ವಿಜಯ್ ಮೌರ್ಯ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ‘ಮಸ್ತ್ ಮೇ ರೆಹನೆ ಕಾ’ ಹಿಂದಿ ಸಿನಿಮಾ Amazon Prime videosದಲ್ಲಿ ಡಿ. 8ರಿಂದ ಸ್ಟ್ರೀಮ್‌ ಆಗಲಿದೆ. ನೀನಾ ಗುಪ್ತಾ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ನೀನಾ ಗುಪ್ತಾ ಮತ್ತು ಜಾಕಿ ಶ್ರಾಫ್ ಅಭಿನಯದ ‘ಮಸ್ತ್ ಮೇ ರೆಹನೆ ಕಾ’ ಹಿಂದಿ ಸಿನಿಮಾ ಇದೇ ಡಿಸೆಂಬರ್‌ 8ರಿಂದ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗಲಿದೆ. ಈ ಸಿನಿಮಾವನ್ನು ವಿಜಯ್ ಮೌರ್ಯ ಅವರು ಬರೆದು ನಿರ್ದೇಶಿಸಿದ್ದಾರೆ. ಚಲನಚಿತ್ರವು ಎರಡು ವಿಭಿನ್ನ ತಲೆಮಾರುಗಳ ಹೃದಯಸ್ಪರ್ಶಿ ಕತೆ. ಪ್ರತಿಯೊಂದು ತಲೆಮಾರು ತನ್ನದೇ ಆದ ವೈಶಿಷ್ಟ್ಯ ಮತ್ತು ಜೀವನದ ಪ್ರತಿಕೂಲತೆಯನ್ನು ಎದುರಿಸುತ್ತದೆ. ಪ್ರೀತಿ, ಕ್ಷಮೆ ಮತ್ತು ವಿಮೋಚನೆ ಹೀಗೆ ಸಾರ್ವತ್ರಿಕ ವಿಷಯಗಳನ್ನು ಆಧರಿಸಿ ಸುಂದರವಾಗಿ ರಚಿಸಲಾದ ಚಿತ್ರಕಥೆಯಾಗಿದ್ದು, ಬದುಕಿನ ದಾರಿಗೆ ಅಡ್ಡಿಯಾಗುವ ಸಮಸ್ಯೆಗಳನ್ನು ಲೆಕ್ಕಿಸದೆ ಮುಂದುವರೆಯುವ ಜವಾಬ್ದಾರಿಗಳ ಕುರಿತು ವಿವರಿಸಲಿದೆ.

ಸಿನಿಮಾದ ಕುರಿತು ಮಾತನಾಡುವ ವಿಜಯ್ ಮೌರ್ಯ, ʼಈ ಚಿತ್ರವು ಜೀವನದ ಜಟಿಲತೆಗಳು ಮತ್ತು ಸವಾಲುಗಳ ನಡುವೆ ನಡೆಯುವ ಅನ್ವೇಷಣೆಯ ಬಗ್ಗೆ ವಿಶಿಷ್ಟವಾದ ದೃಷ್ಟಿಕೋನವನ್ನು ಗುರುತಿಸಲಿದೆ ಎಂದು ನಾನು ನಂಬುತ್ತೇನೆ. ಕತೆಯು ವೈವಿಧ್ಯಮಯ ಪಾತ್ರಗಳ ಸುತ್ತ ಸುತ್ತುತ್ತದೆ’ ಎಂದಿದ್ದಾರೆ. ಅಭಿಷೇಕ್ ಚೌಹಾಣ್, ಮೋನಿಕಾ ಪನ್ವಾರ್, ರಾಖಿ ಸಾವಂತ್ ಮತ್ತು ಫೈಸಲ್ ಮಲಿಕ್ ಸಹಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು Made in Maurya ಬ್ಯಾನರ್‌ ಅಡಿಯಲ್ಲಿ ಪಾಯಲ್ ಅರೋರಾ ಮತ್ತು ವಿಜಯ್‌ ಮೌರ್ಯ ನಿರ್ಮಿಸಿದ್ದಾರೆ. ಡಿಸೆಂಬರ್ 8ರಿಂದ Prime Videoನಲ್ಲಿ ಸಿನಿಮಾ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here