‘ಸಾಮಜವರಗಮನ’ ತೆಲುಗು ಸಿನಿಮಾ ಮತ್ತು ಮಾರಿ ಸೆಲ್ವರಾಜ್‌ ನಿರ್ದೇಶನದ ‘ಮಾಮನ್ನನ್‌’ ತಮಿಳು ಸಿನಿಮಾ ಈ ವಾರ OTTಯಲ್ಲಿ ಸಿಗಲಿವೆ. ರಾಮ್‌ ಅಬ್ಬರಾಜು ನಿರ್ದೇಶನದ ‘ಸಾಮಜವರಗಮನ’ Ahaದಲ್ಲಿ ಮತ್ತು ‘ಮಾಮನ್ನನ್‌’ Netflixನಲ್ಲಿ ಸ್ಟ್ರೀಮ್‌ ಆಗುತ್ತಿವೆ.

ಸಾಮಜವರಗಮನ | Aha, ಇಂದಿನಿಂದ (ಜುಲೈ 28) | ಬಾಲಸುಬ್ರಮಣ್ಯಂ ಅಥವಾ ಬಾಲು ಒಬ್ಬ ಜವಾಬ್ದಾರಿಯುತ ಮಧ್ಯಮವರ್ಗದ ವ್ಯಕ್ತಿ. ಇವನು ಹೈದರಾಬಾದ್‌ನಲ್ಲಿರುವ ಮಲ್ಟಿಪ್ಲೆಕ್ಸ್‌ನಲ್ಲಿ ಟಿಕೆಟ್ ಗುಮಾಸ್ತನಾಗಿ ಕೆಲಸ ಮಾಡುತ್ತಿರುತ್ತಾನೆ. ಅವನ ತಂದೆ ತನ್ನ ಪೂರ್ವಜರ ಆಸ್ತಿಯನ್ನು ಪಡೆಯಲಾಗದೆ ತನ್ನ ಪದವಿಯನ್ನು ಗಳಿಸಲು ಪ್ರಯತ್ನಿಸುವ ಕಥಾಹಂದರ ಈ ತೆಲುಗು ಚಿತ್ರದ್ದು. ಕಾಮಿಡಿ ಜಾನರ್‌ ಸಿನಿಮಾಗೆ ಭಾನು ಬೋಗವರಪು ಕತೆ ರಚಿಸಿದ್ದು, ರಾಮ್ ಅಬ್ಬರಾಜು ನಿರ್ದೇಶಿಸಿದ್ದಾರೆ. AK ಎಂಟರ್‌ಟೇನ್‌ಮೆಂಟ್ಸ್‌ ಮತ್ತು ಹಾಸ್ಯ ಮೂವೀಸ್‌ ಬ್ಯಾನರ್‌ ಅಡಿ ರಾಜೇಶ್ ದಂಡಾ ನಿರ್ಮಿಸಿರುವ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಶ್ರೀ ವಿಷ್ಣು, ರೆಬಾ ಮೋನಿಕಾ ಜಾನ್, ನರೇಶ್, ಶ್ರೀಕಾಂತ್ ಅಯ್ಯಂಗಾರ್, ವೆನ್ನೆಲ ಕಿಶೋರ್, ಸುದರ್ಶನ್ ಮತ್ತು ದೇವಿ ಪ್ರಸಾದ್ ಅಭಿನಯಿದ್ದಾರೆ.

ಮಾಮಣ್ಣನ್‌ | Netflix, July 27ರಿಂದ | ಮಾರಿ ಸೆಲ್ವರಾಜ್ ನಿರ್ದೇಶನದ ‘ಮಾಮಣ್ಣನ್’ ತಮಿಳು ಪೊಲಿಟಿಕಲ್‌ – ಡ್ರಾಮಾ ಸಿನಿಮಾ. ತಂದೆ-ಮಗ ಮಾಮಣ್ಣನ್ ಮತ್ತು ವೀರ ಸುತ್ತ ಸುತ್ತುತ್ತದೆ. ರಾಜಕೀಯದಲ್ಲಿ ತನ್ನ ಅಸ್ಥಿತ್ವವನ್ನು ಸ್ಥಾಪಿಸಲು, ಅವರ ಪ್ರತಿಸ್ಪರ್ಧಿ ರತ್ನವೇಲು ಒಡ್ಡಿದ ಅಡೆತಡೆಗಳನ್ನು ಅವರು ನಿಭಾಯಿಸುವ ಕಥೆಯನ್ನು ಇದು ಒಳಗೊಂಡಿದೆ. ಇತ್ತೀಚೆಗೆ ದೊಡ್ಡ ಸುದ್ದಿ ಮಾಡಿದ ಚಿತ್ರವಿದು. ವಡಿವೇಲು, ಉದಯನಿಧಿ ಸ್ಟಾಲಿನ್‌, ಫಹಾದ್‌ ಫಾಸಿಲ್‌, ಕೀರ್ತಿ ಸುರೇಶ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. A R ರೆಹಮಾನ್ ಸಂಗೀತ, ಥೇನಿ ಈಶ್ವರ್, ಸೆಲ್ವ ಆರ್ಕೆ ಸಂಕಲನ, ಕುಮಾರ್ ಗಂಗಪ್ಪನ್ ಕಲಾ ನಿರ್ದೇಶನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here