ಮಾಧವನ್‌, ಸುರ್ವೀನ್‌ ಚಾವ್ಲಾ, ಸೋನಿಯಾ ರಾಥೀ ಅಭಿನಯದ ‘ಡಿ-ಕಪಲ್ಡ್‌’ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಇದು 72 ಗಂಟೆಗಳಲ್ಲಿ ನಂ.1 ಸೀರೀಸ್‌ ಎಂದು ಗುರುತಿಸಿಕೊಂಡಿದ್ದು, ಮಾಧವನ್‌ ಯಶಸ್ಸನ್ನು ಸಂಭ್ರಮಿಸಿದ್ದಾರೆ.

ತಮ್ಮ ಲೇಟೆಸ್ಟ್‌ ವೆಬ್‌ ಸರಣಿ ‘ಡಿ-ಕಪಲ್ಡ್‌’ ಯಶಸ್ಸನ್ನು ಸಂಭ್ರಮಿಸುತ್ತಾ ಮಾಧವನ್‌ ವೀಕ್ಷಕರಿಗೆ ಟ್ವೀಟ್‌ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. ಮೊನ್ನೆ 17ನೇ ತಾರೀಖಿನಂದು ಸ್ಟ್ರೀಮ್‌ ಆದ ಸರಣಿ ಮೂರು ದಿನಗಳೊಳಗಾಗಿ ನೆಟ್‌ಫ್ಲಿಕ್ಸ್‌ನ ನಂ.1 ಇಂಡಿಯನ್‌ ವೆಬ್‌ ಸರಣಿ ಎಂದು ಹೆಸರು ಮಾಡಿದೆ. ಸರಣಿಯಲ್ಲಿ ನಟ ಮಾಧವನ್‌ ಅವರು ಕಾದಂಬರಿಕಾರ ‘ಆರ್ಯ ಅಯ್ಯರ್‌’ ಪಾತ್ರ ನಿರ್ವಹಿಸಿದ್ದಾರೆ. ಪ್ರೀತಿಸಿ ಮದುವೆಯಾದ ಜೋಡಿ (ಮಾಧವನ್‌ – ಸುರ್ವೀನ್‌) ಡಿವೋರ್ಸ್‌ನತ್ತ ಹೊರಳುವ ಕತೆಯಿದು. ಸರಣಿ ಮೂಡಿಬರುತ್ತಿರುವ ಹಿನ್ನೆಲೆಯಲ್ಲಿ ಅವರ ಸಂದರ್ಶನವೊಂದು ನಡೆದಿತ್ತು. “ಈ ಸರಣಿಯಿಂದ ನಿಮ್ಮ ತೆರೆಯ ಮೇಲಿನ ‘ಒಳ್ಳೆಯ ವ್ಯಕ್ತಿ’ ಇಮೇಜಿಗೆ ಕುಂದು ಬರುಬಹುದೇ?” ಎಂದು ಸಂದರ್ಶಕಿ ಪ್ರಶ್ನಿಸಿದ್ದರು. ಆಗ ಮಾಧವನ್‌, “ಇಲ್ಲ, ನನಗೆ ಅಂತಹ ಭಯವೇನೂ ಇಲ್ಲ. ಆದರೆ ಇದು ಇಂಗ್ಲಿಷ್‌ ಸರಣಿ. ನನ್ನ ಹಿಂದಿ ಮತ್ತು ತಮಿಳು ಅಭಿಮಾನಿಗಳು ಸರಣಿಯನ್ನು ಹೇಗೆ ಸ್ವೀಕರಿಸುತ್ತಾರೋ ಎನ್ನುವ ಭಯವಿದೆ” ಎಂದಿದ್ದರು. ಈಗ ಅವರ ಸರಣಿ ದೊಡ್ಡ ಯಶಸ್ಸು ಕಂಡಿದೆ. “ಸರಣಿಯನ್ನು ವೀಕ್ಷಕರು ಮೆಚ್ಚಿದ್ದಾರೆ. ಈ ಯಶಸ್ಸಿಗೆ ಎಲ್ಲರಿಗೂ ಆಭಾರಿಯಾಗಿದ್ದೇನೆ” ಎಂದು ಟ್ವೀಟ್‌ ಮಾಡಿದ್ದಾರೆ ಮಾಧವನ್‌. ‘ಡಿಕಪಲ್ಡ್‌’ ಸರಣಿಯನ್ನು ಹಾರ್ದಿಕ್‌ ಮೆಹ್ತಾ ನಿರ್ದೇಶಿಸಿದ್ದಾರೆ.

LEAVE A REPLY

Connect with

Please enter your comment!
Please enter your name here