ಸಮಾಜಮುಖಿ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಚಿತ್ರನಿರ್ದೇಶಕ ಪ ರಂಜಿತ್‌ ನಿರ್ಮಾಣದ ‘ಕಲ್ಲಿ ಪಾಲ’ಲ ಒರು ಟೀ’ ತಮಿಳು ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಆಂಥಾಲಜಿಯಲ್ಲಿ ಅಭಿಷಾ, ಸ್ನೇಹಾ ಬೆಲ್ಸಿನ್, ಕನಿಷ್ಕಾ ಸಿಇ ಮತ್ತು ಶಿವರಂಜನಿ ನಾಲ್ಕು ಕತೆಗಳನ್ನು ನಿರ್ದೇಶಿಸಿದ್ದಾರೆ.

ಪಾ ರಂಜಿತ್ ನಿರ್ಮಾಣದ ‘ಕಲ್ಲಿ ಪಾಲ’ಲ ಒರು ಟೀ’ ( Kalli Paal’la Oru Tea) ತಮಿಳು ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ನಾಲ್ಕು ನಿರ್ದೇಶಕರ ಕಥಾಸಂಕಲನದಲ್ಲಿ, ನಾಲ್ವರು ಮಹಿಳೆಯರು, ನಾಲ್ಕು ವಿಭಿನ್ನ ಕಥೆಗಳಿವೆ. ಅಭಿಷಾ, ಸ್ನೇಹಾ ಬೆಲ್ಸಿನ್, ಕನಿಷ್ಕಾ ಸಿಇ ಮತ್ತು ಶಿವರಂಜನಿ ನಾಲ್ಕು ಕತೆಗಳನ್ನು ನಿರ್ದೇಶಿಸಿದ್ದಾರೆ. ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ನಾಲ್ಕು ಭಾವನಾತ್ಮಕ ಕಥೆಗಳನ್ನು ಟ್ರೇಲರ್‌ ಅನಾವರಣಗೊಳಿಸಿದೆ. ಇದರಲ್ಲಿ ಸಾವಿತ್ರಿಬಾಯಿ ಫುಲೆಯವರ ಉಲ್ಲೇಖ ಸಹ ಇದೆ. ‘ನೀವು ಏನು ಮಾಡಿದರೂ ನಿಮ್ಮನ್ನು ಸ್ತ್ರೀವಾದಿ ಎಂದು ಕರೆಯುತ್ತಾರೆ. ಇದು ಕೇವಲ ಬದುಕಿನ ಸಾಮಾನ್ಯ ವಿಧಾನವಾಗಿದೆ’ ಎಂಬ ವಾಯ್ಸ್‌ ಓವರ್‌ ಕೇಳಿಸುತ್ತದೆ.

ಚಿತ್ರಕ್ಕೆ ರೇವಾ ಅವರ ಸಂಗೀತ ಸಂಯೋಜನೆ, ಕಿರಣ್ ಮಯಿ ಮತ್ತು ವಿಘ್ನೇಶ್ವರಿ ಅವರ ಛಾಯಾಗ್ರಹಣ, ಶಾಂತಿನಿ, ಸಂತೋಷ್ ಕೃಷ್ಣನ್ ಮತ್ತು ಸುಧೀಶ್ ಕೃಷ್ಣ ಅವರ ಸಂಕಲನವಿದೆ. Neelam Social ಮತ್ತು Neelam Pengal Mattrum Thirunar Cinema Mandram ಸಂಸ್ಥೆಗಳು ಚಿತ್ರವನ್ನು ಪ್ರಸ್ತುತಪಡಿಸಿವೆ. ಪಾ ರಂಜಿತ್ ನಿರ್ದೇಶನದ ಚಿಯಾನ್‌ ವಿಕ್ರಮ್‌ ನಟನೆಯ ‘ತಂಗಲಾನ್’ ಚಿತ್ರದಲ್ಲಿ ಪಾರ್ವತಿ ಮತ್ತು ಮಾಳವಿಕಾ ಮೋಹನನ್ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರವು ಮೂಲ ತಮಿಳು ಸೇರಿದಂತೆ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಜನವರಿ 26, 2024ರಂದು ಬಿಡುಗಡೆಯಾಗಲಿದೆ.

LEAVE A REPLY

Connect with

Please enter your comment!
Please enter your name here