ಗೋವಾ ಪ್ರವಾಸದಲ್ಲಿದ್ದ ದಿಗಂತ್‌ ಸೋಮರ್‌ ಸಾಲ್ಟ್‌ ಪಲ್ಟಿ ಹೊಡೆಯುವಾಗ ಕುತ್ತಿಗೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು. ಬೆಂಗಳೂರು ಮಣಿಪಾಲ್‌ ಹಾಸ್ಪಿಟೆಲ್‌ನಲ್ಲಿ ಅವರು ಚಿಕಿತ್ಸೆಯಲ್ಲಿದ್ದಾರೆ. ಹೆಚ್ಚಿನ ಅಪಾಯವಿಲ್ಲ ಎಂದಿದ್ದಾರೆ ನಟನ ತಂದೆ.

ಸ್ಯಾಂಡಲ್‌ವುಡ್‌ ನಟ ದಿಗಂತ್‌ ಅವರಿಗೆ ಬೆಂಗಳೂರಿನ ಮಣಿಪಾಲ್‌ ಹಾಸ್ಪೆಟಲ್‌ನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಕುಟುಂಬದೊಂದಿಗೆ ಗೋವಾದಲ್ಲಿದ್ದ ದಿಗಂತ್‌ ಸಮುದ್ರ ತಟದಲ್ಲಿ ಸೋಮರ್‌ ಸಾಲ್ಟ್‌ ಪಲ್ಟಿ ಹೊಡೆಯುವ ಸಂದರ್ಭದಲ್ಲಿ ಕುತ್ತಿಗೆಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದರು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಒದಗಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೆಲಿಕಾಪ್ಟರ್‌ ಮೂಲಕ ಅವರನ್ನು ಬೆಂಗಳೂರಿನ ಮಣಿಪಾಲ್‌ ಹಾಸ್ಪೆಟಲ್‌ಗೆ ಕರೆತರಲಾಗಿತ್ತು. ಸದ್ಯ ಅವರು ಚಿಕಿತ್ಸೆಯಲ್ಲಿದ್ದಾರೆ. ವೈದ್ಯರು ನಟನ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಮಾಡಿದ್ದು, ಹೆಚ್ಚಿನ ತೊಂದರೆ ಇಲ್ಲ ಎಂದು ತಿಳಿಸಿದ್ದಾರೆ. ದಿಗಂತ್‌ ತಂದೆ ಕೃಷ್ಣಮೂರ್ತಿ ಅವರು ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, “ಇದೊಂದು ಆಕಸ್ಮಿಕ ಘಟನೆ. ದಿಗಂತ್‌ ಕುತ್ತಿಗೆಗೆ ಏಟು ಬಿದ್ದಿದ್ದು ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ಹೇಳುತ್ತಿದ್ದಾರೆ. ವೈದ್ಯರ ಮಾಹಿತಿಯನ್ವಯ ಅವರಿಗೆ ಹೆಚ್ಚಿನ ತೊಂದರೆ ಇಲ್ಲ. ನಾಲ್ಕು ದಿನಗಳಲ್ಲೇ ಅವರು ಓಡಾಡುವಂತಾಗುತ್ತಾರೆ” ಎಂದಿದ್ದಾರೆ. ಚಿತ್ರನಿರ್ದೇಶಕ ಯೋಗರಾಜ್‌ ಭಟ್‌ ಸೇರಿದಂತೆ ಹಲವರು ಆಸ್ಪತ್ರೆಗೆ ಭೇಟಿ ನೀಡಿ ನಟನ ಆರೋಗ್ಯ ವಿಚಾರಿಸಿದರು.

Previous article‘ಆರ್ಕೇಸ್ಟ್ರಾ, ಮೈಸೂರು!’ ಟ್ರೈಲರ್‌; ಧನಂಜಯ್‌ ಅಂಡ್‌ ಫ್ರೆಂಡ್ಸ್‌ ಸಿನಿಮಾ
Next articleಸೊನಾಲಿ ಬೇಂದ್ರೆಯ OTT ಅರಂಗೇಟ್ರಂ ‘ದ ಬ್ರೋಕನ್ ನ್ಯೂಸ್’

LEAVE A REPLY

Connect with

Please enter your comment!
Please enter your name here