ನೆಟ್‌ಫ್ಲಿಕ್ಸ್‌ ಇಂದು ‘ಮಿನ್ನಲ್ ಮುರಳಿ’ ಮಲಯಾಳಂ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ನಟ ಟೊವಿನೊ ಥಾಮಸ್‌ ಸೂಪರ್‌ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಡಿಸೆಂಬರ್‌ 24ರಿಂದ ನೆಟ್‌ಫ್ಲಿಕ್ಸ್’ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.

ಬೇಸಿಲ್ ಜೋಸೆಫ್ ನಿರ್ದೇಶನದ ‘ಮಿನ್ನಲ್ ಮುರಳಿ’ ಮಲಯಾಳಂ ಚಿತ್ರದ ಟ್ರೈಲರ್‌ ರಿಲೀಸ್ ಆಗಿದೆ. ನೆಟ್‌ಫ್ಲಿಕ್ಸ್‌’ನಲ್ಲಿ ಸ್ಟ್ರೀಮ್ ಆಗಲಿರುವ ಸಿನಿಮಾದಲ್ಲಿ ನಟ ಟೊವಿನೊ ಥಾಮಸ್‌ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ನೆಟ್‌ಫ್ಲಿಕ್ಸ್‌’ನಲ್ಲಿ ಕಾಣಿಸಿಕೊಳ್ಳುತ್ತಿರುವ ಮಾಲಿವುಡ್‌ನ ಮೊದಲ ಸೂಪರ್‌ಹೀರೋ ಎನ್ನುವ ಹೆಗ್ಗಳಿಕೆ ಅವರದಾಗುತ್ತಿದೆ. ಇದು ತೊಂಬತ್ತರ ದಶಕದ ಅವಧಿಯ ಚಿತ್ರಣವಿರುವ ಸಿನಿಮಾ. ಸಾಮಾನ್ಯ ಯುವಕನೊಬ್ಬ ಸಿಡಿಲು ಬಡಿದ ನಂತರ ಸೂಪರ್‌ಹೀರೋ ಆಗುವ ವಿಶಿಷ್ಟ ಕತೆ. ಚಿತ್ರದಲ್ಲಿ ಅವರೊಂದಿಗೆ ಗುರು ಸೋಮಸುಂದರಂ, ಹರಿಶ್ರೀ ಅಶೋಕನ್‌, ಅಜು ವರ್ಗಿಸ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ.

ವೀಕೆಂಡ್ ಬ್ಲಾಕ್‌ಬಸ್ಟರ್ಸ್‌ ನಿರ್ಮಿಸಿರುವ ಚಿತ್ರ ಮಲಯಾಳಂ ಭಾಷೆಯಲ್ಲಿ ಮಾತ್ರವಲ್ಲದೆ ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ ಅವತರಣಿಕೆಗಳಲ್ಲೂ ಸ್ಟ್ರೀಮ್ ಆಗಲಿದೆ. “ನಾನು ಸೂಪರ್‌ಹೀರೋಗಳ ಬಹುದೊಡ್ಡ ಅಭಿಮಾನಿ. ಕಾಮಿಕ್ ಬುಕ್‌ಗಳಿಂದ ಸೂಪರ್‌ಹೀರೋ ಸಿನಿಮಾಗಳವರೆಗೆ ಸೂಪರ್‌ಹೀರೋಗಳು ನನ್ನನ್ನು ಬಹುವಾಗಿ ಕಾಡಿದ್ದಾರೆ. ದೇಸಿ ಸೂಪರ್‌ಹೀರೋ ಸೃಷ್ಟಿಸುವ ನನ್ನ ಕಸನು ‘ಮಿನ್ನಲ್ ಮುರಳಿ’ ಚಿತ್ರದ ಮೂಲಕ ಈಡೇರಿದೆ” ಎಂದಿದ್ದಾರೆ ನಿರ್ದೇಶಕ ಬೇಸಿಲ್ ಜೋಸೆಫ್‌. ಹೀರೋ ನೊವಿನೊ ಥಾಮಸ್‌ ಟ್ವಿಟರ್‌ನಲ್ಲಿ ಟ್ರೈಲರ್ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಇದೇ ಡಿಸೆಂಬರ್‌ 24ರಂದು ನೆಟ್‌ಫ್ಲಿಕ್ಸ್‌’ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.

LEAVE A REPLY

Connect with

Please enter your comment!
Please enter your name here