ಚಿತ್ರಸಾಹಿತಿ ವಿ ನಾಗೇಂದ್ರಪ್ರಸಾದ್‌ ‘ಮಿಸ್‌ ಗೈಡ್‌’ ಸಿನಿಮಾದ ಟೀಸರ್‌ ಬಿಡುಗಡೆಗೊಳಿಸಿ ಶುಭಹಾರೈಸಿದ್ದಾರೆ. ಮಂಜುಕವಿ ಕತೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆ ರಚಿಸಿ ನಿರ್ದೇಶಿಸಿರುವ ಚಿತ್ರವಿದು. ‘ಹಾವು – ಮುಂಗುಸಿ’ಯ ಜನಪ್ರಿಯ ಕತೆಯೊಂದನ್ನು ಆಧರಿಸಿ ನಿರ್ದೇಶಕರು ಕತೆ ಮಾಡಿದ್ದಾರೆ.

ಮಂಜುಕವಿ ಕತೆ, ಚಿತ್ರಕಥೆ, ಸಾಹಿತ್ಯ ಹಾಗೂ ಸಂಭಾಷಣೆ ಬರೆದು, ಸಂಗೀತ ನೀಡಿರುವ ‘ಮಿಸ್ ಗೈಡ್’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಖ್ಯಾತ ಚಿತ್ರಸಾಹಿತಿ ವಿ ನಾಗೇಂದ್ರ ಪ್ರಸಾದ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುವ ಮಂಜು ಕವಿ, ‘ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು. ನನ್ನ ಕತೆ ಮೆಚ್ಚಿ ನಾಗರಾಜ್ ಮತ್ತು ಸುಬ್ಬು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಾವು – ಮುಂಗುಸಿಯ ಕಥೆಯನ್ನು ಆದರ್ಶವಾಗಿಟ್ಟುಕೊಂಡು ಈ ಕತೆ ಹೆಣೆಯಲಾಗಿದೆ. ಮುಂಗುಸಿಯೊಂದು ಮಗುವನ್ನು ಕಾಪಾಡಲು ಹಾವಿನೊಂದಿಗೆ ಸೆಣೆಸಾಡುತ್ತದೆ. ಆದರೆ ಮುಂಗುಸಿಯ ಬಾಯಲ್ಲಿ ರಕ್ತ ನೋಡಿದ ಮಗುವಿನ ತಾಯಿ ಮುಂಗುಸಿ ತನ್ನ ಮಗುವಿಗೆ ಏನೋ ಮಾಡಿದೆ ಅಂದುಕೊಳ್ಳುತ್ತಾಳೆ. ಈ ಕಥೆಯೇ ನಮ್ಮ ಚಿತ್ರಕ್ಕೆ ಸ್ಪೂರ್ತಿ’ ಎನ್ನುತ್ತಾರೆ.

ಸಿನಿಮಾ ಈಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ನಿರ್ದೇಶಕ ಮಂಜು ಅವರೇ ನಾಲ್ಕು ಹಾಡು ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ತಾಯಿ – ಮಗನ ಭಾಂದವ್ಯದ ಒಂದು ಹಾಡನ್ನು ಸಂಗೀತ ಸಂಯೋಜಕ ಗುರುಕಿರಣ್ ಹಾಡಿದ್ದಾರೆ. ಚಿತ್ರದಲ್ಲಿ ನಿತೀಶ್ ವಿನಯ್ ರಾಜ್ ನಾಯಕನಾಗಿ ನಟಿಸಿದ್ದು, ಫರೀನ್ ಮತ್ತು ರಕ್ಷಾ ಚಿತ್ರದ ಇಬ್ಬರು ನಾಯಕಿಯರು. ಸಾಕಷ್ಟು ರಂಗಭೂಮಿ ಕಲಾವಿದರು ಚಿತ್ರದಲ್ಲಿ ನಟಿಸಿರುವುದು ವಿಶೇಷ. ಜಗದೀಶ್ ಕೊಪ್ಪ, ಪ್ರಾಣೇಶ್ ಹಿನ್ನೆಲೆ ಸಂಗೀತ ನೀಡಿರುವ ಚಿತ್ರದ ಸಾಹಸ ನಿರ್ದೇಶಕ ಮಾಸ್ ಮಾದ ಅವರದ್ದು. ಎಸ್‌ ಜೆ ಸಂಜಯ್ ಚಿತ್ರಕ್ಕೆ ಸಹ ನಿರ್ದೇಶನ ಮಾಡಿದ್ದಾರೆ. Citadel Films Productions pvt ltd ಮತ್ತು Raj Films ಬ್ಯಾನರ್ ಅಡಿಯಲ್ಲಿ ನಾಗರಾಜ್ ಹಾಗೂ ಸುಬ್ಬು ಚಿತ್ರ ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here