ಕುಬೇಂಥಿರನ್‌ ಕಾಮಾಚಿ ನಿರ್ದೇಶನದ ‘ಮಂಗೈ’ ಮಹಿಳಾ ಪ್ರಧಾನ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಕಯಲ್ ಆನಂದಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಲಿಂಗ ಅಸಮಾನತೆಯ ಕುರಿತಾದ ಕಥಾವಸ್ತು ಹೊಂದಿದೆ.

ಕಯಲ್ ಆನಂದಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಮಂಗೈ’ ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಚಿತ್ರವನ್ನು ಕುಬೇಂಥಿರನ್ ಕಾಮಾಚಿ ನಿರ್ದೇಶಿಸಿದ್ದಾರೆ. ಸಮಾಜದಲ್ಲಿ ಇನ್ನೂ ಅಸ್ತಿತ್ವದಲ್ಲಿರುವ ಲಿಂಗ ಅಸಮಾನತೆಯ ನಿಯಮಗಳ ವಿರುದ್ಧ ಮಂಗೈ ಎಂಬ ಯುವತಿಯ ಹೋರಾಟವನ್ನು ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಕೆಲವು ಕಠಿಣ ಸಂದರ್ಭಗಳಲ್ಲಿ ಪುರುಷರು ಮಹಿಳೆಯರನ್ನು ಹೇಗೆ ನೋಡುತ್ತಾರೆ ಮತ್ತು ಅವಳು ಪುರುಷನೊಂದಿಗೆ ರಸ್ತೆಯಲ್ಲಿ ಪ್ರಯಾಣಿಸುವಾಗ ಅನುಭವಿಸಿದ ಕೆಲವು ಸೂಕ್ಷ ಅಂಶಗಳ ಬಗ್ಗೆ ಮಂಗೈ ಮಾತನಾಡಿದ್ದಾಳೆ. ಮಹಿಳಾ ಪ್ರಧಾನವಾದ ಈ ಸಿನಿಮಾದಲ್ಲಿ ಪುರುಷರ ದಬ್ಬಾಳಿಕೆಗೆ ಒಳಗಾದ ಮಹಿಳೆಯರು ಯಾವ ರೀತಿ ಜೀವನದಲ್ಲಿ ಸಮಸ್ಯೆ ಎದುರಿಸುತ್ತಾರೆ ಎಂಬ ಕತೆ ಇದೆ.

ಈ ಚಿತ್ರಕ್ಕೆ ಕೇರಳದ ಮುನ್ನಾರ್ ಮತ್ತು ಪೂಪಾರಾ, ತಮಿಳುನಾಡಿನ ತೇಣಿ, ಕುಂಬಂ, ಕೂಡಲೂರ್, ಲೋವರ್ ಕ್ಯಾಂಪ್ ಮತ್ತು ಚೆನ್ನೈನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರವು ಇದೇ ವರ್ಷ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ. ವಿಜಯ್ ಸೇತುಪತಿ, ನಿರ್ದೇಶಕರಾದ ವೆಟ್ರಿಮಾರನ್ ಮತ್ತು ಅಮೀರ್ ಜನವರಿಯಲ್ಲಿ ‘ಮಂಗೈ’ ಚಿತ್ರದ ಫಸ್ಟ್‌ಲುಕ್‌ ಪೋಸ್ಟರ್ ಅನಾವರಣಗೊಳಿಸಿದ್ದರು. ಮಹಿಳಾ ಪ್ರಧಾನ ಸಿನಿಮಾವನ್ನು ಬಿಂಬಿಸುವ ಪೋಸ್ಟರ್ ನೋಡುಗರಲ್ಲಿ ಕುತೂಹಲ ಮೂಡಿಸಿತ್ತು. ಈ ಪೋಸ್ಟರ್ ಚಿತ್ರದಲ್ಲಿನ ಕಯಲ್ ಆನಂದಿ ಪಾತ್ರದ ಒಂದು ನೋಟವನ್ನು ಸಹ ನೀಡಿತ್ತು. JSM Pictures banner ಅಡಿಯಲ್ಲಿ ಎ ಆರ್ ಜಾಫರ್ ಸಾಧಿಕ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ದುಷ್ಯಂತ್ ಜಯಪ್ರಕಾಶ್, ರಾಮ್ ಮತ್ತು ಆದತ್ಯ ಕಥಿರ್ ಈ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here