ಮಮ್ಮೂಟಿ ಅಭಿನಯದ ಯಶಸ್ವೀ ‘ಭ್ರಮಯುಗಂ’ ಮಲಯಾಳಂ ಸಿನಿಮಾದ OTT ಸ್ಟ್ರೀಮಿಂಗ್‌ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 15ರಂದು ಥಿಯೇಟರ್‌ಗೆ ಬಂದಿದ್ದ ಈ ಸಿನಿಮಾಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ರಾಹುಲ್ ಸದಾಶಿವನ್ ಬರೆದು ನಿರ್ದೇಶಿಸಿರುವ ಸಿನಿಮಾ SonyLivನಲ್ಲಿ ಸ್ಟ್ರೀಮ್‌ ಆಗಲಿದೆ.

ಮಮ್ಮೂಟಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಭ್ರಮಯುಗಂ’ ಮಲಯಾಳಂ ಸಿನಿಮಾದ OTT ದಿನಾಂಕ ನಿಗಧಿಯಾಗಿದೆ. ಚಿತ್ರವನ್ನು ರಾಹುಲ್ ಸದಾಶಿವನ್ ಬರೆದು, ನಿರ್ದೇಶಿಸಿದ್ದು, ಈ ಹಾರರ್-ಥ್ರಿಲ್ಲರ್ ಸಿನಿಮಾದಲ್ಲಿ ಅರ್ಜುನ್ ಅಶೋಕನ್, ಸಿದ್ಧಾರ್ಥ್ ಭರತನ್, ಅಮಲ್ಡಾ ಲಿಜ್ ಸೇರಿದಂತೆ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಫೆಬ್ರವರಿ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಂದು ತಿಂಗಳ ನಂತರ ಇದೇ ಮಾರ್ಚ್‌ 15ರಂದು ಸಿನಿಮಾ Sony LIVನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಅಧಿಕಾರದ ಆಟದಲ್ಲಿ ಸಿಕ್ಕಿಬಿದ್ದ ಮೂರು ಪ್ರಮುಖ ಪಾತ್ರಗಳ ಸುತ್ತ ಈ ಚಿತ್ರಕಥೆ ಸುತ್ತುತ್ತದೆ. ಸಿನಿಮಾ ಚಿತ್ರಮಂದಿರಗಳಲ್ಲಿ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಚಲನಚಿತ್ರವನ್ನು Night Shift Studios ಬ್ಯಾನರ್‌ ಅಡಿಯಲ್ಲಿ ರಾಮಚಂದ್ರ ಚಕ್ರವರ್ತಿ ಮತ್ತು ಎಸ್ ಶಶಿಕಾಂತ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಟಿಡಿ ರಾಮಕೃಷ್ಣನ್ ಸಂಭಾಷಣೆ ಬರೆದಿದ್ದು, ಶೆಹನಾದ್ ಜಲಾಲ್ ಛಾಯಾಗ್ರಹಣವಿದೆ. ಕ್ರಿಸ್ಟೋ ಕ್ಸೇವಿಯರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ‘The Age of Madness’ ಎಂಬ ಅಡಿಬರಹ ಹೊಂದಿರುವ ಈ ಚಿತ್ರದಲ್ಲಿ ನಟ, ನಿರ್ದೇಶಕ ಸಿದ್ಧಾರ್ಥ್ ಭರತನ್ ಮತ್ತು ‘ಕಮ್ಮಟ್ಟಿಪಾಡಂ’ ನಟಿ ಅಮಲ್ಡಾ ಲಿಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಮೂಲ ಮಲಯಾಳಂ ಸೇರಿದಂತೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರದರ್ಶನ ಕಂಡಿತ್ತು.

LEAVE A REPLY

Connect with

Please enter your comment!
Please enter your name here