ಡಿ.ಸತ್ಯಪ್ರಕಾಶ್‌ ನಿರ್ದೇಶನದ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಟ್ರೈಲರ್‌ ಬಿಡುಗಡೆಯಾಗಿದೆ. ಸಿನಿಮಾವೊಂದರ ಆಡಿಷನ್‌ ಪ್ರಕ್ರಿಯೆಯೇ ಇಲ್ಲಿ ಸಿನಿಮಾ ಆಗಿರುವಂತಿದೆ! ಪಿಆರ್‌ಕೆ ಪ್ರೊಡಕ್ಷನ್ಸ್‌ನ ಸಿನಮಾ ಮೇ 5ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

‘ರಾಮಾ ರಾಮಾ ರೇ’ ಮತ್ತು ‘ಒಂದಲ್ಲ ಎರಡಲ್ಲ’ ಸಿನಿಮಾಗಳ ನಿರ್ದೇಶಕ ಡಿ.ಸತ್ಯಪ್ರಕಾಶ್‌ ನಿರ್ದೇಶನದ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಪಿಆರ್‌ಕೆ ಪ್ರೊಡಕ್ಷನ್ಸ್‌, ಮಯೂರ ಪಿಕ್ಚರ್ಸ್‌ ಮತ್ತು ಸತ್ಯ ಪಿಕ್ಚರ್ಸ್‌ ನಿರ್ಮಿಸಿರುವ ಚಿತ್ರ ನಾಡಿದ್ದು ಮೇ 5ರಂದು ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ‘ರಾಮಾ ರಾಮಾ ರೇ’ ನಂತರ ಈ ಚಿತ್ರದಲ್ಲಿ ನಟರಾಜ್ ಅವರು ತಮ್ಮ ಗೆಳೆಯ ಸತ್ಯಪ್ರಕಾಶ್‌ ಅವರೊಂದಿಗೆ ಮತ್ತೆ ಜೊತೆಯಾಗಿದ್ದಾರೆ. “ಇಲ್ಲಿ ಮನುಷ್ಯ ಸಂಬಂಧಗಳ ಕುರಿತಾದ ಕತೆ. ಸದ್ಯ ಈಗಿನ ಸೋಷಿಯಲ್ ಲೈಫ್‌ನಲ್ಲಿ ಯಾವುದೂ ಖಾಸಗಿಯಾಗಿ ಉಳಿದಿಲ್ಲ. ಈ ಎಳೆಯೊಂದಿಗೆ ನಿರ್ದೇಶಕರು ಸಿನಿಮಾ ಮಾಡಿದ್ದಾರೆ. ಚಿತ್ರದಲ್ಲಿ ನಾನು ಸಿನಿಮಾ ಡೈರೆಕ್ಟರ್‌ ಪಾತ್ರ ಮಾಡಿದ್ದೇನೆ” ಎನ್ನುತ್ತಾರೆ ಚಿತ್ರದ ಪ್ರಮುಖ ಪಾತ್ರಧಾರಿ ನಟರಾಜ್‌. ಧರ್ಮಣ್ಣ, ವಾಸುಕಿ ವೈಭವ್‌, ರಂಗಭೂಮಿ ಕಲಾವಿದರಾದ ಅಥರ್ವ ಮತ್ತು ಬೃಂದಾ ವಿಕ್ರಂ, ಮಯೂರಿ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರಲ್ಲದೆ ಸುಮಾರು ಐವತ್ತಕ್ಕೂ ಹೆಚ್ಚು ರಂಗಭೂಮಿ ಕಲಾವಿದರು ನಟಿಸಿದ್ದಾರೆ. ಬಹುಪಾಲು ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆದಿದೆ. ನಿರ್ದೇಶಕ ಯೋಗರಾಜ್ ಭಟ್‌ ಮತ್ತು ಚಿತ್ರಸಾಹಿತಿ ವಿ.ಮನೋಹರ್ ಒಂದೊಂದು ಗೀತೆ ರಚಿಸಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ.

LEAVE A REPLY

Connect with

Please enter your comment!
Please enter your name here