ಹೋಮಿ ಅದಾಜಾನಿಯಾ ನಿರ್ದೇಶನದ ‘ಮರ್ಡರ್ ಮುಬಾರಕ್’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಸಾರಾ ಅಲಿ ಖಾನ್‌, ಕರಿಷ್ಮಾ ಕಪೂರ್‌, ಪಂಕಜ್‌ ತ್ರಿಪಾಠಿ, ವಿಜಯ್‌ ವರ್ಮ ಸಿನಿಮಾದ ಇತರೆ ಪ್ರಮುಖ ಕಲಾವಿದರು. ಮಾರ್ಚ್‌ 15ರಿಂದ ಸಿನಿಮಾ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

ಸಾರಾ ಅಲಿ ಖಾನ್ ಮತ್ತು ಕರಿಷ್ಮಾ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಮರ್ಡರ್ ಮುಬಾರಕ್’ ಹಿಂದಿ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಹಾರರ್, ಕಾಮಿಡಿ ಮತ್ತು ಥ್ರಿಲ್ಲರ್ ಚಲನಚಿತ್ರವನ್ನು ಹೋಮಿ ಅದಾಜಾನಿಯಾ ನಿರ್ದೇಶಿಸಿದ್ದಾರೆ. ಚಲನಚಿತ್ರವು ಐಷಾರಾಮಿ ಮನರಂಜನಾ ಕ್ಲಬ್‌ನಲ್ಲಿ ಸಂಭವಿಸುವ ಸಾವು ಮತ್ತು ಅದರ ಸುತ್ತಲೂ ನಡೆಯುವ ತನಿಖೆಯ ಕುರಿತು ಹೇಳಲಿದೆ. ಟ್ರೇಲರ್‌, ರಾಯಲ್ ದೆಹಲಿ ಕ್ಲಬ್‌ನ ಶ್ರೀಮಂತ ಸದಸ್ಯರ ಒಂದು ನೋಟವನ್ನು ನೀಡಿದೆ. ಪಂಕಜ್ ತ್ರಿಪಾಠಿ ಅವರು ಪೊಲೀಸ್‌ ಅಧಿಕಾರಿ ಭವಾನಿ ಸಿಂಗ್ ಆಗಿ ಕೊಲೆಯ ತನಿಖೆ ನಡೆಸುತ್ತಿರುವುದನ್ನು ಟ್ರೇಲರ್‌ನಲ್ಲಿ ಕಾಣಬಹುದು. ಚಿತ್ರವು ಅನುಜಾ ಚೌಹಾನ್ ಅವರ ‘ಕ್ಲಬ್ ಯು ಟು ಡೆತ್’ ಪುಸ್ತಕವನ್ನು ಅಧರಿಸಿದ್ದು, Maddock Films ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿದೆ.

ಸಿನಿಮಾದಲ್ಲಿ ಎಸಿಪಿ ಭವಾನಿ ಸಿಂಗ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ನಟಿಸಿದ್ದು, ಉಳಿದ ತಾರಾಗಣದಲ್ಲಿ ವಿಜಯ್ ವರ್ಮಾ, ಡಿಂಪಲ್ ಕಪಾಡಿಯಾ, ಸಂಜಯ್ ಕಪೂರ್, ಟಿಸ್ಕಾ ಚೋಪ್ರಾ ಮತ್ತು ಸುಹೇಲ್ ನಯ್ಯರ್ ಇದ್ದಾರೆ. ಕರಿಷ್ಮಾ ಕಪೂರ್‌ ಅವರು 2012ರಲ್ಲಿ ತೆರೆಕಂಡಿದ್ದ ‘ಡೇಂಜರಸ್ ಇಷ್ಕ್’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಜಿಮ್ಮಿ ಶೆರ್ಗಿಲ್‌, ರಜನೀಶ್ ದುಗ್ಗಲ್ ಮತ್ತು ದಿವ್ಯಾ ದತ್ತಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ಬಹುದಿನಗಳ ನಂತರ ಅವರು ತೆರೆಗೆ ಮರಳುತ್ತಿದ್ದು, ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಸಿನಿಮಾ ಮಾರ್ಚ್‌ 15ರಿಂದ Netflixನಲ್ಲಿ ಸ್ಟ್ರೀಮ್‌ ಆಗಲಿದೆ.

LEAVE A REPLY

Connect with

Please enter your comment!
Please enter your name here