ರೋಷನ್‌ ಆಂಡ್ರ್ಯೂಸ್‌ ನಿರ್ದೇಶನದಲ್ಲಿ ದುಲ್ಕರ್‌ ಸಲ್ಮಾನ್‌ ನಟಿಸಿರುವ ‘ಸೆಲ್ಯೂಟ್‌’ ಮಲಯಾಳಂ ಸಿನಿಮಾ ರಾಟರ್‌ಡಾಮ್‌ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ದುಲ್ಕರ್‌ ಸಲ್ಮಾನ್‌ ನಿರ್ಮಾಣದ ಚಿತ್ರಕ್ಕೆ ಜನಪ್ರಿಯ ಬಾಬ್ಬಿ – ಸಂಜಯ್‌ ಜೋಡಿ ಚಿತ್ರಕಥೆ ರಚಿಸಿದ್ದಾರೆ.

ದುಲ್ಕರ್‌ ಸಲ್ಮಾನ್‌ ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ‘ಸೆಲ್ಯೂಟ್‌’ ಮಲಯಾಳಂ ಸಿನಿಮಾ 51ನೇ ರಾಟರ್‌ಡಾಮ್‌ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ನೆದರ್‌ಲ್ಯಾಂಡ್‌ನ ರಾಟರ್‌ಡಾಮ್‌ನಲ್ಲಿ ಇದೇ ಜನವರಿ 26ರಿಂದ ಫೆಬ್ರವರಿ 6ರವರೆಗೆ ಫಿಲ್ಮ್‌ ಫೆಸ್ಟಿವಲ್‌ ನಡೆಯಲಿದೆ. ರಾಜೀವ್‌ ರವಿ ನಿರ್ದೇಶನದ ‘ತುರಮುಖಂ’, ಡಾನ್‌ ಪಾಲತರಾ ಅವರ ‘ಎವರಿಥಿಂಗ್‌ ಈಸ್‌ ಸಿನಿಮಾ’ ಮಲಯಾಳಂ ಚಿತ್ರಗಳು ಇತ್ತೀಚಿನ ವರ್ಷಗಳಲ್ಲಿ ರಾಟರ್‌ಡಾಮ್‌ನಲ್ಲಿ ಪ್ರದರ್ಶನಗೊಂಡಿದ್ದವು. ಸನಲ್‌ ಕುಮಾರ್‌ ಸಸಿಧರನ್‌ ನಿರ್ದೇಶನದ ‘S ದುರ್ಗಾ’ ಮಲಯಾಳಂ ಸಿನಿಮಾ 2017ನೇ ಸಾಲಿನ ರಾಟರ್‌ಡಾಮ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಟೈಗರ್‌ ಅವಾರ್ಡ್‌ ಗೌರವಕ್ಕೆ ಪಾತ್ರವಾಗಿತ್ತು.

‘ಸೆಲ್ಯೂಟ್‌’ ಚಿತ್ರಕ್ಕೆ ಜನಪ್ರಿಯ ಬಾಬ್ಬಿ – ಸಂಜಯ್‌ ಜೋಡಿ ಚಿತ್ರಕಥೆ ರಚಿಸಿದ್ಧಾರೆ. ಯಶಸ್ವೀ ಟ್ರಾಫಿಕ್‌, ಆಯಲಮ್‌ ನಿಜನಮ್‌, ಥಮ್ಮಿಲ್‌, ಮುಂಬಯಿ ಪೊಲೀಸ್‌, ಹೌ ಓಲ್ಡ್‌ ಆರ್‌ ಯೂ, ಉಯರೆ ಚಿತ್ರಗಳಿಗೆ ಈ ಜೋಡಿ ಚಿತ್ರಕಥೆ ರಚಿಸಿದೆ. ಮುಂಬಯಿ ಪೊಲೀಸ್‌ ನಂತರ ಈ ಜೋಡಿ ಚಿತ್ರಕಥೆ ರಚಿಸಿರುವ ಎರಡನೇ ಪೊಲೀಸ್‌ ಕತೆಯ ಕುರಿತ ಚಿತ್ರವಿದು. ‘ಸೆಲ್ಯೂಟ್‌’ ಚಿತ್ರದೊಂದಿಗೆ ನಿರ್ದೇಶಕ ರೋಷನ್‌ ಆಂಡ್ರ್ಯೂಸ್‌ ಮತ್ತು ನಟ ದುಲ್ಕರ್‌ ಮೊದಲ ಬಾರಿಗೆ ಜೊತೆಯಾಗಿದ್ಧಾರೆ. ಈ ಇನ್ವೆಸ್ಟಿಗೇಟಿವ್‌ ಡ್ರಾಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಡಯಾನಾ ಪೆಂಟಿ, ಮನೋಜ್‌ ಕೆ ಜಯನ್‌, ಲಕ್ಷ್ಮೀ ಗೋಪಾಲಸ್ವಾಮಿ, ಸಾನಿಯಾ ಅಯ್ಯಪ್ಪನ್‌ ಇದ್ದಾರೆ. ನಟ ದುಲ್ಕರ್‌ ಸಲ್ಮಾನ್‌ ತಮ್ಮ ವೇಫರರ್‌ ಫಿಲ್ಮ್ಸ್‌ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಿಸಿದ್ದಾರೆ. ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here