ವಿಜಯ ರಾಘವೇಂದ್ರ ಅವರ ‘ಜೋಗ್‌ 101’ ಸಿನಿಮಾದ ‘ಮುಂಜಾನೆ ಮಂಜನ್ನು’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಡಾ ವಿ ನಾಗೇಂದ್ರಪ್ರಸಾದ್‌ ರಚನೆಯ ಹಾಡಿಗೆ ಅವಿನಾಶ್‌ ಆರ್‌ ಬಾಸೂತ್ಕರ್‌ ಸಂಗೀತ ಸಂಯೋಜಿಸಿದ್ದು ರಘು ದೀಕ್ಷಿತ್‌ ಹಾಡಿದ್ದಾರೆ.

ವಿಜಯ್‌ ಕನ್ನಡಿಗ ನಿರ್ದೇಶನದ ‘ಜೋಗ್‌ 101’ ಸಿನಿಮಾದ ಮೊದಲ ಲಿರಿಕಲ್‌ ಸಾಂಗ್‌ ‘ಮುಂಜಾನೆ ಮಂಜನ್ನು’ ಬಿಡುಗಡೆಯಾಗಿದೆ. ಅವಿನಾಶ್ ಆರ್ ಬಾಸೂತ್ಕರ್ ಸಂಗೀತ ನಿರ್ದೇಶನವಿರುವ ಹಾಡಿಗೆ ಡಾ ವಿ ನಾಗೇಂದ್ರಪ್ರಸಾದ್ ಸಾಹಿತ್ಯವಿದ್ದು, ಖ್ಯಾತ ಗಾಯಕ ರಘುದೀಕ್ಷಿತ್ ಹಾಡಿದ್ದಾರೆ. ಈ ಹಾಡಿನ ಇಂಗ್ಲೀಷ್ ಭಾಷಾಂತರವನ್ನು ಸುಮನ್ ಜಾದೂಗಾರ್ ಮಾಡಿದ್ದಾರೆ. ನಿರ್ಮಾಪಕ ಮತ್ತು ಕ್ರಿಯೇಟಿವ್ ಡೈರೆಕ್ಟರ್ ರಾಘು ಅವರ ಸೆವೆನ್ ಸ್ಟಾರ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವಿದು. ವಿಜಯ ರಾಘವೇಂದ್ರ ಮತ್ತು ತೇಜಸ್ವಿನಿ ಶೇಖರ್‌ ಚಿತ್ರದ ಮುಖ್ಯಭೂಮಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸುನೀತ್ ಹಲಗೇರಿ ಛಾಯಾಗ್ರಹಣ, ಮೋಹನ್ ರಂಗಕಹಳೆ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಕಲೈ ಮಾಸ್ಟರ್ ನೃತ್ಯ ನಿರ್ದೇಶನವಿದೆ. ಗೋವಿಂದೇ ಗೌಡ, ಕಡ್ಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here