ಫೆಬ್ರವರಿ 22ರಂದು ತೆರೆಕಂಡಿದ್ದ ಮಲಯಾಳಂ ಸಿನಿಮಾ ‘ಮಂಜುಮ್ಮೆಲ್ ಬಾಯ್ಸ್’ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಚಿದಂಬರಂ ಎಸ್ ಪೊದುವಲ್ ನಿರ್ದೇಶನದ ಥ್ರಿಲ್ಲರ್ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್ ಪೊದುವಾಳ್, ಲಾಲ್ ಜೂ, ದೀಪಕ್ ಪರಂಬೋಳ್, ಅಭಿರಾಮ್ ರಾಧಾಕೃಷ್ಣನ್ ನಟಿಸಿದ್ದಾರೆ.
ನೈಜ ಕಥೆಯಾಧಾರಿತ ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾ ಬಿಡುಗಡೆ ಆದಾಗಿನಿಂದಲೂ ಸದ್ದು ಮಾಡುತ್ತಿದೆ. ಸಿನಿಮಾ ಈಗ 200 ರೂ ಕೋಟಿ ಕ್ಲಬ್ ಪ್ರವೇಶಿಸಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿದಂಬರಂ ಎಸ್ ಪೊದುವಲ್ ಅವರು ಈ ಸಿನಿಮಾ ನಿರ್ದೇಶಿಸಿದ್ದಾರೆ. ಫೆಬ್ರವರಿ 22ರಂದು ಸಿನಿಮಾ ತೆರೆಕಂಡಿತ್ತು. ಮಾರ್ಚ್ 15ರಿಂದ ತೆಲುಗು ಅವತರಣಿಕೆ ಪ್ರದರ್ಶನಗೊಳ್ಳುತ್ತಿದೆ. FEUOK ಅಧ್ಯಕ್ಷ ಕೆ ವಿಜಯಕುಮಾರ್ ಅವರ ಪ್ರಕಾರ ‘ಮಂಜುಮ್ಮೆಲ್ ಬಾಯ್ಸ್’ ಕೇರಳ ರಾಜ್ಯವೊಂದರಿಂದಲೇ 70 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಚಿತ್ರದಲ್ಲಿ ಸೌಬಿನ್ ಶಾಹಿರ್, ಶ್ರೀನಾಥ್ ಭಾಸಿ, ಬಾಲು ವರ್ಗೀಸ್, ಗಣಪತಿ ಎಸ್ ಪೊದುವಾಳ್, ಲಾಲ್ ಜೂ, ದೀಪಕ್ ಪರಂಬೋಳ್, ಅಭಿರಾಮ್ ರಾಧಾಕೃಷ್ಣನ್, ಅರುಣ್ ಕುರಿಯನ್, ಖಾಲಿದ್ ರೆಹಮಾನ್, ಚಂದು ಸಲೀಂಕುಮಾರ್, ಶೆಬಿನ್ ಬೆನ್ಸನ್ ಮತ್ತು ವಿಷ್ಣು ರೇಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವರ್ಷದ ಆರಂಭದಲ್ಲಿ ಗಿರೀಶ್ ಎ ಡಿ ನಿರ್ದೇಶನದ ‘ಪ್ರೇಮಲು’ ಸಿನಿಮಾ ಸಹ 109 ರೂ ಕೋಟಿ ಗಳಿಸುವುದರೊಂದಿಗೆ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಉತ್ತಮ ಆರಂಭ ತಂದುಕೊಟ್ಟಿತ್ತು. ಈ ಸಿನಿಮಾಗೂ ಸಹ 60 ಕೋಟಿ ರೂ ಕೇರಳದಿಂದಲೇ ಕಲೆಕ್ಷನ್ ಆಗಿದೆ. ಈ ಚಿತ್ರದ ತೆಲುಗು ಡಬ್ಬಿಂಗ್ ಕೂಡ ಹೌಸ್‌ಫುಲ್ ಶೋಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ. ಮಮ್ಮೂಟಿ ಅಭಿನಯದ ‘ಭ್ರಮಯುಗಂ’ ಸಿನಿಮಾ ಸಹ ಒಟ್ಟು 40 ಕೋಟಿ ರೂ ಗಳಿಸಿತ್ತು. 2016ರಲ್ಲಿ ತೆರೆಕಂಡಿದ್ದ ಮೋಹನ್‌ಲಾಲ್ ಅಭಿನಯದ ‘ಪುಲಿಮುರುಗನ್’ ಸಿನಿಮಾ 100 ಕೋಟಿ ರೂ ಕ್ಲಬ್ ಪ್ರವೇಶಿಸಿದ್ದ ಮೊದಲ ಮಲಯಾಳಂ ಚಿತ್ರ.