ಗೌತಮ್ ಬಸವರಾಜ್ ಕತೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ‘ಯಥಾಭವ’ ಸಿನಿಮಾದ ಡಬ್ಬಿಂಗ್‌ ಪೂರ್ಣಗೊಂಡಿದೆ. ಪವನ್‌ ಶಂಕರ್‌ ಮತ್ತು ಸಹನಾ ಸುಧಾಕರ್‌ ನಾಯಕ್‌ ಅಭಿನಯದ ಕೋರ್ಟ್‌ – ಡ್ರಾಮಾ ಇದು. ಆಗಸ್ಟ್‌ 25ರಂದು ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ.

ಪವನ್‌ ಶಂಕರ್‌ ಮತ್ತು ಸಹನಾ ಸುಧಾಕರ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಯಥಾಭವ’ ಸಿನಿಮಾದ ಡಬ್ಬಿಂಗ್‌ ಪೂರ್ಣಗೊಂಡಿದೆ. ‘ಇದೊಂದು ಕೋರ್ಟ್‌ – ಡ್ರಾಮಾ ಸಿನಿಮಾ. ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಲೇ ಕೌಟುಂಬಿಕ ಸಂಬಂಧಗಳ ಸೂಕ್ಷ್ಮಗಳನ್ನು ಹೇಳುತ್ತದೆ. ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ ನ್ಯಾಯಾಧೀಶರಾಗಿ ಅಭಿನಯಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಅವರು ವಕೀಲರಾಗಿ ಹಾಗೂ ಬಾಲ ರಾಜವಾಡಿ ಅವರು ಗೃಹ ಸಚಿವರಾಗಿ ಕಾಣಿಸಿಕೊಂಡಿದ್ದಾರೆ. ಈ ಮೂವರು ಪಾಲ್ಗೊಂಡ ಸನ್ನಿವೇಶಗಳು ಮನೋಜ್ಞವಾಗಿ ಮೂಡಿಬಂದಿದೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕ ಗೌತಮ್‌ ಬಸವರಾಜ್‌. ಚಿತ್ರದ ಕತೆ, ಚಿತ್ರಕಥೆ ಮತ್ತು ಸಂಭಾಷಣೆಯೂ ಅವರದೆ. ಅವರೂ ಸೇರಿದಂತೆ ಈ ಚಿತ್ರದಲ್ಲಿ ನಟಿಸಿರುವ ಬಹುತೇಕ ತಂತ್ರಜ್ಞರು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋಸ್‌ನಲ್ಲಿ ಮೂರುವರ್ಷಗಳ‌ ಅವಧಿಯ ಫಿಲಂ ಮೇಕಿಂಗ್ ಕೋರ್ಸ್ ಮಾಡಿದ್ದಾರೆ ಎನ್ನುವುದು ವಿಶೇಷ.

Macht entertainments ಲಾಂಛನದಲ್ಲಿ ಸುಜಾತ ಕುಮಾರಿ ಹಾಗೂ ಅನಿಲ್ ಕುಮಾರ್ ಬಿ ಎನ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಹರ್ಷ್ ಮಿಶ್ರ ಛಾಯಾಗ್ರಹಣ, ಹರೀಶ್ ಚೌಧರಿ ಸಂಕಲನ, ಕುಂಗ್ಫು ಚಂದ್ರು ಸಾಹಸ ನಿರ್ದೇಶನ, ಸುಚಿತ್ ಚವ್ಹಾಣ್ ನೃತ್ಯ ನಿರ್ದೇಶನ , ಸ್ಮಿತ ಕುಲಕರ್ಣಿ ಕಲಾ ನಿರ್ದೇಶನ ಹಾಗೂ ನಿರ್ಮಾಲ್ ಜೋಶಿ ಸಹನಿರ್ದೇಶನವಿದೆ. ಉತ್ಸವ್ ಶ್ರೇಯಸ್ ಸಂಗೀತ ನೀಡಿರುವ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸುರೇಶ್ ರೆಡ್ಡಿ ಹಾಗೂ ಅಭಿಷೇಕ್ ಅಕ್ಕಣ್ಣನವರ್ ಹಾಡುಗಳನ್ನು ರಚಿಸಿದ್ದಾರೆ. ಗೌತಮ್ ಸುಧಾಕರ್, ಮಾಸ್ಟರ್ ಶಮಂತ್, ನೀನಾಸಂ ಆನಂದ್, ಉಮಾ ಹೆಬ್ಬಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here