ್ತು ಚಿತ್ರದ ನಾಯಕಿ ಸ್ಟೆಫಿ ಪಟೇಲ್‌ ಅವರ ಮೇಲೆ ಸಾಂಗ್‌ ಪಿಕ್ಚರೈಸ್‌ ಆಗಿದೆ. ಅಶ್ವಿನ್‌ ಕೆನಡಿ ಅವರ ಆಕರ್ಷಕ ಛಾಯಾಗ್ರಹಣ ಮತ್ತು ಹರೀಶ್‌ ಕೊಮ್ಮೆ ಅವರ ಸಂಕಲನ ಹಾಡನ್ನು ಮತ್ತಷ್ಟು ಚೆಂದಗಾಣಿಸಿವೆ.

‘ಪ್ರೀತಿಯಲ್ಲಿ ಏನೆಲ್ಲಾ ಇರುತ್ತೆ ಎನ್ನುವುದೇ ಈ ಸಿನಿಮಾ. ಮೊದಲ ಭಾಗದಲ್ಲಿ ರೋಮ್ಯಾನ್ಸ್‌ ಇದ್ದರೆ, ದ್ವಿತಿಯಾರ್ಧದಲ್ಲಿ ಸಸ್ಪೆನ್ಸ್‌ ಇರಲಿದೆ. ಚಿತ್ರದಲ್ಲಿ ಮಾಸ್ – ಕ್ಲಾಸ್ ಎರಡೂ ಇವೆ’ ಎನ್ನುವುದು ಚಿತ್ರದ ಕುರಿತಾದ ವಸಿಷ್ಠ ಅವರ ಮಾತು. ಚಿತ್ರದ ನಿರ್ದೇಶಕ ಚೇತನ್‌ ಕೇಶವ್‌, ‘ರೌಡೀಯಿಂಸ, ಲವ್, ಡ್ರಾಮಾ ಜಾನರ್‌ನಲ್ಲಿ ಸಿನಿಮಾ ಸಾಗುತ್ತದೆ. ಪ್ರೀತಿ, ನಂಬಿಕೆ, ಸಂಬಂಧಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದು ಕಥೆ. ಸಿನಿಮಾ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ’ ಎನ್ನುತ್ತಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ಮಂಗಳೂರು, ಬೆಂಗಳೂರು ಮತ್ತು ಉಡುಪಿಯಲ್ಲಿ ಚಿತ್ರೀಕರಣ ನಡೆದಿದೆ. ನಾಯಕನಟಿ ಸ್ಟೆಫಿ ಪಟೇಲ್‌ ಅವರು ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿದ್ದು, ‘Loveಲೀ’ ಕನ್ನಡದಲ್ಲಿ ಮೊದಲ ಸಿನಿಮಾ. ಚಿತ್ರದಲ್ಲಿ ಅವರ ಪಾತ್ರದ ಹೆಸರು ‘ಜನನಿ’. ಬೇಬಿ ವಂಶಿಕಾ ಚಿತ್ರದಲ್ಲಿ ನಟಿಸಿದ್ದಾಳೆ. ಮುಂದಿನ ಕೆಲವೇ ದಿನಗಳಲ್ಲಿ ಚಿತ್ರದ ರಿಲೀಸ್‌ ಕುರಿತಂತೆ ಮಾಹಿತಿ ಲಭ್ಯವಾಗಲಿದೆ.

LEAVE A REPLY

Connect with

Please enter your comment!
Please enter your name here