ಅಧಿಕ್‌ ರವಿಚಂದ್ರನ್‌ ರಚಿಸಿ ನಿರ್ದೇಶಿಸಿರುವ ‘ಮಾರ್ಕ್‌ ಆಂಟನಿ’ ತಮಿಳು ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ವಿಶಾಲ್‌, ಎಸ್‌ ಜೆ ಸೂರ್ಯ, ಸುನೀಲ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್‌ 15ರಂದು ಸಿನಿಮಾ ತೆರೆಕಾಣಲಿದೆ.

ವಿಶಾಲ್ ಮತ್ತು ಎಸ್‌ ಜೆ ಸೂರ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಮಾರ್ಕ್ ಆಂಟನಿ’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. ಅಧಿಕ್‌ ರವಿಚಂದ್ರನ್‌ ರಚಿಸಿ, ನಿರ್ದೇಶಿಸಿರುವ ಆಕ್ಷನ್, ಕಾಮಿಡಿ, ಗ್ಯಾಂಗ್‌ಸ್ಟರ್‌ ಕಥಾಹಂದರ ಇದು. 90ರ ದಶಕದಲ್ಲಿ ನಡೆಯುವ ಕಥೆಯಲ್ಲಿ ವಿಶಾಲ್ ಮತ್ತು ಸೂರ್ಯನನ್ನು ದುಷ್ಟರೆಂದು ಬಿಂಬಿಸಲಾಗಿದೆ. ‘ಮಾರ್ಕ್ ಆಂಟೋನಿಯ ಜಗತ್ತಿಗೆ ಸುಸ್ವಾಗತ ಬ್ರೋ’ ಎಂಬ ಮಾತಿನಿಂದ ಟ್ರೈಲರ್ ಪ್ರಾರಂಭವಾಗುತ್ತದೆ. ‘ಕಾಮಿಡಿ – ಗ್ಯಾಂಗ್‌ಸ್ಟರ್‌’ ನಾಯಕರುಗಳಾಗಿ ವಿಶಾಲ್‌ ಮತ್ತು ಸೂರ್ಯ ಸೊಗಸಾಗಿ ನಟಿಸಿದ್ದಾರೆ. ‘ಆಂಟನಿ ಅಂದರೆ ವಿಲ್ಲನ್‌, ವಿಲ್ಲನ್‌ ಅಂದರೆ ಹೇಗಿರುತ್ತಾರೆ ಹಾಗೇ ನಾನಿದ್ದೇನೆ’, ‘ಕೆಟ್ಟದರಲ್ಲಿ ಒಳ್ಳೆಯದು ಯಾವುದು? ಒಳ್ಳೆಯದರಲ್ಲಿ ಕೆಟ್ಟದ್ದು ಯಾವುದು? ಆಂಟನಿ ಅಂದ್ರೆನೆ ಇವಿಲ್‌’ ಎಂದು ವಿಶಾಲ್‌ ಹೇಳುತ್ತಾನೆ.

ವಿಜ್ಞಾನಿ (ಸೆಲ್ವ ರಾಘವನ್) ಕಂಡುಹಿಡಿದ ಟೈಮ್ ಟ್ರಾವೆಲ್ ಯಂತ್ರವು ವಿಶಾಲ್ ಕೈಗೆ ಸಿಗುತ್ತದೆ. ನಂತರ ವಿಷಯಗಳು ತಿರುವು ಪಡೆಯುತ್ತವೆ. ‘ಗ್ಯಾಂಗ್‌ಸ್ಟರ್‌ ಅಂದರೆ ಒಂದು ಡಿಸಿಪ್ಲೀನ್‌ ಇದೆ ನಿನಗ ಗೊತ್ತಾ ಎಷ್ಟು ಆಂಟಿಯರು ನನ್ನ ಅಧೀನದಲ್ಲಿದ್ದಾರೆ’ ಎನ್ನುವ ಗ್ಯಾಂಗ್‌ಸ್ಟರ್‌ S J ಸೂರ್ಯನ ‘ಲೇಡೀಸ್‌ ಮ್ಯಾಟರ್‌’ ಎಂಬ ಹಾಸ್ಯ ವಿಷಯವು ಟ್ರೇಲರ್‌ನಲ್ಲಿ ಹೆಚ್ಚು ನಗಿಸುತ್ತದೆ. ವಿಶಾಲ್‌ ಮತ್ತು ಸೂರ್ಯನನ್ನು ಮುಗಿಸಲು ಸಾಕಷ್ಟು ಬೇರೆ ಬೇರೆ ಗುಂಪುಗಳು ಯೋಜನೆ ಹಾಕುತ್ತಿರುತ್ತವೆ. ಆದರೆ ಈ ಎಲ್ಲಾ ಅಂಶಗಳನ್ನು ಹಾಸ್ಯ ಮತ್ತು ಥ್ರಿಲ್ಲರ್ ಮೂಲಕ ಟ್ರೈಲರ್‌ನಲ್ಲಿ ತೋರಿಸಲಾಗಿದೆ. Mini Studio ಬ್ಯಾನರ್‌ ಅಡಿ ಎಸ್‌ ವಿನೋದ್‌ ಕುಮಾರ್‌ ಚಿತ್ರ ನಿರ್ಮಿಸಿದ್ದು, G V ಪ್ರಕಾಶ್‌ ಕುಮಾರ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯ್‌ ವೇಲುಕುಟ್ಟಿ ಸಂಕಲನ, R K ವಿಜಯ ಮುರುಘನ್‌ ಕಲಾ ನಿರ್ದೇಶನ, ದಿನೇಶ್‌, ಬಾಬು ಭಾಸ್ಕರ್‌ ಮತ್ತು ಅಜಾರ್‌ ಛಾಯಾಗ್ರಹಣ ಸಿನಿಮಾಗಿದೆ. ಇದೇ ಸೆಪ್ಟೆಂಬರ್‌ 15ರಂದು ಸಿನಿಮಾ ತೆರೆಕಾಣಲಿದೆ.

Previous article‘ಇರೈವನ್‌’ ಟ್ರೈಲರ್‌ | ಜಯಂ ರವಿ, ನಯನತಾರಾ, ರಾಹುಲ್‌ ಬೋಸ್‌ ತಮಿಳು ಸಿನಿಮಾ
Next articleಚಿತ್ರಕಥೆ, ಸಂಕಲನದ ಮಿತಿಗಳನ್ನು ಮರೆಮಾಚುವ ಡಾರ್ಕ್‌ ಕಾಮಿಡಿ

LEAVE A REPLY

Connect with

Please enter your comment!
Please enter your name here