ಪಿ.ವಾಸು ನಿರ್ದೇಶನದಲ್ಲಿ ರವಿಚಂದ್ರನ್ ನಟಿಸಿರುವ ‘ದೃಶ್ಯ 2’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಸಿನಿಮಾದ ಮೂಲ ಮಲಯಾಳಂ ಮತ್ತು ತೆಲುಗು ಚಿತ್ರಗಳು ನೇರವಾಗಿ ಓಟಿಟಿಯಲ್ಲಿ ಸ್ಟ್ರೀಮ್ ಆಗಿದ್ದವು. ಆದರೆ ಕನ್ನಡ ಅವತರಣಿಕೆ ಮುಂದಿನ ತಿಂಗಳು ಡಿಸೆಂಬರ್ 10ಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
2014ರಲ್ಲಿ ತೆರೆಕಂಡಿದ್ದ ‘ದೃಶ್ಯ’ ಮುಂದುಬರೆದ ಭಾಗ ‘ದೃಶ್ಯ 2’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಮುಂದಿನ ತಿಂಗಳು ಡಿಸೆಂಬರ್ 10ಕ್ಕೆ ಸಿನಿಮಾ ಥಿಯೇಟರ್‌ಗೆ ಬರಲಿದೆ. ಮೋಹನ್‌ಲಾಲ್ ನಟನೆಯ ಮೂಲ ಮಲಯಾಳಂ ‘ದೃಶ್ಯಂ 2’ ಮತ್ತು ಈ ಚಿತ್ರದ ತೆಲುಗು ರೀಮೇಕ್ ನೇರವಾಗಿ ಓಟಿಟಿಯಲ್ಲಿ ಸ್ಟ್ರೀಮ್ ಆಗಿದ್ದವು. ರವಿಚಂದ್ರನ್ ಸಿನಿಮಾ ಥಿಯೇಟರ್‌ಗೆ ಬರಲುತ್ತಿರುವುದು ವಿಶೇಷ. 2014ರಲ್ಲಿ ತೆರೆಕಂಡಿದ್ದ ಮೊದಲ ಸರಣಿಯಲ್ಲಿ ರವಿಚಂದ್ರನ್ ಜೊತೆ ನಟಿಸಿದ್ದ ನವ್ಯಾ ನಾಯರ್ ಇಲ್ಲಿಯೂ ಇದ್ದಾರೆ. ಆ ಚಿತ್ರದ ಮುಂದುವರೆದ ಕತೆ ಇಲ್ಲಿದೆ. ಕೊಲೆ ಕೇಸ್ ರೀಓಪನ್ ಆಗುವುದರೊಂದಿಗೆ ರವಿ ಬೋಪಣ್ಣ (ರವಿಚಂದ್ರನ್) ಪಾತ್ರ ಮತ್ತೆ ಪೊಲೀಸರ ವಿಚಾರಣೆಗೆ ಗುರಿಯಾಗುತ್ತದೆ.
ಈಗಾಗಲೇ ಯಶಸ್ಸು ಕಂಡಿರುವ ಬಿಗಿಯಾದ ಚಿತ್ರಕಥೆ ಇಲ್ಲಿದ್ದು, ಥ್ರಿಲ್ಲರ್ ಗುಣ ಹೊಂದಿರುವ ಸನ್ನಿವೇಶಗಳು ಟ್ರೈಲರ್‌ನಲ್ಲಿ ಹಾದು ಹೋಗುತ್ತವೆ. ಇನ್‌ಸ್ಪೆಕ್ಟರ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಚಿತ್ರಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಉಳಿದಂತೆ ಮೊದಲ ಸರಣಿಯಲ್ಲಿದ್ದ ಬಹುತೇಕ ತಾರಾಬಳಗ ಇಲ್ಲಿ ಮುಂದುವರೆದಿದೆ. ರವಿಚಂದ್ರನ್ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಕಂಡು ಸಾಕಷ್ಟು ಸಮಯವಾಯ್ತು. ಸಾಲು, ಸಾಲು ಸಿನಿಮಾಗಳು ತೆರೆಕಾಣುತ್ತಿದ್ದು, ಇವುಗಳ ಮಧ್ಯೆ ‘ದೃಶ್ಯ 2’ಗೆ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂದು ನೋಡಬೇಕು.