ಜಾಗತಿಕ ಓಟಿಟಿ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ ನಿರ್ಮಿಸಲಿರುವ ಮಲಯಾಳಂ ಆಂಥಾಲಜಿ ಸರಣಿಯಲ್ಲಿ ಮುಮ್ಮೂಟಿ, ಮೋಹನ್‌ಲಾಲ್‌, ಫಹಾದ್‌ ಫಾಸಿಲ್‌ ಸೇರಿದಂತೆ ಪ್ರಮುಖ ಮಲಯಾಳಂ ತಾರೆಯರು ಅಭಿನಯಿಸಲಿದ್ದಾರೆ. ಜನಪ್ರಿಯ ಸಾಹಿತಿ ಎಂ.ಟಿ.ವಾಸುದೇವನ್‌ ನಾಯರ್‌ ಅವರ ರಚನೆಯ ಸಣ್ಣ ಕತೆಗಳನ್ನು ಆಧರಿಸಿ ಸರಣಿ ತಯಾರಾಗಲಿದೆ.

ಆಂಥಾಲಜಿ ಸರಣಿಯಲ್ಲಿ ಮಲಯಾಳಂ ಸಿನಿಮಾರಂಗದ ಮೇರು ತಾರೆಯರನ್ನು ಒಂದೆಡೆ ಸೇರಿಸಲು ಹೊರಟಿದೆ ನೆಟ್‌ಫ್ಲಿಕ್ಸ್‌. ಮಲಯಾಳಂ ಸಾಹಿತಿ ಎಂ.ಟಿ.ವಾಸುದೇವನ್‌ ನಾಯರ್‌ ಅವರ ಸಣ್ಣ ಕತೆಗಳನ್ನು ಆಧರಿಸಿ ಆಂಥಾಲಜಿ ತಯಾರಾಗಲಿದೆ. ಮುಮ್ಮೂಟಿ, ಮೋಹನ್‌ಲಾಲ್‌, ಫಹಾದ್‌ ಫಾಸಿಲ್‌, ಅಸಿಫ್‌ ಅಲಿ, ಶಾಂತಿ ಕೃಷ್ಣ ಸೇರಿದಂತೆ ಪ್ರಮುಖ ತಾರೆಯರು ನಟಿಸಲಿದ್ಧಾರೆ. ಈ ಸರಣಿಯ ಕತೆಗಳನ್ನು ನಿರ್ದೇಶಿಸಲು ಅಲ್ಲಿನ ದೊಡ್ಡ ನಿರ್ದೇಶಕರನ್ನು ಸಂಪರ್ಕಿಸಲಾಗಿದೆ. ಲಿಜೋ ಜೋಸ್‌ ಪೆಲ್ಲಿಸೆರಿ, ಪ್ರಿಯದರ್ಶನ್‌, ಜಯರಾಜ್‌, ಶ್ಯಾಂಪ್ರಸಾದ್‌, ಸಂತೋಷ್‌ ಶಿವನ್‌, ಮಹೇಶ್‌ ನಾರಾಯಣನ್‌ ಈ ಆಂಥಾಲಜಿ ಕತೆಗಳನ್ನು ನಿರ್ದೇಶಿಸುವ ಸಾಧ್ಯತೆಗಳಿವೆ.

ಮುಮ್ಮುಟಿ ನಟಿಸಲಿರುವ ಕಿರುಚಿತ್ರವನ್ನು ಲಿಜೋ ಜೋಸ್‌ ಪೆಲ್ಲಿಸೆರಿ ನಿರ್ದೇಶಿಸಲಿದ್ದಾರೆ. ನಿರ್ದೇಶಕ ಪ್ರಿಯದರ್ಶನ್‌ ಅವರು 1960ರ ಕೃತಿ ‘ಒಲವಂ ತೀರವಂ’ ಆಧರಿಸಿ ಕಿರುಚಿತ್ರ ಮಾಡುವ ಸೂಚನೆ ಸಿಕ್ಕಿದೆ. ಖ್ಯಾತ ನಟ, ನಿರ್ದೇಶಕ ಕಮಲ್‌ ಹಾಸನ್‌ ಈ ಆಂಥಾಲಜಿ ಪ್ರಸೆಂಟ್‌ ಮಾಡಲಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ನೆಟ್‌ಫ್ಲಿಕ್ಸ್‌ನ ಅಧಿಕೃತ ಸೂಚನೆ ಸದ್ಯದಲ್ಲೇ ಹೊರಬೀಳಲಿದೆ. ಈ ಹಿಂದೆ ನೆಟ್‌ಫ್ಲಿಕ್ಸ್‌ ತಮಿಳು – ತೆಲುಗು ಭಾಷೆಗಳಲ್ಲಿ ಈ ಪ್ರಯೋಗ ನಡೆಸಿತ್ತು. ಕಳೆದ ವರ್ಷ ಸ್ಟ್ರೀಮ್‌ ಆಗಿದ್ದ ‘ನವರಸ’ ಆಂಥಾಲಜಿಯಲ್ಲಿ ಜನಪ್ರಿಯ ನಟರಾದ ಸೂರ್ಯ, ವಿಜಯ್‌ ಸೇತುಪತಿ, ಸಿದ್ದಾರ್ಥ್‌, ರೇವತಿ, ಪಾರ್ವತಿ ತಿರುವೊಟ್ಟು, ಪ್ರಜ್ಞಾ ಮಾರ್ಟಿನ್‌ ನಟಿಸಿದ್ದರು.

LEAVE A REPLY

Connect with

Please enter your comment!
Please enter your name here