ಭರತ್‌ ನಿರ್ದೇಶನದಲ್ಲಿ ವಿವೇಕ್‌ ಸಿಂಹ ಮತ್ತು ಖುಷಿ ನಟಿಸಿರುವ ‘ಸ್ಪೂಕಿ ಕಾಲೇಜ್‌’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಫಸ್ಟ್‌ಲುಕ್‌ ಪೋಸ್ಟರ್‌ನಲ್ಲೇ ಭರವಸೆ ಮೂಡಿಸಿದ್ದ ಸಿನಿಮಾ ಈಗ ಟೀಸರ್‌ ಮೂಲಕ ನಿರೀಕ್ಷೆ ಹೆಚ್ಚಿಸಿದೆ.

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಸೈಕಾಲಾಜಿಕಲ್‌ ಹಾರರ್‌ – ಥ್ರಿಲ್ಲರ್‌ ತೆರೆಗೆ ಬರಲು ಸಜ್ಜಾಗಿದೆ. ಚಿತ್ರ ಶುರುವಾದಾಗಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿತ್ತು. ಟೀಸರ್ ಚಿತ್ರದ ಕುರಿತಾದ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ನಟ ಧನಂಜಯ್ ಸೇರಿದಂತೆ ಚಿತ್ರರಂಗದ ಹಲವರು ಟೀಸರ್ ಬಗ್ಗೆ ಟ್ವೀಟ್‌ ಮಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ. ಕಾಲೇಜ್‌ ಹಿನ್ನೆಲೆಯಲ್ಲಿ ಹಾರರ್‌ ಕತೆ ಹೇಳುತ್ತಿರುವುದು ಈ ಸಿನಿಮಾದ ವಿಶೇಷ. ಧಾರಾವಾಡದ ನೂರು ವರ್ಷಕ್ಕೂ ಹೆಚ್ಚು ಹಳೆಯ ಕಾಲೇಜು ಮತ್ತು ದಾಂಡೇಲಿ ಅರಣ್ಯ ಪ್ರದೇಶದಲ್ಲಿ ಸಿನಿಮಾದ ಬಹುಪಾಲು ಚಿತ್ರೀಕರಣ ನಡೆದಿದೆ. ಪೋಸ್ಟ್‌ ಪ್ರೊಡಕ್ಷನ್ಸ್ ಕೆಲಸ‌ಗಳು ಬಿರುಸಿನಿಂದ ಸಾಗಿದ್ದು, ಶೀಘ್ರ ಚಿತ್ರ ತೆರೆಗೆ ಬರಲಿದೆ. ‘ರಂಗಿತರಂಗ’ , ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳ ನಿರ್ಮಾಪಕ ಹೆಚ್.ಕೆ.ಪ್ರಕಾಶ್ ಈ ಚಿತ್ರವನ್ನು ನಿರ್ಮಿಸಿದ್ದು ಭರತ್‌ ಕತೆ, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ‘ಪ್ರೀಮಿಯರ್ ಪದ್ಮಿನಿ’ ಖ್ಯಾತಿಯ ವಿವೇಕ್ ಸಿಂಹ ‘ಸ್ಪೂಕಿ ಕಾಲೇಜ್’ ಹೀರೋ. ‘ದಿಯಾ’ ಸಿನಿಮಾ ಮೂಲಕ ಹೆಸರಾಗಿರುವ ಖುಷಿ ರವಿ ನಾಯಕಿ. ಅಜಯ್ ಪೃಥ್ವಿ, ಹನುಮಂತೇ ಗೌಡ, ಕೆ.ಎಸ್.ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ ಪ್ರಮುಖ ಪಾತ್ರಧಾರಿಗಳು.

LEAVE A REPLY

Connect with

Please enter your comment!
Please enter your name here