ತಾಪ್ಸಿ ಪನ್ನು ಶೀರ್ಷಿಕೆ ಪಾತ್ರ ನಿರ್ವಹಿಸಿರುವ ಕ್ರಿಕೆಟರ್ ಮಿಥಾಲಿ ರಾಜ್ ಬಯೋಪಿಕ್ ಸಿನಿಮಾ ‘ಶಬಾಷ್’ ಟ್ರೈಲರ್ ಬಿಡುಗಡೆಯಾಗಿದೆ. ಮಿಥಾಲಿ ಸಾಧನೆಯ ಜೊತೆಗೆ ಭಾರತೀಯ ಮಹಿಳಾ ಕ್ರಿಕೆಟ್ ಬೆಳೆದು ಬಂದ ಹಾದಿಯನ್ನೂ ಸಿನಿಮಾ ಹೇಳಲಿದೆ ಎನ್ನುವ ಸೂಚನೆ ಸಿಗುತ್ತದೆ.
ತಾಪ್ಸಿ ಪನ್ನು ಅಭಿನಯದ ‘ಶಭಾಷ್ ಮಿಥು’ ಹಿಂದಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಭಾರತೀಯ ಮಹಿಳಾ ಕ್ರಿಕೆಟ್ ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್ ಬಯೋಪಿಕ್ ಹಿಂದಿ ಚಿತ್ರವಿದು. 23 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಅವರದು. ಏಕದಿನ ಪಂದ್ಯಗಳಲ್ಲಿ ಹತ್ತು ಸಾವಿರ ರನ್ ಗಡಿ ದಾಟಿದ ಸಾಧಿಕಿ. ಹಲವು ದಾಖಲೆಗಳ ಮಿಥಾಲಿ ಬದುಕು – ಸಾಧನೆ ಹೇಳುವ ಸಿನಿಮಾ ‘ಶಭಾಷ್ ಮಿಥು’. ಹಲವು ಅಡೆತಡೆಗಳು, ಅಪಮಾನಗಳನ್ನು ಎದುರಿಸಿ ಸಾಧನೆಯ ಮಟ್ಟಿಲುಗಳನ್ನು ಹತ್ತಿದ ಮಿಥಾಲಿ ಬದುಕು ಟ್ರೈಲರ್‌ನಲ್ಲಿ ಅನಾವರಣಗೊಂಡಿದೆ. ಮಿಥಾಲಿ ಕ್ರಿಕೆಟ್ ಕೋಚ್ ಆಗಿ ವಿಜಯ್ ರಾಝ್ ನಟಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. Viacom 18 Studios ನಿರ್ಮಾಣದ ಚಿತ್ರವನ್ನು ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕವಿನ್ನೂ ನಿಗಧಿಯಾಗಿಲ್ಲ.