ಅಭಿಷೇಕ್‌ ನಮಾ ನಿರ್ದೇಶನದ ‘Devil’ ತೆಲುಗು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ನಂದಮೂರಿ ಕಲ್ಯಾಣ್‌ ರಾಮ್‌, ಸಂಯುಕ್ತಾ ಮೆನನ್‌, ಮಾಳವಿಕಾ ನಾಯರ್‌ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಇದೇ ಡಿಸೆಂಬರ್‌ 29ರಂದು ಸಿನಿಮಾ ತೆರೆಕಾಣಲಿದೆ.

ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ‘Devil-The British Agent’ ತೆಲುಗು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರದಲ್ಲಿ ಸಂಯುಕ್ತಾ ಮೆನನ್ ಮತ್ತು ಮಾಳವಿಕಾ ನಾಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾವನ್ನು ಅಭಿಷೇಕ್‌ ನಮಾ ನಿರ್ದೆಶಿಸಿದ್ದಾರೆ. ವಿಜಯಾ ಎಂಬುವವಳ ಹತ್ಯೆಗೆ ಸಂಬಂಧಿಸಿದಂತೆ ಬ್ರಿಟಿಷ್ ಅಧಿಕಾರಿಯೊಬ್ಬರು ‘ಏಜೆಂಟ್ ಡೆವಿಲ್’ ಅವರನ್ನು ಸಂಪರ್ಕಿಸಲು ಕರೆ ಮಾಡುವುದರೊಂದಿಗೆ ಟ್ರೇಲರ್ ಪ್ರಾರಂಭವಾಗುತ್ತದೆ. ತನಿಖೆಗೆಂದು ಬಂದ ನಾಯಕ ವಿಚಾರಣೆ ಪ್ರಾರಂಭಿಸುತ್ತಾನೆ. ಅನೇಕ ವ್ಯಕ್ತಿಗಳ ಕೈವಾಡವಿರುವ ಈ ಕೊಲೆಯಲ್ಲಿ ರೋಚಕತೆ ಮತ್ತು ಪಿತೂರಿಗಳು ಹೆಚ್ಚಾಗಿಯೇ ನಡೆದಿರುತ್ತವೆ. ಚಿತ್ರತಂಡವು ಕಥಾವಸ್ತುವನ್ನು ಎಲ್ಲಿಯೂ ಬಿಟ್ಟುಕೊಡದೆ ರಹಸ್ಯವಾಗಿಯೇ ಕಥೆಯನ್ನು ಟ್ರೇಲರ್‌ನಲ್ಲಿ ಮುಂದುವರೆಸಿದೆ.

ಈ ಸಿನಿಮಾದಲ್ಲಿ ಸತ್ಯ, ಶ್ರೀಕಾಂತ್ ಅಯ್ಯಂಗಾರ್, ಎಸ್ತರ್ ನೊರೊನ್ಹಾ, ಶಫಿ, ಅಜಯ್ ಮತ್ತು ಹಿರಿಯ ನಟಿ ಸೀತಾ ಕೂಡ ಚಿತ್ರದ ಭಾಗವಾಗಿದ್ದಾರೆ. ಶ್ರೀಕಾಂತ್ ವಿಸ್ಸಾ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ ಮತ್ತು ಹರ್ಷವರ್ಧನ್ ರಾಮೇಶ್ವರ್ ಸಂಗೀತ ನೀಡಿದ್ದು, ಗಾಂಧಿ ನಡಿಕುಡಿಕರ್ ನಿರ್ಮಾಣ ವಿನ್ಯಾಸಕರು. ಚಿತ್ರಕ್ಕೆ ಹಿರಿಯ ತಂತ್ರಜ್ಞ ಸೌಂದರ್ ರಾಜನ್ ಎಸ್ ಛಾಯಾಗ್ರಹಣ, ತಮ್ಮಿರಾಜು ಸಂಕಲನವಿದೆ. ಪ್ರಶಾಂತ್ ಬಾರಾಡಿ ಕೂಡ ಕಥೆಯ ಬೆಳವಣಿಗೆಯಲ್ಲಿ ತಂಡಕ್ಕೆ ಸಹಾಯ ಮಾಡಿದ್ದಾರೆ. ವೆಂಕಟ್ ಮತ್ತು ರಾಮಕೃಷ್ಣ ಆಕ್ಷನ್ ಸೀಕ್ವೆನ್ಸ್‌ ಸಂಯೋಜನೆ ಮಾಡಿದ್ದು, ವಿಜಯ್ ರತ್ನಂ ಧ್ವನಿ ವಿನ್ಯಾಸ ಮಾಡಿದ್ದಾರೆ. ಸಿನಿಮಾ ಡಿಸೆಂಬರ್‌ 29ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here