ಚಿನ್ನಾ ಪಾಪಿಸೆಟ್ಟಿ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ‘ನಾರಾಯಣ & ಕೋ’ ತೆಲುಗು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಕಾಮಿಡಿ – ಲವ್‌ಸ್ಟೋರಿಯಲ್ಲಿ ದೊಡ್ಡ ತಾರಾಬಳಗವಿದ್ದು, ಜೂನ್‌ 30ರಂದು ಸಿನಿಮಾ ಬಿಡುಗಡೆಯಾಗಲಿದೆ.

‘ನಾರಾಯಣ & ಕೋ’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಿನ್ನಾ ಪಾಪಿಸೆಟ್ಟಿ ಚಿತ್ರಕಥೆ ಮತ್ತು ನಿರ್ದೇಶನದ ಸಿನಿಮಾ ತಿಳಿಹಾಸ್ಯದ ನಿರೂಪಣೆಯ ಪ್ರೇಮಕತೆ. ‘ಲೈಫ್ ಈಸ್ ಬ್ಯೂಟಿಫುಲ್’ ಖ್ಯಾತಿಯ ನಟ ಸುಧಾಕರ್ ಕೋಮಕುಲ ಅವರು ಪಾಪಿಸೆಟ್ಟಿ ಬ್ರದರ್ಸ್ ಸಹಯೋಗದೊಂದಿಗೆ ಚಿತ್ರ ನಿರ್ಮಿಸಿದ್ದಾರೆ. ಸುಧಾಕರ್ ಕೋಮಕುಲ, ದೇವಿ ಪ್ರಸಾದ್, ಪೂಜಾ ಕಿರಣ್, ಆರತಿ ಪೋಡಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ತೆಲುಗು ನಟ, ನಿರ್ದೇಶಕ ವಿಶ್ವಕ್ ಸೇನ್ ಟ್ರೈಲರ್‌ ಅನಾವರಣಗೊಳಿಸ, ‘ಟ್ರೈಲರ್ ಸೊಗಸಾಗಿ ಮೂಡಿಬಂದಿದೆ ಮತ್ತು ಜನರಲ್ಲಿ ನಗು ತರಿಸುತ್ತದೆ. ನಾರಾಯಣ & ಕೋ ತಂಡಕ್ಕೆ ಶುಭವಾಗಲಿ. ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದೇನೆʼ ಎಂದು ಟ್ವೀಟ್‌ ಮಾಡಿದ್ದಾರೆ. ದುಬೈಗೆ ಒಂದು ಗೊಂಬೆಯನ್ನು ಸಾಗಿಸುವ ಸನ್ನಿವೇಶದಿಂದ ಟ್ರೈಲರ್‌ ಆರಂಭಗೊಳ್ಳುತ್ತದೆ. ಸಪ್ತಗಿರಿ, ಅಲಿ ರೇಜಾ, ಆಮಾನಿ, ಜೈ ಕೃಷ್ಣ, ಶಿವ ರಾಮಚಂದ್ರಪು, ತೋಟಪಲ್ಲಿ ಮಧು, ರಾಗಿಣಿ, ಯಾಮಿನಿ ಬಂಡಾರು, ಅನಂತ್ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ಜೂನ್‌ 30ರಂದು ಸಿನಿಮ ತೆರೆಕಾಣಲಿದೆ.

Previous article‘ಲಸ್ಟ್‌ ಸ್ಟೋರೀಸ್‌ 2’ ಟ್ರೈಲರ್‌ | Netflixನಲ್ಲಿ 29ರಿಂದ ಸ್ಟ್ರೀಮ್‌ ಆಗಲಿದೆ ಆಂಥಾಲಜಿ ಸಿನಿಮಾ
Next articleಶರ್ಮನ್‌ ಜೋಷಿ – ಮೋನಾ ಸಿಂಗ್‌ ‘Kafas’ | SonyLivನಲ್ಲಿ ಸ್ಟ್ರೀಮ್‌ ಆಗುತ್ತಿದೆ ಸರಣಿ

LEAVE A REPLY

Connect with

Please enter your comment!
Please enter your name here