ಅಹಮದ್‌ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಡಾರ್ಕ್‌ ಕ್ರೈಂ ಥ್ರಿಲ್ಲರ್‌ ಸಿನಿಮಾ ‘ಇರೈವನ್‌’ ಟ್ರೈಲರ್‌ ಬಿಡುಗಡೆಯಾಗಿದೆ. ಜಯಂ ರವಿ, ನಯನತಾರಾ, ರಾಹುಲ್‌ ಬೋಸ್‌ ನಟನೆಯ ಚಿತ್ರ ಸೆಪ್ಟೆಂಬರ್‌ 28ರಂದು ತೆರೆಕಾಣಲಿದೆ.

ಜಯಂ ರವಿ ಮತ್ತು ರಾಹುಲ್ ಬೋಸ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಇರೈವನ್’ (Iraivan) ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದು ಡಾರ್ಕ್‌ ಕ್ರೈಮ್ ಥ್ರಿಲ್ಲರ್‌ ಜಾನರ್‌ ಸಿನಿಮಾ. ಐ ಅಹಮದ್‌ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಚಿತ್ರದ ನಾಯಕಿಯಾಗಿ ನಯನತಾರಾ ಇದ್ದಾರೆ. ಟ್ರೇಲರ್‌ನಲ್ಲಿ 12 ಯುವತಿಯರನ್ನು ಕ್ರೂರ ರೀತಿಯಲ್ಲಿ ಕೊಂದು, ಮನಶ್ಶಾಸ್ತ್ರಜ್ಞರ ಅಧೀನದಲ್ಲಿರುವ ಸೈಕೋ ‘ಸ್ಮೈಲೀ ಕಿಲ್ಲರ್’ ಬ್ರಹ್ಮಾವರನಾಗಿ ರಾಹುಲ್ ಬೋಸ್ ನಟಿಸಿದ್ದಾರೆ. ಆತನಿಗೆ ಕೊಲೆಗಳ ಬಗ್ಗೆ ಯಾವುದೇ ಪಶ್ಚಾತಾಪವಿರುವುದಿಲ್ಲ. ನಿಷ್ಕರುಣಿಯಾಗಿ ಯುವತಿಯರನ್ನು ಕರುಣೆಯಿಲ್ಲದೇ ಕೊಲ್ಲುತ್ತಿರುತ್ತಾನೆ. ಮತ್ತೊಂದೆಡೆ ಅರ್ಜುನ್ ಸಂತ್ರಸ್ತರಿಗೆ ನ್ಯಾಯ ಒದಗಿಸುವ ಭರದಲ್ಲಿ ಕಾನೂನನ್ನು ಲೆಕ್ಕಿಸದೇ ಅವನನ್ನು ಎನ್‌ಕೌಂಟರ್‌ ಮಾಡಲು ಮುಂದಾಗಿ, ಅನಾಹುತ ಮಾಡಿಕೊಂಡು ಪೊಲೀಸ್‌ ಕೆಲಸದಿಂದ ಅಮಾನತ್ತುಗೊಂಡು ಇಲಾಖೆಯಿಂದ ಬಂದಿತನಾಗುತ್ತಾನೆ.

ಆಸ್ಪತ್ರೆಯಿಂದ ತಪ್ಪಿಸಿಕೊಳ್ಳುವ ‘ಸ್ಮೈಲೀ ಕಿಲ್ಲರ್‌’ ನಂತರ ಅದೇ ವೃತ್ತಿಯನ್ನು ಮುಂದುವರೆಸುತ್ತಾನೆ. ಕಥಾವಸ್ತುವು ಬ್ರಹ್ಮಾವರನನ್ನು ಅರ್ಜುನ್ ಬೇಟೆಯಾಡುವ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಆಶಿಶ್ ವಿದ್ಯಾರ್ಥಿ, ನರೇನ್, ಚಾರ್ಲಿ, ವಿನೋತ್ ಕಿಶನ್, ವಿಜಯಲಕ್ಷ್ಮಿ, ಅಳಗಂ ಪೆರುಮಾಳ್, ಬಗ್ಸ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. Passion Studios ಬ್ಯಾನರ್‌ ಅಡಿ ಸುಧನ್ ಸುಂದರಂ ಮತ್ತು ಜಯರಾಮ್ ಜಿ ಚಿತ್ರವನ್ನು ನಿರ್ಮಿಸಿದ್ದು, ಯುವನ್ ಶಂಕರ್ ರಾಜಾ ಸಂಗೀತ ಸಂಯೋಜನೆಯಿದೆ. ಹರಿ ಕೆ ವೇದಾಂತ್ ಛಾಯಾಗ್ರಹಣ, ಮಣಿಕಂದ ಬಾಲಾಜಿ ಸಂಕಲನ ಸಿನಿಮಾಗಿದೆ. ‘ಥನಿ ಒರುವನ್‌’ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ನಯನತಾರಾ ಮತ್ತು ಜಯಂ ರವಿ ಈ ಸಿನಿಮಾದಲ್ಲಿ ಮತ್ತೆ ಜೊತೆಯಾಗಿದ್ದಾರೆ. ಮುಂಬರುವ ‘ಥನಿ ಒರುವನ್‌’ Part 2ನಲ್ಲೂ ಇವರು ಒಟ್ಟಿಗೆ ನಟಿಸಲಿದ್ದಾರೆ. ‘ಇರೈವನ್‌’ ಸೆಪ್ಟೆಂಬರ್‌ 28ರಂದು ಸಿನಿಮಾ ತೆರೆಕಾಣಲಿದೆ.

Previous article‘ಚಂದ್ರಮುಖಿ 2’ ಟ್ರೈಲರ್‌ | ಪಿ ವಾಸು ನಿರ್ದೇಶನದ ದ್ವಿಭಾಷಾ ಸಿನಿಮಾ ಸೆಪ್ಟೆಂಬರ್‌ 15ಕ್ಕೆ
Next article‘ಮಾರ್ಕ್‌ ಆಂಟನಿ’ ಟ್ರೈಲರ್‌ | ವಿಶಾಲ್‌ – ಎಸ್‌ ಜೆ ಸೂರ್ಯ ನಟನೆಯ ತಮಿಳು ಸಿನಿಮಾ

LEAVE A REPLY

Connect with

Please enter your comment!
Please enter your name here