ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ಚಿತ್ರದ ‘ಶ್ರೀವಳ್ಳಿ’ ಲಿರಿಕಲ್ ವೀಡಿಯೋ ಬಿಡುಗಡೆಯಾಗಿದೆ. ಹಾಡಿನಲ್ಲಿ ಇಬ್ಬರ ಪಾತ್ರಗಳ ಚಿತ್ರಣ ಅನಾವರಣಗೊಂಡಿದೆ. ಸುಕುಮಾರ್ ನಿರ್ದೇಶನದ ಸಿನಿಮಾ ಡಿಸೆಂಬರ್‌ 17ರಂದು ತೆರೆಕಾಣಲಿದೆ.

ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ’ ತೆಲುಗು ಚಿತ್ರದ ಎರಡನೇ ಹಾಢನ್ನು ಚಿತ್ರತಂಡ ಇಂದು ಬಿಡಗಡೆಗೊಳಿಸಿದೆ. ಸುಕುಮಾರ್‌ ನಿರ್ದೇಶನದ ಈ ತೆಲುಗು ಸಿನಿಮಾ ಟಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಮಲಯಾಳಂ ನಟ ಫಹದ್‌ ಫಾಸಿಲ್‌ ಚಿತ್ರದಲ್ಲಿ ಖಳಪಾತ್ರದಲ್ಲಿ ನಟಿಸಿದ್ದು ಕನ್ನಡದ ಧನಂಜಯ ಅವರಿಗೂ ಪ್ರಮುಖ ಪಾತ್ರವಿದೆ. ಸುದೀರ್ಘ ಅವಧಿಯ ಚಿತ್ರೀಕರಣ ನಡೆದು ಸಿನಿಮಾ ಈಗ ತೆರೆಗೆ ಸಿದ್ಧವಾಗಿದೆ. ಇಂದು ಚಿತ್ರದ ಎರಡನೇ ಹಾಡು ‘ಶ್ರೀವಳ್ಳಿ’ ಬಿಡುಗಡೆಯಾಗಿದ್ದು, ಚಿತ್ರದ ತಾರೆಯರು ಟ್ವಿಟರ್‌ನಲ್ಲಿ ಹಾಡು ಹಂಚಿಕೊಂಡು ಅಭಿಮಾನಿಗಳ ಹಾರೈಕೆ ಬೇಡಿದ್ದಾರೆ.

ಲಿರಿಕಲ್ ವೀಡಿಯೋದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಪಾತ್ರಗಳ ಚಿತ್ರಣ ಕಂಡುಬರುತ್ತದೆ. ಮೈತ್ರಿ ಮೂವೀ ಮೇಕರ್ಸ್‌ ಮತ್ತು ಮುತ್ತಮ್ ಸೆಟ್ಟಿ ಮೀಡಿಯಾ ನಿರ್ಮಾಣದಲ್ಲಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಾವ್ ರಮೇಶ್‌, ಅಜಯ್ ಘೋಷ್‌, ಅನಸೂಯ ಭಾರದ್ವಾಜ್‌ ನಟಿಸಿದ್ದಾರೆ. ಸಂಗೀತ ಸಂಯೋಜನೆ ದೇವಿಶ್ರೀಪ್ರಸಾದ್. ಡಿಸೆಂಬರ್‌ 17ರಂದು ಚಿತ್ರ ತೆರೆಕಾಣಲಿದೆ. ಮೂಲ ತೆಲುಗು ಜೊತೆಗೆ ಕನ್ನಡ, ಮಲಯಾಳಂ, ತಮಿಳು ಮತ್ತು ಹಿಂದಿ ಭಾಷೆಗಳಲ್ಲೂ ಡಬ್ಬಿಂಗ್ ಅವತರಣಿಕೆಗಳು ಬಿಡುಗಡೆಯಾಗಲಿವೆ.

LEAVE A REPLY

Connect with

Please enter your comment!
Please enter your name here