‘LGM’ ತಮಿಳು ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್‌ನಲ್ಲಿನ ನಟ ಯೋಗಿ ಬಾಬು ಜೊತೆಗಿನ ಎಂ ಎಸ್ ಧೋನಿ ವೀಡಿಯೋ ವೈರಲ್ ಆಗಿದೆ. ಈ ಚಿತ್ರದೊಂದಿಗೆ ಕ್ರಿಕೆಟರ್ ಧೋನಿ ಚಿತ್ರನಿರ್ಮಾಪಕರಾಗಿದ್ದಾರೆ. ರಮೇಶ್ ತಮಿಳ್ಮಣಿ ನಿರ್ದೇಶನದ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.
ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಧೋನಿ ‘LGM’ (ಲೆಟ್ಸ್ ಗೆಟ್ ಮ್ಯಾರೀಡ್) ತಮಿಳು ಚಿತ್ರದ ಮೂಲಕ ಚಲನಚಿತ್ರ ನಿರ್ಮಾಪಕರಾಗಿದ್ದಾರೆ. ಈ ಚಿತ್ರದ ಟ್ರೈಲರ್ ಮೊನ್ನೆ ಬಿಡುಗಡೆಯಾಯ್ತು. ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಹಾಸ್ಯನಟ ಯೋಗಿ ಬಾಬು ಅವರೊಂದಿಗೆ ಎಂ ಎಸ್ ಧೋನಿ ಸುದೀರ್ಘವಾಗಿ ಮಾತನಾಡಿ ಕಾರ್ಯಕ್ರಮದಲ್ಲಿ ಗಮನ ಸೆಳೆದಿದ್ದರು. ಹಾಗೂ ಈ ಇಬ್ಬರು ಸಲೆಬ್ರೆಟಿಗಳು ಸೇರಿ ಕೇಕ್ ಕತ್ತರಿಸಿ ಚಿತ್ರದ ಟ್ರೈಲರ್ ಬಿಡುಗಡೆಯ ಸಂಭ್ರಮವನ್ನು ಆಚರಿಸಿದ್ದರು. ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಧೋನಿ ಮತ್ತು ಯೋಗಿ ಬಾಬು ಪರಸ್ಪರ ಕೇಕ್ ತಿನ್ನಿಸುತ್ತಿರುವ ಚಿತ್ರಗಳು ಇಂಟರ್‌ನೆಟ್‌ನಲ್ಲಿ ಗಮನ ಸೆಳೆಯುತ್ತಿವೆ.
Video of the day is here ❤️
— DHONIsm™ ❤️ (@DHONIism) July 14, 2023
Look at the happiness in Mahi's face 😍@MSDhoni #MSDhoni #WhistlePodupic.twitter.com/4N2YaAZLfs
ಕಾರ್ಯಕ್ರಮದಲ್ಲಿ ಎಂ ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಟ ಯೋಗಿ ಬಾಬು ಅವರನ್ನು ಸೇರಿಸಿಕೊಳ್ಳುವುದರ ಬಗ್ಗೆ ತಮಾಷೆ ಮಾಡಿದ್ದರು. ‘LGM’ ಚಿತ್ರವನ್ನು ರಮೇಶ್ ತಮಿಳ್ಮಣಿ ನಿರ್ದೇಶಿಸಿದ್ದಾರೆ. ನಾಯಕನ ತಾಯಿ ಮತ್ತು ಗೆಳತಿ ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ಕೊಡಗಿಗೆ ಪ್ರವಾಸ ಹೊರಡುತ್ತಾರೆ. ಪ್ರವಾಸದಲ್ಲಿ ತೊಂದರೆಯಾಗಿ ಇಬ್ಬರೂ ದುಷ್ಟರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಪರಸ್ಪರರನ್ನು ಅರಿಯಲು ಹೊರಡುವ ಅವರು ಮುಂದೆ ಏನೆಲ್ಲಾ ಸಮಸ್ಯೆ ಎದುರಿಸುತ್ತಾರೆ, ಇಬ್ಬರ ಮಧ್ಯೆ ಹೀರೋನ ಕತೆ ಏನಾಗುತ್ತದೆ ಎನ್ನುವುದು ಕಥಾಹಂದರ. ಪ್ರೇಮಕಥೆಯನ್ನು ಒಳಗೊಂಡ ಈ ಚಿತ್ರವು ಸಾಕ್ಷಿ ಧೋನಿ ಅವರ ಕಲ್ಪನೆ. ನಿರ್ದೇಶಕರು ಚಿತ್ರಕ್ಕೆ ಸಂಗೀತ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.