ಅಭಯ್‌ ನಟನೆಯ ‘ಮಂಡ್ಯ ಹೈದ’ ಸಿನಿಮಾದ ಟೀಸರ್‌ ಮತ್ತು ಶೀರ್ಷಿಕೆ ಗೀತೆ ಬಿಡುಗಡೆಯಾಗಿದೆ. ಶ್ರೀಕಾಂತ್‌ ಕತೆ, ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಈ ಸಿನಿಮಾದ ನಾಯಕಿ ಭೂಮಿಕಾ.

ವಿ ಶ್ರೀಕಾಂತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಮಂಡ್ಯ ಹೈದ’ ಚಿತ್ರದ ಟೀಸರ್‌ ಮತ್ತು ಚಿತ್ರದ ಶೀರ್ಷಿಕೆ ಗೀತೆ ‘ಕಾವೇರಮ್ಮನ ಮಡಿಲಲ್ಲಿ ಹಾಡಿ ಬೆಳೆದವ್ನೆ’ ಎಂಬ ಸಾಹಿತ್ಯವಿರುವ ನಾಯಕನ ಪರಿಚಯದ ಹಾಡು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಯುವನಟ ಅಭಯ್ ಚಂದ್ರಶೇಖರ್ ಮಂಡ್ಯ ಹುಡುಗನಾಗಿ ಕಾಣಿಸಿಕೊಂಡಿಸಿದ್ದು, ಭೂಮಿಕಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಅಭಯ್‌ ಈ ಹಿಂದೆ ‘ಮನಸಾಗಿದೆ’ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು. Tejas Creations ಮೂಲಕ ಅಭಯ್ ತಂದೆ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

‘ಇದು ನಮ್ಮ ಬ್ಯಾನರ್‌ನ ಐದನೇ ಹಾಗೂ ಅಭಯ್ ನಟನೆಯ ಎರಡನೇ ಚಿತ್ರ. ಟೈಟಲ್ ಕೇಳಿದಾಗ ವಿಲೇಜ್ ಕಾನ್ಸೆಪ್ಟ್ ಅನ್ನೋದು ಗೊತ್ತಾಗುತ್ತೆ, ಪ್ರೀತಿ ಎಲ್ಲರಿಗೂ ಗೊತ್ತಿರುವ ಪದ. ಅದೊಂದು ವಿಸ್ಮಯ, ಇದರ ಅರ್ಥ ಯಾರಿಗೂ ಗೊತ್ತಿಲ್ಲ, ಅದನ್ನು ಪಡೆಯಲು ಕೆಲವರು ಸಾಯ್ತಾರೆ, ಮತ್ತೆ ಕೆಲವರು ಸಾಯಿಸ್ತಾರೆ, ನಮ್ಮ ಹೀರೋ ಕೂಡ ಈ ಪ್ರೀತಿಯನ್ನು ಪಡೆಯಲು ಹೋಗಿ ಯಾರನ್ನಾದರೂ ಸಾಯಿಸ್ತಾನಾ ಅಥವಾ ತಾನೇ ಸಾಯ್ತಾನಾ ಎನ್ನುವುದೇ ನಮ್ಮ ಚಿತ್ರ. ಶೇ 90ರಷ್ಟು ಕಥೆ ಮಂಡ್ಯ ಭಾಗದಲ್ಲೇ ನಡೆದರೆ, ಉಳಿದದ್ದು ಬೆಂಗಳೂರಲ್ಲಿ ನಡೆಯುತ್ತದೆ. ಜನಪ್ರಿಯ ಕಾಮಿಡಿ ಕಿಲಾಡಿಗಳು ಶೋನ 15 ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ’ ಎನ್ನುತ್ತಾರೆ ನಿರ್ಮಾಪಕರು.

ನಿರ್ದೇಶಕ ಶ್ರೀಕಾಂತ್‌ ಮಾತನಾಡಿ, ‘ಕಮರ್ಷಿಯಲ್ ಎಂಟರ್‌ಟೇನರ್‌ ಹಾಗೂ ಲವ್ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಚಿತ್ರವಿದು. ನನ್ನ ಮೊದಲ ಚಿತ್ರಕ್ಕೆ ಇಂಥ ಒಳ್ಳೇ ತಂಡ ಸಿಕ್ಕಿರುವುದು ಖುಷಿಯಾಗಿದೆ. ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ’ ಎನ್ನುತ್ತಾರೆ. ಹೀರೋ ಅಭಯ್‌ ಚಿತ್ರದಲ್ಲಿ ಮಂಡ್ಯ ಹೈದ ‘ಶಿವ’ನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಶಿವನ ಜೀವನದಲ್ಲಿ ಆಗುವ ಘಟನೆಗಳೇ ಈ ಚಿತ್ರದ ಹೈಲೈಟ್. ಚಿತ್ರದಲ್ಲಿ ಪ್ರಮುಖವಾಗಿ 3 ಮೆಸೇಜ್‌ಗಳಿವೆ, ಪ್ರೀತಿಸುವವರಿಗೆ, ಪೋಷಕರಿಗೆ ಹಾಗೂ ಸ್ನೇಹಿತರಿಗೆ ಸಂದೇಶವಿದೆ’ ಎನ್ನುತ್ತಾರೆ. ಅಭಯ್‌. ಮುಂಬೈನಲ್ಲಿ ಹುಟ್ಟಿ ಬೆಳೆದ ಕನ್ನಡತಿ ಭೂಮಿಕಾ ಚಿತ್ರದ ನಾಯಕಿ. ಹಿಂದಿ, ಮರಾಠಿ ಸೀರಿಯಲ್‌ಗಳಲ್ಲಿ ನಟಿಸಿರುವ ಅವರು ಕನ್ನಡ ಸೀರಿಯಲ್‌ಗಳಲ್ಲೂ ನಟಿಸಿದ್ದಾರೆ. ಬಲ ರಾಜವಾಡಿ, ಸುನಂದ ಕಲಾವಿದರ ಜೊತೆಗೆ ನಿರ್ಮಾಪಕ ಚಂದ್ರಶೇಖರ್ ಅವರು ಕಥೆಗೆ ಟ್ವಿಸ್ಟ್ ಕೊಡುವಂಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here