ಯಶ್‌ ನೂತನ ಸಿನಿಮಾದ ಶೀರ್ಷಿಕೆ ‘ಟಾಕ್ಸಿಕ್‌’ ಎಂದಾಗಿದೆ. ‘A Fairy Tale for Grown-ups’ – ಇದು ಟ್ಯಾಗ್‌ಲೈನ್‌. ‘What you seek is seeking you’ ಎನ್ನವ ರೂಮಿ ಮಾತಿನೊಂದಿಗೆ ನಟ ಯಶ್‌ ತಮ್ಮ ಸೋಷಿಯಲ್‌ ಮೀಡಿಯಾ ಹ್ಯಾಂಡಲ್‌ಗಳಲ್ಲಿ ಟೈಟಲ್‌ ಟೀಸರ್‌ ಹಂಚಿಕೊಂಡಿದ್ದಾರೆ.

ನಟ ಯಶ್‌ ಅವರ ನೂತನ ಸಿನಿಮಾದ ಟೈಟಲ್‌ ಟೀಸರ್‌ ಬಿಡುಗಡೆಯಾಗಿದೆ. ಚಿತ್ರದ ಶೀರ್ಷಿಕೆ ‘TOXIC’ ಎಂದಿದ್ದು, ‘A Fairy Tale for Grown-ups’ ಟ್ಯಾಗ್‌ಲೈನ್‌. ‘KGF’ ಸರಣಿ ಸಿನಿಮಾಗಳ ನಂತರ ಯಶ್‌ PAN ಇಂಡಿಯಾ ಹೀರೋ ಆಗಿದ್ದು, PAN ಇಂಡಿಯಾ ಸಿನಿಮಾಗೆ ಸೂಕ್ತವಾದ ಶೀರ್ಷಿಕೆ ಇದಾಗಿದೆ ಎಂದು ಯಶ್‌ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಆಕರ್ಷಿಕ ಹಿನ್ನೆಲೆ ಸಂಗೀತದೊಂದಿಗಿನ ಟೀಸರ್‌ ಗಮನ ಸೆಳೆಯುತ್ತಿದೆ. ಟೀಸರ್‌ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆಯಾಗಿರುವುದು ವಿಶೇಷ. 10-4-2025ರಂದು ಸಿನಿಮಾ ರಿಲೀಸ್‌ ಆಗಲಿದೆ. ಗೀತು ಮೋಹನ್‌ದಾಸ್‌ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕುರಿತಂತೆ ಮತ್ತಾವುದೇ ಮಾಹಿತಿ ಇಲ್ಲ. ಮುಂದಿನ ಕೆಲವು ದಿನಗಳಲ್ಲಿ ಸಿನಿಮಾ ಕುರಿತಂತೆ ಒಂದೊಂದೇ ಮಾಹಿತಿ ಹೊರಗೆಡಹುವುದಾಗಿ KVN Productions ಹೇಳಿದೆ.

‘KGF 2’ ತೆರೆಕಂಡ ಸುದೀರ್ಘ ಅವಧಿಯ ನಂತರ ಯಶ್‌ ‘TOXIC’ ಘೋಷಣೆಯಾಗಿದೆ. ಟೀಸರ್‌ನಲ್ಲಿ ಯಶ್‌ ಅವರ ಪೂರ್ಣ ಲುಕ್‌ ರಿವೀಲ್‌ ಆಗಿಲ್ಲ. ಜೋಕರ್‌ ಕಾರ್ಡ್‌, ಹ್ಯಾಟ್‌ ತೊಟ್ಟಿರುವ ಯಶ್‌ ಇಮೇಜಿನ ಗ್ರಾಫಿಕ್ಸ್‌ ಜೊತೆ ಹಿನ್ನೆಲೆ ಸಂಗೀತದ ಗುಂಗು ಇದೆ. ಚಿತ್ರವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲಯಾಳಂ ನಿರ್ದೇಶಕ ಗೀತು ಮೋಹನ್‌ದಾಸ್‌ ನಿರ್ದೇಶಿಸಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿತ್ತು. ಅದೀಗ ಅಧಿಕೃತವಾಗಿದೆ. KVN Productions ಜೊತೆ ಮಾಸ್ಟರ್‌ಮೈಡ್‌ ಕ್ರಿಯೇಶನ್ಸ್‌ ಜೊತೆಗೂಡಿ ಪ್ರಾಜೆಕ್ಟ್‌ ನಿರ್ವಹಿಸುತ್ತಿವೆ. ನಟಿ ಗೀತು ಮೋಹನ್‌ ದಾಸ್‌ ನಿರ್ದೇಶಕಿಯಾಗಿ ಹೆಸರು ಮಾಡುತ್ತಿದ್ದಾರೆ. 2019ರಲ್ಲಿ ತೆರೆಕಂಡಿದ್ದ ಅವರ ನಿರ್ದೇಶನದ ‘ಮೂಥಾನ್‌’ ಮಲಯಾಳಂ – ಹಿಂದಿ ದ್ವಿಭಾಷಾ ಸಿನಿಮಾ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಗಳಿಸಿತ್ತು. ‘ಲಯರ್ಸ್‌ ಡೈಸ್‌’ (2014) ಅವರ ನಿರ್ದೇಶನದ ಮತ್ತೊಂದು ಹಿಂದಿ ಸಿನಿಮಾ.

LEAVE A REPLY

Connect with

Please enter your comment!
Please enter your name here