ನೆಟ್‌ಫ್ಲಿಕ್ಸ್‌ ಇಂದು ‘ಮಿನ್ನಲ್‌ ಮುರಳಿ’ ಮಲಯಾಳಂ ಸೂಪರ್ ಹೀರೋ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದೆ. ಬೇಸಿಲ್ ಜೋಸೆಫ್ ನಿರ್ದೇಶನದಲ್ಲಿ ಟೊವಿನೊ ಥಾಮಸ್‌ ಶೀರ್ಷಿಕೆ ಪಾತ್ರದಲ್ಲಿ ನಟಿಸಿರುವ ಸಿನಿಮಾ ಇದೇ ಡಿಸೆಂಬರ್‌ 24ರಿಂದ ಸ್ಟ್ರೀಮ್ ಆಗಲಿದೆ.

ಈ ಹಿಂದೆ ನೆಟ್‌ಫ್ಲಿಕ್ಸ್‌ ಬಿಡುಗಡೆ ಮಾಡಿದ್ದ ‘ಮಿನ್ನಲ್‌ ಮುರಳಿ’ ಸಿನಿಮಾದ ಟ್ರೈಲರ್‌, ಟೀಸರ್‌ಗಳು ಇದೊಂದು ತಮಾಷೆಯ ಕತೆ ಎನ್ನುವಂತೆ ಬಿಂಬಿಸಿದ್ದರು. ಈಗಿನ ಟ್ರೈಲರ್ ನೋಡಿದಾಗ ಸಿನಿಮಾಗೆ ಬೇರೆಯದ್ದೇ ಆಯಾಮ ಇರುವಂತೆ ತೋರುತ್ತದೆ. ಇಲ್ಲಿ ನಮಗೆ ಚಿತ್ರದ ವಿಲನ್ ಕಾಣಿಸುವುದಿಲ್ಲ. ಆದರೆ ಹಿನ್ನೆಲೆಯಲ್ಲಿನ ಕರ್ಕಶ ಧ್ವನಿ ಭೀತಿಯನ್ನುಂಟುಮಾಡುತ್ತದೆ. ದುಷ್ಟರಿಂದ ಹಾನಿಗೀಡಾಗುವ ತನ್ನೂರು, ಜನರನ್ನು ರಕ್ಷಿಸುವ ಸೂಪರ್‌ ಹೀರೋ ಆಗಿ ಟೊವಿನೊ ಥಾಮಸ್‌ ಕಾಣಿಸಿಕೊಂಡಿದ್ದಾರೆ. ಈ ಮೂಲಕ ನೆಟ್‌ಫ್ಲಿಕ್ಸ್‌’ನಲ್ಲಿ ಕಾಣಿಸಿಕೊಳ್ಳುತ್ತಿರುವ ಮಾಲಿವುಡ್‌ನ ಮೊದಲ ಸೂಪರ್‌ಹೀರೋ ಎನ್ನುವ ಹೆಗ್ಗಳಿಕೆ ಅವರದಾಗಿದೆ.

ಇದು ತೊಂಬತ್ತರ ದಶಕದ ಅವಧಿಯ ಚಿತ್ರಣವಿರುವ ಸಿನಿಮಾ. ಸಾಮಾನ್ಯ ಯುವಕನೊಬ್ಬ ಸಿಡಿಲು ಬಡಿದ ನಂತರ ಸೂಪರ್‌ಹೀರೋ ಆಗುವ ವಿಶಿಷ್ಟ ಕತೆ. ಚಿತ್ರದಲ್ಲಿ ಅವರೊಂದಿಗೆ ಗುರು ಸೋಮಸುಂದರಂ, ಹರಿಶ್ರೀ ಅಶೋಕನ್‌, ಅಜು ವರ್ಗಿಸ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ವೀಕೆಂಡ್ ಬ್ಲಾಕ್‌ಬಸ್ಟರ್ಸ್‌ ನಿರ್ಮಿಸಿರುವ ಚಿತ್ರ ಮಲಯಾಳಂ ಭಾಷೆಯಲ್ಲಿ ಮಾತ್ರವಲ್ಲದೆ ತಮಿಳು, ಕನ್ನಡ, ತೆಲುಗು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ ಅವತರಣಿಕೆಗಳಲ್ಲೂ ಪ್ರೇಕ್ಷಕರಿಗೆ ಸಿಗಲಿದೆ. ಇದೇ ಡಿಸೆಂಬರ್‌ 24ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ.

LEAVE A REPLY

Connect with

Please enter your comment!
Please enter your name here