ಕಲರ್ಸ್‌ ಕನ್ನಡ ವಾಹಿನಿಯ ‘ನಮ್ಮಮ್ಮ ಸೂಪರ್‌ಸ್ಟಾರ್‌’ ರಿಯಾಲಿಟಿ ಶೋ ಖ್ಯಾತಿಯ ಬಾಲಕಿ ಸಮನ್ವಿ ಸ್ಕೂಟರ್‌ ಅಪಘಾತದಲ್ಲಿ ಇಂದು ಸಾವನ್ನಪ್ಪಿದ್ಧಾಳೆ. ಸ್ಕೂಟರ್‌ ಓಡಿಸುತ್ತಿದ್ದ ಸಮನ್ವಿ ತಾಯಿ, ನಟಿ ಅಮೃತಾ ನಾಯ್ದು ಗಾಯಗೊಂಡಿದ್ದಾರೆ.

ಕಲರ್ಸ್‌ ಕನ್ನಡ ವಾಹಿನಿಯ ‘ನಮ್ಮಮ್ಮ ಸೂಪರ್‌ಸ್ಟಾರ್‌’ ರಿಯಾಲಿಟಿ ಶೋ ಖ್ಯಾತಿಯ ಪುಟಾಣಿ, ನಟಿ ಅಮೃತಾ ನಾಯ್ಡು ಪುತ್ರಿ ಸಮನ್ವಿ (6 ವರ್ಷ) ಇಂದು ಸಂಜೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಸಂಜೆ ಐದು ಗಂಟೆ ಸುಮಾರಿಗೆ ಪುತ್ರಿ ಸಮನ್ವಿ ಜೊತೆ ನಟಿ ಅಮೃತಾ ನಾಯ್ಡು ಸ್ಕೂಟರ್‌ನಲ್ಲಿ ಮನೆಗೆ ಮರಳುತ್ತಿದ್ದರು. ಕೋಣನಕುಂಟೆ ಬಳಿಯ ವಾಜರಹಳ್ಳಿ ಬಳಿ ಹಿಂಬದಿಯಿಂದ ಅವರ ಸ್ಕೂಟರ್‌ಗೆ ಲಾರಿಯೊಂದು ಢಿಕಿ ಹೊಡೆದಿದೆ. ಸಮನ್ವಿ ಸ್ಥಳದಲ್ಲೇ ಅಸುನೀಗಿದರೆ ತಾಯಿ ಅಮೃತಾ ಗಾಯಗೊಂಡಿದ್ಧಾರೆ. ಖ್ಯಾತ ಹರಿಕಥಾ ಕಲಾವಿದ ಗುರುರಾಜುಲು ನಾಯ್ಡು ಅವರ ಮೊಮ್ಮಗಳು ಅಮೃತಾ ನಾಯ್ಡು. ಕಿರುತೆರೆ ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದ ಅವರು ‘ನಮ್ಮಮ್ಮ ಸೂಪರ್‌ಸ್ಟಾರ್‌’ ರಿಯಾಲಿಟಿ ಶೋನಲ್ಲಿ ಪುತ್ರಿಯೊಂದಿಗೆ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು.

Previous articleಹಳ್ಳಿ ಹೈದನಾಗಿ ಅಜಯ್‌; ತೆರೆಗೆ ಬರಲು ಸಿದ್ಧವಾದ ‘ಶೋಕಿವಾಲ’
Next articleಬುದ್ಧಿವಂತಿಕೆ ಮತ್ತು ಹೃದಯವಂತಿಕೆಗಳ ನಡುವೆ…

LEAVE A REPLY

Connect with

Please enter your comment!
Please enter your name here