ಜನಪ್ರಿಯ ಸಿನಿಮಾ ತಾರೆ ಮರ್ಲಿನ್‌ ಮನ್ರೋ ಕುರಿತ ನೆಟ್‌ಫ್ಲಿಕ್ಸ್‌ ಬಯೋಪಿಕ್‌ ಸಿನಿಮಾ ‘Blonde’ ಟೀಸರ್‌ ಬಿಡುಗಡೆಯಾಗಿದೆ. Ana de Armas ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಸೆಪ್ಟೆಂಬರ್‌ 23ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

ಅಮೆರಿಕಾದ ಜನಪ್ರಿಯ ನಟಿ ಮರ್ಲಿನ್‌ ಮನ್ರೋ ಬಯೋಪಿಕ್‌ ಸಿನಿಮಾ ‘Blonde’ ಮೊದಲ ಟೀಸರ್‌ ಬಿಡುಗಡೆಯಾಗಿದೆ. ನಟಿ Ana de Armas ಅವರು ಮರ್ಲಿನ್‌ ಪಾತ್ರ ನಿರ್ವಹಿಸಿದ್ದಾರೆ. ಟೀಸರ್‌ನಲ್ಲಿ ಮರ್ಲಿನ್‌ ಮನ್ರೋ ಅವರ ಐಕಾನಿಕ್‌ ಲುಕ್‌ಗಳು ಮತ್ತು ಸನ್ನಿವೇಶಗಳಿವೆ. Joyce Carol ಅವರ ಕೃತಿಯನ್ನು ಆಧರಿಸಿ ಅದೇ ಶೀರ್ಷಿಕೆಯಡಿ ಆಂಡ್ರ್ಯೂ ಡಾಮಿನಿಕ್‌ ನಿರ್ದೇಶಿಸಿರುವ ಚಿತ್ರವಿದು. ಸಿನಿಮಾದ ಬಗ್ಗೆ ಮಾತನಾಡುವ ನಟಿ Ana de Armas, “ಇದು ಮರ್ಲಿನ್‌ ಮನ್ರೋ ಬದುಕನ್ನು ನೋಡಿದ ರೀತಿಯಲ್ಲಿ ನಿರೂಪಣೆಗೊಂಡಿರುವ ಸಿನಿಮಾ. ಸದೃಢ ವ್ಯಕ್ತಿತ್ವ, ಸ್ತ್ರೀವಾದಿ, ಸಂಕೀರ್ಣ ಬದುಕಿನ ಇಂತಹ ಮತ್ತೊಬ್ಬ ವ್ಯಕ್ತಿಯ ಕತೆಯನ್ನು ಇಲ್ಲಿಯವರೆಗೆ ನಾನು ನೋಡಿಲ್ಲ” ಎಂದಿದ್ದಾರೆ. ಸೆಪ್ಟೆಂಬರ್‌ 23ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

Previous articleಸಂಚಾರಿ ವಿಜಯ್, ನಾನು ಮತ್ತು ರಾಷ್ಟ್ರೀಯ ಹೆದ್ದಾರಿ 4
Next articleಪತ್ತೇದಾರಿ ಪುರುಷೋತ್ತಮನ ನೆನಪಿಸುವ ಸರಣಿ ‘ಗೋರಾ’

LEAVE A REPLY

Connect withPlease enter your comment!
Please enter your name here