ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶಿಸುತ್ತಿರುವ ‘ಎಂಪುರಾನ್‌’ ಮಲಯಾಳಂ ಸಿನಿಮಾದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ. 2019ರ ಯಶಸ್ವೀ ‘ಲೂಸಿಫರ್‌’ ಸಿನಿಮಾದ ಸರಣಿಯಿದು.

ಮೋಹನ್‌ ಲಾಲ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಎಂಪುರಾನ್’ ಮಲಯಾಳಂ ಚಿತ್ರದ ಫಸ್ಟ್‌ಲುಕ್‌ ಫೋಸ್ಟರ್‌ ಬಿಡುಗಡೆಯಾಗಿದೆ. ಈ ಚಲನಚಿತ್ರವು ಮಾರ್ಚ್‌ 28, 2019ರಲ್ಲಿ ತೆರೆಕಂಡು ಜನಪ್ರಿಯತೆ ಗಳಿಸಿದ್ದ ‘ಲೂಸಿಫರ್‌’ ಚಿತ್ರದ ಸರಣಿ. ‘ಲೂಸಿಫರ್‌’ ನಿರ್ದೇಶಿಸಿದ್ದ ನಟ, ನಿರ್ದೇಶಕ ಪೃಥ್ವಿರಾಜ್‌ ಸುಕುಮಾರನ್‌ ಅವರೇ ‘ಎಂಪುರಾನ್’ ನಿರ್ದೇಶಿಸುತ್ತಿದ್ದಾರೆ. ಫೋಸ್ಟರ್‌ನಲ್ಲಿ ಮೋಹನ್‌ ಲಾಲ್‌ ಗನ್‌ ಹಿಡಿದು ನಿಂತಿದ್ದಾರೆ. ಅವರ ಸುತ್ತಲೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಅವರ ಮುಂದೆ ಯುದ್ದ ವಿಮಾನವೊಂದು ಕಾಣಿಸಿಕೊಂಡಿದೆ. ಚಿತ್ರದಲ್ಲಿ ಮೋಹನ್ ಲಾಲ್ ಜೊತೆಗೆ ಮಂಜು ವಾರಿಯರ್, ಟೊವಿನೋ ಥಾಮಸ್ ಮತ್ತು ಇಂದ್ರಜಿತ್ ಸುಕುಮಾರನ್ ತಮ್ಮ ಪಾತ್ರಗಳನ್ನು ಪುನರಾವರ್ತಿಸಲಿದ್ದಾರೆ.

ಮಲಯಾಳಂ ಯಶಸ್ಸಿ ಚಿತ್ರಗಳಲ್ಲಿ ಒಂದಾದ ‘ಲೂಸಿಫರ್’ ಸಿನಿಮಾವನ್ನು ತೆಲುಗಿನಲ್ಲಿ ‘ಗಾಡ್‌ಫಾದರ್’ ಶೀರ್ಷಿಕೆಯಡಿ ರೀಮೇಕ್‌ ಮಾಡಲಾಗಿತ್ತು. ಚಿತ್ರದಲ್ಲಿ ಚಿರಂಜೀವಿ, ನಯನತಾರಾ ಮತ್ತು ಸಲ್ಮಾನ್ ಖಾನ್ ನಟಿಸಿದ್ದರು. Lyca Productions ಬ್ಯಾನರ್‌ ಅಡಿಯಲ್ಲಿ ಸುಭಾಸ್ಕರನ್‌ ನಿರ್ಮಿಸುತ್ತಿರುವ ಈ ಸಿನಿಮಾವು ಮೂಲ ಮಲಯಾಳಂ ಸೇರಿದಂತೆ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಇನ್ನು ಮೋಹನ್‌ ಲಾಲ್‌ ಅವರ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಲಿಜೋ ಜೋಸ್ ಪೆಲ್ಲಿಸ್ಸೆರಿಯವರ ‘ಮಲೈಕೊಟ್ಟೈ ವಾಲಿಬನ್’ ಮತ್ತು ಬ್ಯಾರೋಜ್ ಅವರ ‘ಗಾರ್ಡಿಯನ್ ಆಫ್ ಟ್ರೆಶರ್ಸ್’ ಚಿತ್ರ. ಇದು ಬ್ಯಾರೋಜ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ.

LEAVE A REPLY

Connect with

Please enter your comment!
Please enter your name here