‘ಜೊತೆಜೊತೆಯಲಿ’ ಸೀರಿಯಲ್‌ ಖ್ಯಾತಿಯ ಮೇಘಾ ಶೆಟ್ಟಿ ನಾಯಕಿಯಾಗಿ ನಟಿಸಿರುವ ‘ಆಪರೇಷನ್‌ ಲಂಡನ್‌ ಕೆಫೆ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಕವೀಶ್‌ ಶೆಟ್ಟಿ ಚಿತ್ರದ ಹೀರೋ. ಸಡಗರ ರಾಘವೇಂದ್ರ ನಿರ್ದೇಶನದ ಆಕ್ಷನ್‌ ಸಿನಿಮಾ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ.

ಕವೀಶ್‌ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಜೋಡಿಯ ‘ಆಪರೇಷನ್‌ ಲಂಡನ್‌ ಕೆಫೆ’ ಆಕ್ಷನ್‌ ಸಿನಿಮಾ ಸುದ್ದಿಯಲ್ಲಿದೆ. ಈ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್‌ ಕೆಲಸಗಳು ನಡೆಯುತ್ತಿವೆ. ದೊಡ್ಡ ಕ್ಯಾನ್ವಾಸ್‌ನಲ್ಲಿ ತಯಾರಾಗುತ್ತಿರುವ ಸಿನಿಮಾ ಬಗ್ಗೆ ಮೇಘಾ ಶೆಟ್ಟಿ ಭಾರಿ ಭರವಸೆ ಹೊಂದಿದ್ದಾರೆ. ತಮ್ಮ ಸಿಲ್ವರ್‌ ಸ್ಕ್ರೀನ್‌ ಅಭಿಯಾನಕ್ಕೆ ಈ ಸಿನಿಮಾ ತಿರುವಾಗಲಿದೆ ಎನ್ನುವ ವಿಶ್ವಾಸದಲ್ಲಿದ್ದಾರವರು. ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲ್ಮ್ಸ್ ಲಾಂಛನದಡಿ ವಿಜಯ್ ಕುಮಾರ್ ಶೆಟ್ಟಿ, ಹವರಾಲ್ ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ನಿರ್ಮಿಸುತ್ತಿರುವ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸುತ್ತಿದ್ದಾರೆ. ಡಿ ನಾಗಾರ್ಜುನ್ ಛಾಯಾಗ್ರಹಣ ಪ್ರಾನ್ಷು ಝಾ ಸಂಗೀತ, ಕೆ ಎಂ ಪ್ರಕಾಶ್ ಸಂಕಲನ, ವರದರಾಜ್ ಕಾಮತ್ ಕಲೆ, ವಿಕ್ರಂ ಮೋರ್ ಮತ್ತು ಮಾಸ್ ಮಾದ ಸಾಹಸ ಚಿತ್ರಕ್ಕಿದೆ. ಮರಾಠಿಯ ಜನಪ್ರಿಯ ತಾರೆ ಶಿವಾನಿ ಸುರ್ವೆ, ಅರ್ಜುನ್ ಕಾಪಿಕ್ಕಾಡ್, ಬಿ ಸುರೇಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸದ್ಯದಲ್ಲೇ ಚಿತ್ರಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವುದಾಗಿ ನಿರ್ಮಾಪಕರು ಹೇಳುತ್ತಾರೆ. ‘ಆಪರೇಷನ್‌ ಲಂಡನ್‌ ಕೆಫೆ’ ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಕಾಣಲಿದೆ. ಚಿತ್ರೀಕರಣ ಪೂರ್ಣಗೊಂಡ ಖುಷಿಯಲ್ಲಿರುವ ಮೇಘಾ ಖುಷಿಯಿಂದ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದೊಡ್ಡ ಸಿನಿಮಾ ಮೂಲಕ ಈ ಬಾರಿಯ ತಮ್ಮ ಬರ್ತ್‌ಡೇ ಕಲರ್‌ಫುಲ್‌ ಆಗಿದೆ ಎಂದಿದ್ದಾರೆ. ಹುಟ್ಟುಹಬ್ಬಕ್ಕೆ ಶುಭಕೋರಿದ ಅಭಿಮಾನಿಗಳಿಗೆ ಟ್ವೀಟ್‌ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

Previous articleಹಾಡಿನ ಮಧ್ಯೆ ಫೈಟ್‌! | ‘ಅನ್‌ಲಾಕ್ ರಾಘವ’ ಚಿತ್ರದ ನಿರ್ದೇಶಕರ ಪ್ರಯೋಗ
Next articleಡಬ್ಬಿಂಗ್‌ ಮುಗಿಸಿದ ‘ಯಥಾಭವ’ | ಆಗಸ್ಟ್‌ 25ಕ್ಕೆ ಟೀಸರ್‌ ಬಿಡುಗಡೆ

LEAVE A REPLY

Connect with

Please enter your comment!
Please enter your name here