ಬ್ರೆಜಿಲ್ ಸ್ಟಾರ್ ಫುಟ್‌ಬಾಲ್ ಪ್ಲೇಯರ್ ನೀಮರ್ ಕುರಿತ ಡಾಕ್ಯುಮೆಂಟರಿ ಸರಣಿ ‘ನೀಮರ್ ದಿ ಪರ್ಫೆಕ್ಟ್ ಖಿಯೋಸ್’ ಟ್ರೈಲರ್ ಬಿಡುಗಡೆಯಾಗಿದೆ. ಡೇವಿಡ್ ಚಾರ್ಲ್ಸ್ ರಾಡ್ರಿಗಸ್ ನಿರ್ದೇಶನದ ಸೀರೀಸ್ ಜನವರಿ 25ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.
ಬ್ರೆಜಿಲ್‌ನ ಖ್ಯಾತ ಫುಟ್‌ಬಾಲ್ ಪ್ಲೇಯರ್ ನೀಮರ್ ಅವರ ವೃತ್ತಿ, ಬದುಕು, ವಿವಾದಗಳ ಬಗ್ಗೆ ರೂಪುಗೊಂಡಿರುವ ‘ನೀಮರ್ ದಿ ಪರ್ಫೆಕ್ಟ್ ಖಿಯೋಸ್’ ಡಾಕ್ಯುಮೆಂಟರಿ ಸರಣಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಮೂರು ಪಾರ್ಟ್‌ಗಳ ಸರಣಿಯಲ್ಲಿ ನೀಮರ್ ಸೇರಿದಂತೆ ಖ್ಯಾತ ಫುಟ್‌ಬಾಲ್ ತಾರೆಯರಾದ ಡೇವಿಡ್ ಬೆಕ್‌ಹ್ಯಾಮ್, ಲಿಯೊನೆಲ್ ಮೆಸ್ಸಿ, ಕಿಲೀನ್ ಅವರ ಸಂದರ್ಶನಗಳಿವೆ. ಡೇವಿಡ್ ಚಾರ್ಲ್ಸ್ ರೊಡ್ರಿಗಸ್ ನಿರ್ದೇಶನದ ಸೀರೀಸ್‌ನಲ್ಲಿ ನೀಮರ್ ವಿವಾದಗಳು, ವೃತ್ತಿ ಬದುಕಿನ ಏಳು-ಬೀಳುಗಳ ಚಿತ್ರಣವಿದೆ. ಜನವರಿ 25ರಿಂದ ಸ್ಟ್ರೀಮ್ ಆಗಲಿರುವ ಡಾಕ್ಯುಮೆಂಟರಿ ಸರಣಿಯ ಅಫಿಷಿಯಲ್ ಸಿನಾಪ್ಸಿಸ್ ಹೀಗೆ ಹೇಳುತ್ತದೆ – “ಅಪಾರ ಖ್ಯಾತಿ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ಅಥ್ಲೀಟ್ ಎಂದು ದಾಖಲಾಗಿರುವ ನೀಮರ್ ಬಗ್ಗೆ ನಿಮಗೆ ತಿಳಿದಿರದ ಮಾಹಿತಿ ಇಲ್ಲಿ ಸಿಗಲಿದೆ. ಡೇವಿಡ್ ಚಾರ್ಲ್ಸ್ ರೊಡ್ರಿಗಸ್ ನಿರ್ದೇಶನದ ಮೂರು ಪಾರ್ಟ್ ಸರಣಿಯಲ್ಲಿ ನೀಮರ್ ವೈಯಕ್ತಿಕ ಬದುಕು, ವಿವಾದಗಳು, ಸ್ಯಾಂತೋ ಮತ್ತು ಬಾರ್ಸೆಲೊನಾದಲ್ಲಿನ ಅವರ ಯಶಸ್ಸು ಹಾಗೂ ಇನ್ನಿತರೆ ವಿಷಯಗಳು ಪ್ರಸ್ತಾಪವಾಗಲಿವೆ. ಖ್ಯಾತ ಫುಟ್‌ಬಾಲ್ ತಾರೆಯರ ಸಂದರ್ಶನಗಳಿವೆ”