ಅರುಣೋದಯ್‌ ಸಿಂಗ್‌ ಅಭಿನಯದ ‘ಅಪಹರಣ್‌’ 2ನೇ ಸೀಸನ್‌ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದ್ದು, ಟೀಸರ್‌ ರಿಲೀಸ್‌ ಆಗಿದೆ. ನಿಧಿ ಸಿಂಗ್‌, ವರುಣ್‌ ಬಡೋಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸರಣಿ Voot Select ನಲ್ಲಿ ಮೂಡಿಬರಲಿದ್ದು, ಸದ್ಯದಲ್ಲೇ ಸ್ಟ್ರೀಮಿಂಗ್‌ ದಿನಾಂಕ ಘೋಷಣೆಯಾಗಲಿದೆ.

ಏಕ್ತಾ ಕಪೂರ್‌ ನಿರ್ಮಾಣದ ‘ಅಪಹರಣ್‌ 2’ ವೆಬ್‌ ಸರಣಿಯ ಮೊದಲ ಟೀಸರ್‌ ಬಿಡುಗಡೆಯಾಗಿದೆ. 2018ರಲ್ಲಿ ಹನ್ನೆರೆಡು ಎಪಿಸೋಡುಗಳ ಮೊದಲ ಸೀಸನ್‌ ಸ್ಟ್ರೀಮ್‌ ಆಗಿತ್ತು. ಅರುಣೋದಯ ಸಿಂಗ್‌ ಜೊತೆ ಆಗ ವರುಣ್‌ ಬಡೋಲಾ, ಮಹೀ ಗಿಲ್‌, ಮೋನಿಕಾ ಚೌಧರಿ, ನಿಧಿ ಸಿಂಗ್‌ ನಟಿಸಿದ್ದರು. ಈ ಸೀಸನ್‌ಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೆ ವೀಕ್ಷಕರು 2ನೇ ಸೀಸನ್‌ ಎದುರು ನೋಡುತ್ತಿದ್ದರು. ಮೊದಲ ಸೀಸನ್‌ನಂತೆ ಸೆಕೆಂಡ್‌ ಸೀಸನ್‌ನಲ್ಲೂ ನಟ ಅರುಣೋದಯ ಸಿಂಗ್‌ ಪೊಲೀಸ್‌ ಅಧಿಕಾರಿ ರುದ್ರ ಶ್ರೀವಾತ್ಸವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭೋಜ್‌ಪುರಿ ಆಕ್ಸೆಂಟ್‌ನಲ್ಲಿ ಹಿಂದಿ ಮಾತನಾಡುವ ಖಡಕ್‌ ಪೊಲೀಸ್‌ ಆಫೀಸರ್‌ ಆಗಿ ಅವರು ಗಮನ ಸೆಳೆಯುತ್ತಾರೆ.

ಸರಣಿಯ ಸೆಕೆಂಡ್‌ ಸೀಸನ್‌ ಅಫಿಷಿಯಲ್‌ ಸಿನಾಪ್ಸಿಸ್‌ ಹೀಗೆ ಹೇಳುತ್ತದೆ – “ರುದ್ರ ಶ್ರೀವಾತ್ಸವ್‌ ಮರಳುತ್ತಿದ್ದಾರೆ. ಉತ್ತರ ಪ್ರದೇಶ ಮೂಲದ ಒಳ್ಳೆಯ ಮನಸ್ಸಿನ ಆದರೆ ಖಡಕ್‌ ಪೊಲೀಸ್‌ ಆಫೀಸರ್‌. ಅಪಹರಣದ ಕೇಸ್‌ಗಳನ್ನು ಬಗೆಹರಿಸುವ ಎಕ್ಸ್‌ಪರ್ಟ್‌. ಈ ಬಾರಿ ಮತ್ತಷ್ಟು ರೋಚಕ ಕೇಸ್‌ಗಳಲ್ಲಿ ರುದ್ರನನ್ನು ಕಣ್ತುಂಬಿಕೊಳ್ಳಬಹುದು”. ಎರಡನೇ ಸೀಸನ್‌ ನಿರೀಕ್ಷೆಯಲ್ಲಿದ್ದ ವೀಕ್ಷಕರು ಟೀಸರ್‌ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. Voot Select ನಲ್ಲಿ ಸರಣಿ ಸ್ಟ್ರೀಮ್‌ ಆಗಲಿದ್ದು, ಸ್ಟ್ರೀಮಿಂಗ್‌ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ.

LEAVE A REPLY

Connect with

Please enter your comment!
Please enter your name here