Korea’s Got Talent ಶೋನಲ್ಲಿ ಎರಡನೇ ಸ್ಥಾನ ಗಳಿಸಿ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟು ಹೆಸರು ಮಾಡಿದ್ದ ಕೊರಿಯಾ ಗಾಯಕ Choi Sung Bong ನಿಧನರಾಗಿದ್ದಾರೆ. ಖ್ಯಾತಿಯ ಜೊತೆಗೆ ವಿವಾದಗಳಿಗೂ ತುತ್ತಾಗಿದ್ದ ನಟ ‘Singing is My Life – Memoir of My Journey from Homelessness to Fame’ ಆಟೋಬಯೋಗ್ರಫಿ ರಚಿಸಿದ್ದಾರೆ.

ಕೊರಿಯಾ ಗಾಯಕ Choi Sung Bong (33 ವರ್ಷ) ನಿಧನರಾಗಿದ್ದಾರೆ. Choi ಮನೆಯಲ್ಲಿ ದೊರೆದ ಪತ್ರ ಮತ್ತು ಅವರ ಮೃತ ದೇಹದ ಸ್ಥಿತಿಯನ್ನು ನೋಡಿ, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಜೂನ್ 20ರಂದು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ Choi Sung Bong ಫ್ಯಾನ್ಸ್‌ಗಳಿಗಾಗಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿದಾಯದ ಸಂದೇಶವೊಂದನ್ನು ಹಂಚಿಕೊಂಡಿದ್ದರು.

Choi Sung Bong 2011 ರಲ್ಲಿ Korea’s Got Talent ಶೋನಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ತಮ್ಮ ಸಂಗೀತ ಯಾನಕ್ಕೆ ಪ್ರವೇಶಿಸಿದ್ದರು. ಶೋನಲ್ಲಿ ಅವರ ‘Nella Fantasia’ ಅಭಿನಯವು ಮೆಚ್ಚುಗೆ ಪಡೆದುಕೊಂಡಿತ್ತು. Choi ಅಭಿನಯದ ಕ್ಲಿಪ್ ಅನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾಗಿದ್ದು, ಇದರಿಂದ ಅನೇಕ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಮತ್ತು ಪಾಪ್ ತಾರೆಗಳಾದ Justin Bieber, BoA, Jung-Hwa Umರಿಂದ ಮತ್ತು ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ Lee-Myung-Park ನಂತಹ ರಾಜಕೀಯ ವ್ಯಕ್ತಿಗಳಿಂದಲೂ ಪ್ರಶಂಸೆ ಪಡೆದಿದ್ದರು. ಅಲ್ಲದೇ 2012ರ ಲಂಡನ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಕೊರಿಯನ್ ರಾಷ್ಟ್ರಗೀತೆ ಹಾಡಿದ್ದರು.

2014 ರಲ್ಲಿ ‘ಸ್ಲೋ ಬಾಯ್’ ಆಲ್ಬಂ ಬಿಡುಗಡೆ ಮಾಡಿದ್ದರು. Choi ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಜೀವನ ಆಧರಿಸಿದ ‘Singing is My Life – Memoir of My Journey from Homelessness to Fame’ ಪುಸ್ತಕ ರಚಿಸಿದ್ದರು. ವಿದೇಶಿ ವರದಿಗಾರ ಸಂಘದಿಂದ ‘New Artist’ ಎಂದು ಸಹ ಗುರುತಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಅವರು ಕೊಲೊರೆಕ್ಟಲ್ ಕ್ಯಾನ್ಸರ್, ಥೈರಾಯ್ಡ್ ಕ್ಯಾನ್ಸರ್ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ ಎಂದು ಹೇಳಿಕೆ ನೀಡಿ, ಅವೆಲ್ಲವೂ ಸುಳ್ಳು ಎಂಬುದು ಬಹಿರಂಗವಾದಾಗ ಅವರ ಕುರಿತು ವಿವಾದ ಭುಗಿಲೆದ್ದಿತ್ತು. ತಮಗಿಲ್ಲದ ರೋಗಗಳ ಬಗ್ಗೆ ಸುಳ್ಳು ಹೇಳಿಕೆ ನೀಡಿ ನಕಲಿ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದಾಗ ತೊಂದರೆಗೆ ಸಿಲುಕಿದ್ದ Choi, ಫ್ಯಾನ್ಸ್‌ಗಳ ಕ್ರೌಡ್‌ ಫಂಡ್‌ನಿಂದ ಪಡೆದ ಒಂದು ಶತಕೋಟಿ ಹಣವನ್ನು ಮನೋರಂಜನಾ ವೆಚ್ಚಗಳಿಗೆ ಹಾಳು ಮಾಡಿದ್ದಾರೆ ಎಂಬ ಆರೋಪ ಮತ್ತು ಟೀಕೆಗೆ ಗುರಿಯಾಗಿದ್ದರು. ಈ ರೀತಿಯ ಆರೋಪಗಳನ್ನು ಎದುರಿಸಿದ ಗಾಯಕ ‘ನನ್ನ ಮೂರ್ಖತನದ ಈ ತಪ್ಪಿನಿಂದ ನೊಂದವರಿಗೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ. ಪಡೆದ ಹಣವನ್ನು ಹಿಂತಿರುಗಿಸಿದ್ದೇನೆ’ ಎಂದು ತಮ್ಮ ಮರಣ ಪತ್ರದಲ್ಲಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ.

LEAVE A REPLY

Connect with

Please enter your comment!
Please enter your name here