ಮಾಧ್ಯಮ ಅನೇಕ ಇದೀಗ ಕನ್ನಡ ಮತ್ತು ಇತರ ಭಾಷೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಕಂಟೆಂಟ್ ನೀಡುವ ಹೊಸ OTT (ಓವರ್ ದಿ ಟಾಪ್) ಹೊರತರುತ್ತಿದೆ. ಈ OTT ಯ ಮುಖ್ಯ ಉದ್ದೇಶ ಪ್ರಾದೇಶಿಕ ಭಾಷೆಗಳಲ್ಲಿ ತಯಾರಾದ ಉತ್ತಮ ಮನೋರಂಜನಾ contentಗಳು ಮತ್ತು infotainment contentಗಳಿಗೆ ಸೂಕ್ತ ವೇದಿಕೆಯೊಂದನ್ನು ರೂಪಿಸುವುದು. OTT ಯ ಹೆಸರನ್ನು ಇಷ್ಟರಲ್ಲೇ ಪ್ರಕಟಿಸಲಿದ್ದು ವೀಕ್ಷಕರಿಗೆ ಜನಪ್ರಿಯ app ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗಲಿದೆ.

ಮಾಧ್ಯಮ ಅನೇಕ ತನ್ನ OTT ಮೂಲಕ ತನ್ನ in-house productions ಗಳನ್ನು “Maadhyama Aneka Originals” ಶೀರ್ಷಿಕೆಯಡಿ ತರುತ್ತಿದ್ದು, ಹೊಸತನ ಮತ್ತು ಸದಭಿರುಚಿಯ ಅಡಿಪಾಯದ ಮೇಲೆ ಹೆಣೆದ ಕಥಾವಸ್ತುಗಳನ್ನು ವೆಬ್ ತೆರೆಯ ಮೇಲೆ ತರುವ ಧ್ಯೇಯೋದ್ದೇಶ ಹೊಂದಿದೆ. ತನ್ನ OTT ಮೂಲಕ ಪ್ರೇಕ್ಷಕರಿಗೆ ಉತ್ತಮ ಕಂಟೆಂಟ್ ನೀಡುವುದರೊಂದಿಗೆ, ಮನೋರಂಜನಾ ಉದ್ಯಮದ ಇಡೀ ಸಮುದಾಯ – ನಿರ್ಮಾಪಕರು, ನಿರ್ದೇಶಕರು, ಚಿತ್ರಕಥೆ ಬರಹಗಾರರು, ಕಲಾವಿದರು, ತಂತ್ರಜ್ಞರೂ – ಎಲ್ಲರ ಆಯಾ ಕಲಾ ಸಾಮರ್ಥ್ಯ, ಪರಿಣಿತಿಗೆ ಪೋಷಕವಾಗಿ ಒಂದು ವೇದಿಕೆ ಯಾಗಬೇಕೆನ್ನುವ ನಿಟ್ಟಿನಲ್ಲಿ ‘ಮಾಧ್ಯಮ ಅನೇಕ’ ಈ ಪ್ಲಾಟ್ಫಾರ್ಮ್ ಅನ್ನು ರೂಪಿಸುತ್ತಿದೆ. ಇಲ್ಲಿನ ಕಂಟೆಂಟ್ ಕನ್ನಡ ಮತ್ತು ಇತರ ಭಾಷೆಗಳಲ್ಲಿ ಇರುತ್ತದೆ.

ಆಸಕ್ತ ಚಿತ್ರಕಥೆ ಬರಹಗಾರರು, ಕಥೆಗಾರರು, ತಮ್ಮ ಯಾವುದೇ ಕಥಾವಸ್ತುವಾಗಲಿ ಅಥವಾ ತಮ್ಮ ಸಿದ್ಧ ಚಿತ್ರಕಥೆ / ಸ್ಕ್ರಿಪ್ಟ್‌ ಗಳ ಪರಿಕಲ್ಪನೆಗಳನ್ನು ‘ಮಾಧ್ಯಮ ಅನೇಕ’ ಕಂಟೆಂಟ್ ಕ್ಯುರೇಟರ್ ಗಳಿಗೆ  ಕಳುಹಿಸಬಹುದು. ವಸ್ತು ವಿಷಯ ವೆಬ್ ಸೀರೀಸ್ ಅಥವಾ ಡಾಕ್ಯುಮೆಂಟರಿ ಗೆ ಪೂರಕವಾಗಿ ಇರುವಂತಹದ್ದಾಗಿರಬೇಕು.

OTT ಪ್ಲಾಟ್‌ಫಾರ್ಮ್‌ಗಳು ಯುವ ಚಲನಚಿತ್ರ ನಿರ್ಮಾಪಕರಿಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸಿಕೊಡುತ್ತಿವೆ ಮತ್ತು ಪರಿಣಿತ ಚಲನಚಿತ್ರ ನಿರ್ಮಾಪಕರಿಗೆ ತಮ್ಮ ವಿಭಿನ್ನ ಪರಿಕಲ್ಪನೆಗಳು ಮತ್ತು ಕಥಾಹಂದರವನ್ನು ಪ್ರಯೋಗಿಸುವ ಸ್ವಾತಂತ್ರ್ಯವನ್ನು ದೊರಕಿಸಿಕೊಡುತ್ತಿವೆ. ಆದರೆ ಯಾವುದೇ ಪ್ರಮುಖ ಪ್ರಾದೇಶಿಕ OTT streaming platform ಕನ್ನಡ ಭಾಷೆಯಲ್ಲಿ original content ಅನ್ನು ಸಕ್ರಿಯವಾಗಿ ಪೂರೈಸುವುದನ್ನು ನಾವಿನ್ನೂ ಕಾಣಬೇಕಾಗಿದೆ.  ಪ್ರಮುಖ OTT ಪ್ಲಾಟ್‌ಫಾರ್ಮ್‌ಗಳಾದ Amazon Prime Video, Netflix, ಮತ್ತು Hotstar ಇನ್ನೂ ಕನ್ನಡದಲ್ಲಿ ಭಾರಿ ಪ್ರಮಾಣದ ಆಸಕ್ತಿ ತೋರಿಸಬೇಕಾಗಿದೆ. ಈ ಕೊರತೆಯನ್ನು ಮಾಧ್ಯಮ ಅನೇಕ ಪ್ರಾದೇಶಿಕ ಭಾಷೆಗಳಿಗೆ, ವಿಶೇಷವಾಗಿ ಕನ್ನಡ ಭಾಷೆಗೆ ಇರುವ ಒಂದು ಸದಾವಕಾಶವೆಂದು ಪರಿಗಣಿಸುತ್ತಿದೆ. ಅಂತೆಯೇ ‘ಮಾಧ್ಯಮ ಅನೇಕ’ 2020 ರಲ್ಲಿ ವೆಬ್ ಪ್ಲ್ಯಾಟ್‌ಫಾರ್ಮ್‌ಗಳಿಗಾಗಿ ಮನರಂಜನಾ ಕಾರ್ಯಕ್ರಮಗಳನ್ನು ತಯಾರಿಸುವತ್ತ ಗಮನ ಹರಿಸಲು ಪ್ರಾರಂಭಿಸಿತು. ಇದೀಗ ವೆಬ್ ಪ್ಲಾಟ್ಫಾರ್ಮ್ ಗಳಲ್ಲಿ ಪ್ರಾದೇಶಿಕ ಭಾಷೆಗಳ ಕಾರ್ಯಕ್ರಮಗಳಿಗೆ, ಅವುಗಳ ನಿರ್ಮಾಪಕರಿಗೆ ಬೇಡಿಕೆ ಹೆಚ್ಚುತ್ತಿರುವ ಈ ಹಂತದಲ್ಲಿ ಮಾಧ್ಯಮ ಅನೇಕ ತನ್ನ OTT ಪ್ರಕಟಣೆ ಹೊರತರುತ್ತಿದೆ.

ಮಾಧ್ಯಮ ಅನೇಕ ಪ್ರೈ ಲಿ. ಕುರಿತು

“ಮಾಧ್ಯಮ ಅನೇಕ ಪ್ರೈ. ಲಿ.” ಬೆಂಗಳೂರು ಮೂಲದ ಮೀಡಿಯಾ ಪ್ರೊಡಕ್ಷನ್ ಹೌಸ್ ಆಗಿ 2018ರಿಂದ ಕಾರ್ಯಾಚರಣೆ ಮಾಡುತ್ತಿದೆ. ಮನರಂಜನೆ ಮತ್ತು infotainment ವಿಭಾಗಗಳಿಗೆ ಮೌಲ್ಯ ಆಧಾರಿತ, ಕಾಲಮಾನಕ್ಕೆ ತಕ್ಕಂತೆ ಮತ್ತು ಉತ್ತಮ ಗುಣಮಟ್ಟದ ವಿಷಯವನ್ನು ನಿರ್ಮಿಸುವ ದೃಷ್ಟಿಯೊಂದಿಗೆ ಕಳೆದ ಮೂರಕ್ಕೂ ಹೆಚ್ಚು ವರ್ಷಗಳಿಂದ ವೆಬ್ ಆಧಾರಿತ ಮನರಂಜನಾ ವಿಷಯ, ಸಾಕ್ಷ್ಯಚಿತ್ರಗಳು ಮತ್ತು Talk Showಗಳನ್ನು ಕನ್ನಡ ಭಾಷೆಯಲ್ಲಿ ನಿರ್ಮಿಸುತ್ತಾ ಬಂದಿದೆ.

“ಬಿಚ್ಚಿಟ್ಟ ಬುತ್ತಿ – webಸಂಭಾಷಣೆ” ಮಾಧ್ಯಮ ಅನೇಕ ನಿರ್ಮಾಣದ ಮೊಟ್ಟ ಮೊದಲ ಪ್ರಸ್ತುತಿ. 2018 ರಲ್ಲಿ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಹಲವಾರು ಕ್ಷೇತ್ರಗಳಲ್ಲಿ – ಸಾಹಿತ್ಯ, ಸಿನಿಮಾ, ಸಂಗೀತ, ನಾಟ್ಯ, ಕೃಷಿ, ರಂಗಭೂಮಿ – ಸಾಧನೆ ಮಾಡಿರುವ ಅಪ್ರತಿಮ ಪ್ರತಿಭೆಗಳ ಸಾಧನೆಯನ್ನು ದಾಖಲಿಸುವುದು ಮೂಲ ಉದ್ದೇಶ. ಸಂದರ್ಶನಗಳ ಮೂಲಕ ಅಪೂರ್ವ ವ್ಯಕ್ತಿತ್ವಗಳ ವಿಸ್ತಾರ ಪರಿಚಯ ಈ ಕಾರ್ಯಕ್ರಮದಲ್ಲಿ ದೊರೆಯುತ್ತದೆ.

ಜೊತೆಜೊತೆಗೆ ಸಾಕ್ಷ್ಯಚಿತ್ರಗಳನ್ನು ಕೂಡ ಮಾಧ್ಯಮ ಅನೇಕ ನಿರ್ಮಿಸಿದ್ದು ಅವುಗಳಲ್ಲಿ ಮುಖ್ಯವಾದವು “ತೇಜಸ್ವಿ ಎಂಬ ವಿಸ್ಮಯ” “Marie Curie – An Inspiration for All Times”, “A Tribute to MS Sathyu”. ಇತ್ತೀಚೆಗೆ ಮತ್ತೊಂದು ಸಾಕ್ಸ್ಯಚಿತ್ರ ಸರಣಿ ಪ್ರಾರಂಭಿಸಿದ್ದು “People Stories” ಶೀರ್ಷಿಕೆಯಡಿ ನಮ್ಮ ಸುತ್ತಲಿರುವ ಜನಸಾಮಾನ್ಯರ ಅಸಾಮಾನ್ಯ ಬದುಕಿನ ಚಿತ್ರಣ ಬಿಚ್ಚಿಡುವ ಪ್ರಯತ್ನ ನಡೆಯುತ್ತಿದೆ. ಇವೆಲ್ಲಾ ಕಾರ್ಯಕ್ರಮಗಳಿಗೆ ಪ್ರೇಕ್ಷಕರಿಂದ ದೊರೆತ, ದೊರೆಯುತ್ತಿರುವ ಮೆಚ್ಚುಗೆ, ಸಕಾರಾತ್ಮಕ ಪ್ರತಿಕ್ರಿಯೆಗಳು ಕನ್ನಡ ಭಾಷೆಯ original content ಗೆ ಉದ್ಯಮದಲ್ಲಿ ಇರುವ ಆದ್ಯತೆ ಮತ್ತು ಬೇಡಿಕೆ ಸಾಕ್ಷಿ ಎಂದರೆ ತಪ್ಪಾಗಲಾರದು.

ಇದೀಗ ೨೦೨೧ ರಲ್ಲಿ ‘ಮಾಧ್ಯಮ ಅನೇಕ’ ತನ್ನದೇ ಆದ OTT ಹೊರತರುತ್ತಿದ್ದು ವೆಬ್ ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿ ಇದೊಂದು ಮೈಲಿಗಲ್ಲು. ಪ್ರೇಕ್ಷಕರಿಗೆ, content producers ಗಳಿಗೆ, ನಿರ್ದೇಶಕ – ನಿರ್ಮಾಪಕರಿಗೆ, ಕ್ರಿಯಾಶೀಲ ಬರಹಗಾರರಿಗೆ ಇದೊಂದು ಅಮೂಲ್ಯ ವೇದಿಕೆಯಾಗುವ ಭರವಸೆಯೊಂದಿಗೆ ಈ ಪ್ರಕಟಣೆ ನಿಮ್ಮ ಮುಂದೆ.

LEAVE A REPLY

Connect with

Please enter your comment!
Please enter your name here