P R ಅರುಣ್‌ ನಿರ್ದೇಶನದ ‘ಫಾರ್ಮಾ’ ಮಲಯಾಳಂ ಸರಣಿಯಲ್ಲಿ ಖ್ಯಾತ ನಟ ನಿವಿನ್‌ ಪೌಲಿ ನಟಿಸಲಿದ್ದಾರೆ. ಇದು ಅವರ ಚೊಚ್ಚಲ ಓಟಿಟಿ ಪ್ರಾಜೆಕ್ಟ್‌. ಬಾಲಿವುಡ್‌ ನಟ ರಜಿತ್‌ ಕಪೂರ್‌ ಸರಣಿಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. DisneyPlus Hotstarನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

ಖ್ಯಾತ ಮಲಯಾಳಂ ನಟ ನಿವಿನ್ ಪೌಲಿ ತಮ್ಮ ಚೊಚ್ಚಲ OTT ಪದಾರ್ಪಣೆಗೆ ಸಜ್ಜಾಗಿದ್ದಾರೆ. ‘ಫೈನಲ್ಸ್’ ಮತ್ತು ‘ರಂಪುಂಥಾನವರುತಿ’ ಚಿತ್ರಗಳ ನಿರ್ದೇಶಕ PR ಅರುಣ್ ರಚನೆಯ ‘ಫಾರ್ಮಾ’ ಮಲಯಾಳಂ ಸರಣಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ‘ಕಾಯಂಕುಲಂ ಕೊಚುನ್ನಿ’, ‘ಬೆಂಗಳೂರು ಡೇಸ್’ ಮತ್ತು ‘ಪ್ರೇಮಂ’ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿರುವ ನಟ ನಿವಿನ್‌. ತಮ್ಮ OTT ಪ್ರವೇಶದ ಕುರಿತು ಮಾತನಾಡುವ ಅವರು, ‘ಫಾರ್ಮಾ ಸರಣಿಯ ಭಾಗವಾಗಲು ಮತ್ತು ಅದು ಸೃಷ್ಟಿಸುವ ಜಗತ್ತಿಗೆ ತೆರೆದುಕೊಳ್ಳಲು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಇದು ಎಲ್ಲರೊಂದಿಗೂ ಹಂಚಿಕೊಳ್ಳಬೇಕಾದ ಕತೆ ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

‘ನೂರಾರು ನೈಜ ಕಥೆಗಳಿಂದ ಸ್ಫೂರ್ತಿ ಪಡೆದಿರುವ ‘ಫಾರ್ಮಾ’ ನನ್ನ ಮನಸಿಗೆ ತೀರಾ ಹತ್ತಿರವಾದ ಕಥೆಯಾಗಿದೆ’ ಎನ್ನುವುದು ಸರಣಿಯ ನಿರ್ದೇಶಕ P R ಅರುಣ್ ಮಾತು. ಖ್ಯಾತ ಬಾಲಿವುಡ್ ನಟ ರಜಿತ್ ಕಪೂರ್ ಸರಣಿಯ ಪ್ರಮುಖ ಪಾತ್ರವೊಂದಲ್ಲಿ ನಟಿಸಲಿದ್ದಾರೆ. ಎರಡು ದಶಕಗಳ ನಂತರ ಅವರು ಈ ಸರಣಿ ಮೂಲಕ ಮಲಯಾಳಂಗೆ ಮರಳುತ್ತಿದ್ದಾರೆ. ‘ಅಗ್ನಿಸಾಕ್ಷಿ ಮಲಯಾಳಂ ಸಿನಿಮಾದಲ್ಲಿ ನಟಿಸಿ 25 ವರ್ಷಗಳಾಗಿವೆ. ‘ಫಾರ್ಮಾ’ ತಂಡ ಸೇರಲು ಉತ್ಸುಕನಾಗಿದ್ದೇನೆ. P R ಅರುಣ್ ಮತ್ತು ಕೇರಳದ ಈ ತಂಡದೊಂದಿಗೆ ಕೆಲಸ ಮಾಡಲು ಸಂತೋಷವಿದೆ’ ಎಂದಿದ್ದಾರೆ ರಜಿತ್‌. Movie Mill ಈ ಸರಣಿ ನಿರ್ಮಿಸುತ್ತಿದ್ದು, ಅಭಿನಂದನ್ ರಾಮಾನುಜಂ ಛಾಯಾಗ್ರಾಹಣ ಮಾಡುತ್ತಿದ್ದಾರೆ. ಜೇಕ್ಸ್ ಬಿಜಾಯ್ ಸಂಗೀತ ಸಂಯೋಜನೆ, ಶ್ರೀಜಿತ್ ಸಾರಂಗ್ ಸಂಕಲನ ಸರಣಿಗಿದೆ. DisneyPlus Hotstarನಲ್ಲಿ ಸರಣಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here