ಜನಪ್ರಿಯ Conjuring Universeನ ಸರಣಿ ಸಿನಿಮಾ ‘The Nun2’ ಟ್ರೈಲರ್‌ ಬಿಡುಗಡೆಯಾಗಿದೆ. ಪ್ರೇಕ್ಷಕರನ್ನು ಬೆಚ್ಚಿಬೀಳಿಸುವ ಸಾಕಷ್ಟು ಸೀನ್‌ಗಳು ಚಿತ್ರದಲ್ಲಿ ಇರಲಿವೆ ಎನ್ನುವುದನ್ನು ಟ್ರೈಲರ್‌ ಹೇಳುತ್ತದೆ. 2018ರ ‘Nun’ ಚಿತ್ರದ ಸೀಕ್ವೆಲ್‌ ಇದು. Michael Chaves ನಿರ್ದೇಶನದ ಸಿನಿಮಾ ಸೆಪ್ಟೆಂಬರ್‌ 8ರಂದು ತೆರೆಕಾಣಲಿದೆ.

Conjuring ಸರಣಿಯ ಒಂಬತ್ತನೇ ಸಿನಿಮಾ ‘The Nun 2’ ತೆರೆಗೆ ಬರಲು ಸಿದ್ಧವಾಗಿದ್ದು, ಟ್ರೈಲರ್‌ ಬಿಡುಗಡೆಯಾಗಿದೆ. ಸಿಸ್ಟರ್‌ Irene ಪಾತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾಗಿದ್ದ ನಟಿ Taissa Farmiga ಅವರು Conjuring universeಗೆ ಮರಳುತ್ತಿದ್ದಾರೆ. ಅವರೊಂದಿಗೆ ಈ ಬಾರಿ jonas Bloquet, Storm Reid, Anna Popplewell, Bonnie Aarons ನಟಿಸಿದ್ದಾರೆ. 2018ರಲ್ಲಿ ತೆರೆಕಂಡ ‘Nun’ ಚಿತ್ರದ ಸೀಕ್ವೆಲ್‌ ಇದು. ಕತೆಯ ಬಗ್ಗೆ ಸಿನಿಮಾದ ಅಫಿಷಿಯಲ್‌ ಸಿನಾಪ್ಸಿಸ್‌ ಹೇಳುವುದು ಹೀಗೆ – ‘1956 – France. ಪ್ರೀಸ್ಟ್‌ನ ಹತ್ಯೆಯಾಗುತ್ತದೆ. ಅಲ್ಲೊಂದು Evil ಸೃಷ್ಟಿಯಾಗಿದೆ. Sister Irene ಪಾತ್ರವಿದ್ದ ಸಿನಿಮಾ ಜಗತ್ತಿನಾದ್ಯಂತ ದೊಡ್ಡ ಯಶಸ್ಸು ಕಂಡಿತ್ತು. ಈಗ ಆಕೆ ಮತ್ತೆ Demon nun ಮುಖಾಮುಖಿಯಾಗುತ್ತಿದ್ದಾಳೆ’. ‘The Conjuring: The Devil Made Me Do It’ ಸಿನಿಮಾ ನಿರ್ದೇಶಿಸಿದ್ದ Michael Chaves ಅವರು ‘The Nun 2’ ನಿರ್ದೇಶಿಸಿದ್ದಾರೆ. Ian Goldberg ಮತ್ತು Richard Naing ಚಿತ್ರಕಥೆ ರಚಿಸಿದ್ದಾರೆ. 2 ಬಿಲಿಯನ್‌ ಡಾಲರ್‌ ಜಾಗತಿಕ ವಹಿವಾಟು ನಡೆಸಿರುವ Conjuring Universe ಅತ್ಯಂತ ಜನಪ್ರಿಯ ಹಾರರ್‌ ಫ್ರಾಂಚೈಸಸ್‌ ಎನಿಸಿಕೊಂಡಿದೆ. ಈ ಸರಣಿಯ ‘The Nun 2’ ಸೆಪ್ಟೆಂಬರ್‌ 8ರಂದು ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here