ಚಂದ್ರಶೇಖರ್‌ ಬೆಳ್ಳಿಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದಲ್ಲಿ ಹಿರಿಯ ನಟಿ ಗಿರಿಜಾ ಶೆಟ್ಟರ್‌ ನಟಿಸಲಿದ್ದಾರೆ. ಪರಂವಃ ಸ್ಟುಡಿಯೋಸ್‌ ನಿರ್ಮಾಣದ ಚಿತ್ರದ ಮುಖ್ಯಭೂಮಿಕೆಯಲ್ಲಿ ವಿಹಾನ್‌ ಮತ್ತು ಅಂಕಿತಾ ಅಮರ್‌ ನಟಿಸುತ್ತಿದ್ದಾರೆ.

ಪರಂವಃ ಸ್ಟುಡಿಯೋಸ್‌ ನಿರ್ಮಾಣದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರತಂಡಕ್ಕೆ ಹಿರಿಯ ನಟಿ ಗಿರಿಜಾ ಶೆಟ್ಟರ್‌ ಸೇರ್ಪಡೆಗೊಂಡಿದ್ದಾರೆ. ನಿರ್ಮಾಪಕರು ಗಿರಿಜಾ ಶೆಟ್ಟರ್‌ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಿ ಚಿತ್ರಕ್ಕೆ ಅವರನ್ನು ಸ್ವಾಗತಿಸಿದ್ದಾರೆ. ತೆಲುಗಿನ ‘ಗೀತಾಂಜಲಿ’ (ಫಿಲ್ಮ್‌ಫೇರ್‌ ಅತ್ಯತ್ತಮ ನಟಿ ಪ್ರಶಸ್ತಿ), ‘ವಂದನಂ’, ‘ಜೋ ಜೀತಾ ವಹೀ ಸಿಕಂದರ್’, ‘ಹೃದಯಾಂಜಲಿ’, ‘ತುಝೆ ಮೇರಿ ಕಸಮ್‌’ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಗಿರಿಜಾ ಶೆಟ್ಟರ್‌. ವಿಭಿನ್ನ ಪ್ರೇಮಕಥಾಹಂದರದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ನಾಯಕನಾಗಿ ‘ಪಂಚತಂತ್ರ’ ಖ್ಯಾತಿಯ ವಿಹಾನ್, ನಾಯಕಿಯಾಗಿ ಕಿರುತೆರೆಯ ಜನಪ್ರಿಯ ನಟಿ ಅಂಕಿತಾ ಅಮರ್ ನಟಿಸುತ್ತಿದ್ದಾರೆ. ಚಂದ್ರಶೇಖರ್‌ ಬೆಳ್ಳಿಯಪ್ಪ ನಿರ್ದೇಶನದ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ನಿರ್ದೇಶನ, ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ, ರಕ್ಷಿತ್ ಕಾಪ್ ಸಂಕಲನವಿದೆ.

Previous article‘ಆಖ್ರಿ ಸಚ್‌’ ಟ್ರೈಲರ್‌ | ತಮನ್ನಾ ಭಾಟಿಯಾ ನಟನೆಯ ತನಿಖಾ ವೆಬ್‌ ಸರಣಿ
Next articleಮೆಲ್ಬೋರ್ನ್‌ ಚಿತ್ರೋತ್ಸವ | ‘ಹದಿನೇಳೆಂಟು’ ಪೃಥ್ವಿ ಕೊಣನೂರು ಅತ್ಯುತ್ತಮ ನಿರ್ದೇಶಕ

LEAVE A REPLY

Connect with

Please enter your comment!
Please enter your name here