‘ಮ್ಯಾಟ್ನಿ’ ಚಿತ್ರದ ‘ಬಾರೋ ಬಾರೋ ಬಾಟಲ್ ತಾರೋ’ ಸಾಂಗ್‌ ಬಿಡುಗಡೆಯಾಗಿದೆ. ಪೂರ್ಣಚಂದ್ರ ತೇಜಸ್ವಿ ಗೀತೆ ರಚಿಸಿ, ಸಂಗೀತ ಸಂಯೋಜಿಸಿರುವ ಹಾಡಿದು. ಮನೋಹರ್‌ ಕಾಂಪಲ್ಲಿ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಸತೀಶ್‌ ನೀನಾಸಂ ಮತ್ತು ರಚಿತಾ ರಾಮ್‌ ನಟಿಸಿದ್ದಾರೆ.

ಸತೀಶ್ ನೀನಾಸಂ ಮತ್ತು ರಚಿತಾರಾಮ್ ಮುಖ್ಯ ಭೂಮಿಕೆಯಲ್ಲಿರುವ ‘ಮ್ಯಾಟ್ನಿ’ ಚಿತ್ರದ ಹಾಡನ್ನು ನಟ ಧನಂಜಯ ಅವರು ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಯಶಸ್ವೀ ‘ಅಯೋಗ್ಯ’ ಚಿತ್ರದ ನಂತರ ಇಲ್ಲಿ ಸತೀಶ್‌ ನೀನಾಸಂ ಮತ್ತು ರಚಿತಾ ರಾಮ್‌ ಮತ್ತೆ ಜೊತೆಯಾಗಿದ್ದಾರೆ. ‘ಬಾರೋ ಬಾರೋ ಬಾಟಲ್ ತಾರೋ’ ಎಂಬ ಹಾಡು ಹೊಸ ವರ್ಷದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ನೀಡಿರುವ ಈ ಹಾಡನ್ನು ಪೂರ್ಣಚಂದ್ರ ತೇಜಸ್ವಿ, ನೀನಾಸಂ ಸತೀಶ್ ಹಾಗೂ ರೀಲ್ ರೀನಾ ಹಾಡಿದ್ದಾರೆ. ಯುವ ಪೀಳಿಗೆಗೆ ಬೇಗ ಕನೆಕ್ಟ್‌ ಆಗುವ ಈ ಹಾಡಿಗೆ ನೀನಾಸಂ ಸತೀಶ್, ನಾಗಭೂಷಣ್ ಹಾಗೂ ಶಿವರಾಜ್ ಕೆ ಆರ್ ಪೇಟೆ ಹೆಜ್ಜೆ ಹಾಕಿದ್ದಾರೆ. F3 Productions ಬ್ಯಾನರ್‌ ಅಡಿಯಲ್ಲಿ ಪಾರ್ವತಿ ಎಸ್ ಗೌಡ ನಿರ್ಮಿಸಿರುವ, ಮನೋಹರ್ ಕಾಂಪಲ್ಲಿ ನಿರ್ದೇಶನದ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಹಾಗೂ ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಅದಿತಿ ಪ್ರಭುದೇವ, ನಾಗಭೂಷಣ್, ಶಿವರಾಜ ಕೆ ಆರ್ ಪೇಟೆ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ.

LEAVE A REPLY

Connect with

Please enter your comment!
Please enter your name here