ನಟ ವಿಜಯ ದೇವರಕೊಂಡ ಜನ್ಮದಿನವಿಂದು (ಮೇ 9). ತಮ್ಮ ಹೀರೋನ ಬರ್ತ್‌ಡೇಗೆಂದು ‘ಖುಷಿ’ ಚಿತ್ರತಂಡ ಸಿನಿಮಾದ ‘ನನ್ನ ರೋಜಾ ನೀನೇ’ ಲಿರಿಕಲ್‌ ವೀಡಿಯೋ ಬಿಡುಗಡೆ ಮಾಡಿದೆ. ಸಮಂತಾ ಚಿತ್ರದ ಹಿರೋಯಿನ್‌.

ವಿಜಯ್‌ ದೇವರಕೊಂಡ ಹುಟ್ಟುಹಬ್ಬದ ಸಂಭ್ರಮಕ್ಕೆ ‘ಖುಷಿ’ ಚಿತ್ರತಂಡ ‘ನನ್ನ ರೋಜಾ ನೀನೇ’ ಲಿರಿಕಲ್‌ ವೀಡಿಯೋ ರಿಲೀಸ್‌ ಮಾಡಿದೆ. ಈ ಸಿನಿಮಾ ಕನ್ನಡಕ್ಕೆ ಡಬ್‌ ಆಗಿ ತೆರೆಕಾಣುತ್ತಿದ್ದು, ವಿ ನಾಗೇಂದ್ರಪ್ರಸಾದ್‌ ಈ ಮೆಲೋಡಿ ಟ್ಯೂನ್‌ಗೆ ಗೀತೆ ರಚಿಸಿದ್ದಾರೆ. ಹೇಷಂ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿ, ಹಾಡಿರುವ ಗೀತೆ ಸಂಪೂರ್ಣ ಕಾಶ್ಮೀರದಲ್ಲಿ ಚಿತ್ರೀಕರಣಗೊಂಡಿದೆ. ಮೂಲ ತೆಲುಗು ಸೇರಿದಂತೆ ಕನ್ನಡ, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಿಗೆ ಡಬ್‌ ಆಗಿ ಥಿಯೇಟರ್‌ಗೆ ಬರಲಿದೆ ಸಿನಿಮಾ. ಮೈತ್ರಿ ಮೂವಿ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರದ ನಿರ್ದೇಶಕರು ಶಿವ ನರ್ವಣ. ಜಯರಾಂ, ಮುರಳಿ ಶರ್ಮ, ಲಕ್ಷ್ಮೀ, ಅಲಿ, ವಿನ್ನಿಲಾ ಕಿಶೋರ್‌ ಚಿತ್ರದ ಇತರೆ ಪ್ರಮುಖ ಕಲಾವಿದರು. ಸೆಪ್ಟೆಂಬರ್‌ 1ರಂದು ಸಿನಿಮಾ ತೆರೆಕಾಣಲಿದೆ.

Previous article‘ಆದಿಪುರುಷ್‌’ ಟ್ರೈಲರ್‌ | ಬಹುನಿರೀಕ್ಷಿತ ಪ್ರಭಾಸ್‌ ಸಿನಿಮಾ ಜೂನ್‌ 16ಕ್ಕೆ ತೆರೆಗೆ
Next article‘Meg-2 The Trench’ ಟ್ರೈಲರ್‌ | Jason Statham ಅಡ್ವೆಂಚರ್‌ ಶಾರ್ಕ್‌ ಸಿನಿಮಾ

LEAVE A REPLY

Connect with

Please enter your comment!
Please enter your name here